ಸೋಮವಾರ, ಜೂನ್ 14, 2021
22 °C

‘ಅಭಿವೃದ್ಧಿಗೆ ಸಂಘಟನೆಯೇ ಮೆಟ್ಟಿಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಅತ್ಯಂತ ಹಿಂದುಳಿದಿರುವ ಆರ್ಯ ಈಡಿಗ ಸಮಾಜ ಸಂಘಟನೆಯಾಗುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ರಾಮನಗರ ಜಿಲ್ಲೆ ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಸಲಹೆ ನೀಡಿದರು.ಕ್ಷೇತ್ರ ವ್ಯಾಪ್ತಿ ಬೆಲ್ಲದಾರಹಟ್ಟಿಯಲ್ಲಿ ಬುಧವಾರ ಸ್ಥಳೀಯ ಆರ್ಯ ಈಡಿಗ ಸಮಾಜದ  ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಈಡಿಗ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದೆ. ಶಿಕ್ಷಣಕ್ಕೆ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಹಲವು ಸಾಮಾಜಿಕ ಸಮಸ್ಯೆ ಎದುರಿಸುತ್ತಿದೆ. ಆದ್ದರಿಂದ ಸಮಾಜದ ಎಲ್ಲಾ ಪೋಷಕರು ಮುಖ್ಯವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಹೇಳಿದರು.ಪರಶುರಾಂಪುರ ತಾಲ್ಲೂಕು ಪಂಚಾಯ್ತಿ ಸದಸ್ಯ ಈ.ಎನ್‌.ವೆಂಕಟೇಶ್‌ ಮಾತನಾಡಿ, ರಾಜ್ಯದಾದ್ಯಂತ ಆರ್ಯ ಈಡಿಗ ಸಮಾಜ ಸಂಘಟನೆಗೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರಾಜಕೀಯ ಉದ್ದೇಶದಿಂದ ಸಂಘಟನೆ ಮಾಡುತ್ತಿಲ್ಲ. ಸೇವಾ ಉದ್ದೇಶ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.ಪ್ರಾಸ್ತವಿಕ ಮಾತನಾಡಿದ ಶಿಕ್ಷಕ ಶಿವರಾಂ, ಅತ್ಯಂತ ಹಿಂದುಳಿದ ಗಡಿಭಾಗದ ಬೆಲ್ಲದಾರಹಟ್ಟಿಯಲ್ಲಿ ಈಡಿಗ ಜನಾಂಗ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.ಸಮಾಜದ ರಾಜ್ಯ ಯುವ ಘಟಕ ಉಪಾಧ್ಯಕ್ಷ ಕೆ.ಎಲ್‌.ಉಮೇಶ್‌, ಪ್ರಧಾನ ಕಾರ್ಯದರ್ಶಿ ಬಿ.ಆರ್‌.ಉಮೇಶ್‌, ಸಂಘದ ಜಿಲ್ಲಾಧ್ಯಕ್ಷ ಎಚ್‌.ಜೀವನ್‌, ಖಜಾಂಚಿ ಬಸವರಾಜ್‌, ತಾಲ್ಲೂಕು ಅಧ್ಯಕ್ಷ ಸಿ.ಒ.ರವಿಕುಮಾರ್‌, ಜಿಲ್ಲಾ ಪಂಚಾಯ್ತಿ ಸದಸ್ಯೆ ಲಕ್ಷ್ಮೀದೇವಿ, ಮಾಜಿ ಸದಸ್ಯ ಹನುಮಂತರೆಡ್ಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಗಂಗಾಧರಪ್ಪ, ಆರ್‌.ಎಂ.ಅಶೋಕ್‌, ಅಂಜನ ಮೂರ್ತಿ, ಪಾಪಣ್ಣ, ಪಿ.ಆನಂದಮೂರ್ತಿ, ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು.ಸೋಮನಾಥ್ ಸ್ವಾಗತಿಸಿದರು, ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.