‘ಅತ್ಯಾಚಾರ ಪ್ರಕರಣ ವರ್ಗಾವಣೆ ಇಲ್ಲ’

7

‘ಅತ್ಯಾಚಾರ ಪ್ರಕರಣ ವರ್ಗಾವಣೆ ಇಲ್ಲ’

Published:
Updated:

ಮುಂಬೈ (ಪಿಟಿಐ): ಕೆಳಗಿನ ನ್ಯಾಯಾ­ಲಯದಲ್ಲಿ ವಿಚಾರಣೆ ನಡೆ­ಯುತ್ತಿ­ರುವ ಶಕ್ತಿಮಿಲ್ಸ್‌ ಸಾಮೂಹಿಕ ಅತ್ಯಾ­ಚಾರ ಪ್ರಕರಣವನ್ನು ಬೇರೆಡೆಗೆ ವರ್ಗಾ­ಯಿಸಲು ಕೋರಿ ಸಲ್ಲಿಸಿದ್ದ ಅರ್ಜಿ­ಯನ್ನು ಬಾಂಬೆ ಹೈಕೋರ್ಟ್‌ ಶುಕ್ರ­ವಾರ ವಜಾಗೊಳಿಸಿದೆ. ಅಲ್ಲದೇ, ಈ ಅರ್ಜಿ ಕುರಿತು ಸೂಕ್ತ ಮಾಹಿತಿ ನೀಡು­ವಂತೆ ವಕೀಲರಿಗೆ ತಾಕೀತು ಮಾಡಿದೆ.‘ಸೆಷನ್ಸ್‌ ನ್ಯಾಯಾಲಯದಲ್ಲಿಯೇ ಈ ಪ್ರಕರಣ ತನಿಖೆಯಾಗಲಿ. ಇದನ್ನು ನಾವು ತಡೆಯುವುದಿಲ್ಲ’ ಎಂದು ಹೈಕೋರ್ಟ್‌ನ ರಜಾ ಕಾಲದ

ಪೀಠದ ನಾಯಮೂರ್ತಿ ಜಿ.ಎಸ್‌.­ಪಟೇಲ್‌ ಹೇಳಿದರು.ತನಿಖೆ ನಡೆಸುತ್ತಿರುವ ನ್ಯಾಯಾ­ಧೀಶರು ಪ್ರತಿವಾದಿಗಳ ಸಾಕ್‍ಷ್ಯಾಧಾರ­ಗಳನ್ನು ಸರಿಯಾಗಿ ಪರಿಗಣನೆಗೆ ತೆಗೆದು­ಕೊಳ್ಳುತ್ತಿಲ್ಲ. ಆದ್ದರಿಂದ ಈ ಪ್ರಕರಣ­ವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾ­ಯಿಸುವಂತೆ ಕೋರಿ ಆರೋಪಿ­ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.ಶಕ್ತಿಮಿಲ್ಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಹಮ್ಮದ್‌ ಅಶ್ಫಾಕ್‌ ಶೇಖ್‌, ಸಲೀಂ ಅನ್ಸಾರಿ ಮತ್ತು ವಿಜಯ್‌ ಜಾಧವ್‌ ಅವರು ಮುಖ್ಯ ನ್ಯಾಯಮೂರ್ತಿ ಮೋಹಿತ್‌ ಶಾಹ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನೇ ಅರ್ಜಿ­ಯನ್ನಾಗಿ ಪರಿಗಣಿಸಿ ವಿಚಾರಣೆ ನಡೆಸಿ ಎಂದು ಮುಖ್ಯ ನ್ಯಾಯಮೂರ್ತಿಗಳು ರಜಾ ಅವಧಿಯ ಪೀಠಕ್ಕೆ ವರ್ಗಾಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry