ಬುಧವಾರ, ಜನವರಿ 22, 2020
28 °C
ಮಕ್ಕಳ ಹಬ್ಬಕ್ಕೆ ಚಾಲನೆ * ಆಕರ್ಷಕ ನೃತ್ಯ ಪ್ರದರ್ಶನ

‘ಅಪರಾಧ ವೈಭವೀಕರಣ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದೃಶ್ಯ ಮಾಧ್ಯಮಗಳು ಅಪರಾಧ ಚಟುವಟಿಕೆಗಳನ್ನು ವೈಭ ವೀಕರಿಸುತ್ತಿರುವುದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಡಿವೈಎಸ್ಪಿ ಎಂ.ಎನ್. ರಾಮಲಿಂಗಪ್ಪ ವಿಷಾದಿಸಿದರು. ಧಾರವಾಡದ ರಾಜ್ಯ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ರಾಮನಗರದ ಜಾನಪದ ಲೋಕದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಪ್ರಸ್ತುತ ನಡೆಯು ತ್ತಿರುವ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊ ಳ್ಳುತ್ತಿದ್ದಾರೆ. ಆದ್ದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹ ಕಾರಿಯಾಗುವ ಕಾರ್ಯಕ್ರಮಗಳನ್ನು ಮಕ್ಕಳು ವೀಕ್ಷಿಸುವಂತೆ ನೋಡಿಕೊಳ್ಳಬೇ ಕಾದುದು ಪೋಷಕರ ಜವಾಬ್ದಾರಿ ಯಾಗಿದೆ ಎಂದು ಅವರು ತಿಳಿಸಿದರು.ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿ ಗಳಲ್ಲಿ ಅಡಗಿರುವ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯ ಪ್ರತಿಭೆ ಯನ್ನು ಹೊರಹಾಕಲು ಮಕ್ಕಳ ಹಬ್ಬ ದಂತಹ ವೇದಿಕೆ ಕಲ್ಪಿಸಿರುವುದು ಶ್ಲಾಘ ನೀಯ ಎಂದರು.ಬಾಲವಿಕಾಸ ಅಕಾಡೆಮಿ ಸದಸ್ಯ ರಾ.ಶಿ. ಬಸವರಾಜು ಮಾತನಾಡಿ, ಬಾಲ ವಿಕಾಸ ಅಕಾಡೆಮಿಯು ಮಕ್ಕಳಿ ಗೋಸ್ಕರ, ಮಕ್ಕಳಿಗಾಗಿ ಇರುವ ಸಂಸ್ಥೆ ಯಾಗಿದ್ದು, ಕ್ರೀಡೆ ಸಂಸ್ಕೃತಿ, ಚಟುವ ಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು. ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಮಕ್ಕಳಾದ ಹಿತೇಶ್‌ ಗೌಡ, ರವಿ ಕುಮಾರ್, ಅರುಂದತಿ, ಬಿ.ಸಿ. ಮುನಿ ರಾಜು-, ಆರ್‌. ಸ್ಫೂರ್ತಿ, ಬಿ.ಎಸ್‌. ಸಂಧ್ಯಾ,  ಅಮೃತವರ್ಷಿಣಿ, ಎಸ್‌. ಹರ್ಷ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಂಸತ್ತಿನಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಹೋಲಿ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿನಿ ಅಭಿಲಾಷಾ ತನ್ನ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಅಧ್ಯಕ್ಷ ಎಚ್.ಸಿ.ರಾಜಣ್ಣ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಶಿಕ್ಷಣಾಧಿಕಾರಿ ಶಿವ ರಾಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಸ್.ಎಂ.ಚಂದ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ, ತಾಲ್ಲೂಕು ಮಹಿಳಾ ರಕ್ಷಣಾಧಿಕಾರಿ ಸಿ.ಎಸ್. ನಾಗಲಾಂಬಿಕೆ, ಆರ್. ಸೋಮಲತಾ, ಕರ್ನಾಟಕ  ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಎಸ್. ಬಾಲಾಜಿ, ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜ್, ಹೋಲಿ ಕ್ರೆಸೆಂಟ್ ಶಾಲೆಯ ಶಿಕ್ಷಕಿ ವಸಂತ, ದೈಹಿಕ ಶಿಕ್ಷಣ ಪರಿವೀಕ್ಷಕ ಮುರುಳೀಧರನ್ ಇತರರು ಉಪಸ್ಥಿತರಿದ್ದರು. ಬಿಜಿಎಸ್ ಅಂಧರಶಾಲೆಯ ವಿದ್ಯಾ ರ್ಥಿಗಳು ನಾಡಗೀತೆ ಹಾಡಿದರು. ವಿದ್ಯಾ ರ್ಥಿಗಳಾದ ಅಭಿಲಾಷ, ಚೇತನ್ ನಿರೂ ಪಿಸಿದರು. ಕಿರಣ್ ವಂದಿಸಿದರು.

ಪ್ರತಿಕ್ರಿಯಿಸಿ (+)