ಭಾನುವಾರ, ಡಿಸೆಂಬರ್ 15, 2019
26 °C

‘ಅಪ್ಪಯ್ಯ’ನ ತಪ್ಪಿದ ಲೆಕ್ಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಪ್ಪಯ್ಯ’ನ ತಪ್ಪಿದ ಲೆಕ್ಕ!

‘ಸಿನಿಮಾ ವೃತ್ತಿ ಜೀವನದಲ್ಲಿಯೇ ‘ಅಪ್ಪಯ್ಯ’ ಮರೆಯಲಾಗದ ಅನುಭವ ನೀಡಿದೆ. ೨೧ ವರ್ಷಗಳ ನಿರ್ದೇಶನ ವೃತ್ತಿಯಲ್ಲಿಯೇ ಅತ್ಯಂತ ಕೆಟ್ಟ ಕ್ಷಣಗಳನ್ನು ಎದುರಿಸಿದ್ದೇನೆ’. ನಿರ್ದೇಶಕ ಎಸ್. ನಾರಾಯಣ್ ಅವರ ಮಾತುಗಳಲ್ಲಿ ನೋವು, ಬೇಸರ, ಆಕ್ರೋಶವಿತ್ತು. ‘ಅಪ್ಪಯ್ಯ’ ಚಿತ್ರ ಅವರ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆಯಂತೆ.

ಇದೇ 12ರಂದು ಬಿಡುಗಡೆಯಾಗಲಿರುವ ‘ಅಪ್ಪಯ್ಯ’ನ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರಕ್ಕೆ ಎದುರಾದ ಕಷ್ಟಗಳ ಜೊತೆ ಜೊತೆಯಲ್ಲಿಯೇ ಇತ್ತೀಚಿನ ಸಿನಿಮಾ ಅನುಭವಗಳನ್ನು ನಾರಾಯಣ್ ತೆರೆದಿಟ್ಟರು. ‘ಮುಹೂರ್ತದ ದಿನವೇ ನಾನು ಚಿತ್ರ ಬಿಡುಗಡೆಯ ದಿನವನ್ನು ಘೋಷಿಸುತ್ತೇನೆ.

ಆದರೆ ‘ಅಪ್ಪಯ್ಯ’ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದ ನಂತರವೂ ಎರಡು ಬಾರಿ ಮುಂದೂಡಬೇಕಾಯಿತು. ಚಿತ್ರ ಜನವರಿಯಲ್ಲಿಯೇ ಸಿದ್ಧವಾಗಿತ್ತು. ಫೆಬ್ರುವರಿಯಲ್ಲಿ ಬಿಡುಗಡೆ ದಿನಾಂಕ ಘೋಷಿಸಿದ ಎರಡೇ ದಿನಕ್ಕೆ ಚಿತ್ರಮಂದಿರವೇ ಲಭ್ಯವಾಗದಂತೆ ವ್ಯವಸ್ಥಿತ ಪಿತೂರಿ ಮಾಡಲಾಯಿತು. ಚಿತ್ರ ಬಿಡುಗಡೆಯನ್ನು ತಡೆಯುವ ಕುತಂತ್ರ ನಡೆಯಿತು ಎಂದು ‘ಅಪ್ಪಯ್ಯ’ನ ಬಿಡುಗಡೆಗೆ ಎದುರಾದ ವಿಘ್ನಗಳನ್ನು ವಿವರಿಸಿದರು.ಈಗಲೂ ಚಿತ್ರ ಬಿಡುಗಡೆ ಸಾಧ್ಯವಾಗದಿದ್ದರೆ ಮುಂದಿನ ಪತ್ರಿಕಾಗೋಷ್ಠಿ ಕರೆದು ಯಾರಾ್ಯಾರಿಂದ ನಾನು ಕಿರುಕುಳ ಅನುಭವಿಸಿದೆ ಎನ್ನುವುದನ್ನು ಬಹಿರಂಗಪಡಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ‘ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಬೇರೊಬ್ಬರ ಮುಂದೆ ಕೈಕಟ್ಟಿ ನಿಲ್ಲುವ ಸ್ಥಿತಿ ಎದುರಾಗಿದ್ದು ನನಗೆ ಇದೇ ಮೊದಲು ಎಂದರು. ನಟ ಶ್ರೀಗರ ಕಿಟ್ಟಿ ಅವರಿಗೆ ಚಿತ್ರದ ಕಥೆ ತುಂಬಾ ಇಷ್ಟವಾಗಿದೆ. ಟೋನಿ ಚಿತ್ರದ ನಿರ್ಮಾಪಕ ಇಂದ್ರಕುಮಾರ್ ‘ಅಪ್ಪಯ್ಯ’ನಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)