ಮಂಗಳವಾರ, ಜೂನ್ 22, 2021
28 °C

‘ಅಮೆರಿಕ ಮಾದರಿ ಸೂಕ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಭಾರತಕ್ಕೆ ಅಮೆರಿಕ ಮಾದರಿಯ ಸಂವಿಧಾನ ಅಂಗೀಕ­ರಿಸಿದ್ದರೆ ಒಳ್ಳೆಯದಿತ್ತು ಎಂದು ಹಿರಿಯ ಸಾಹಿತಿ ದೇ. ಜವರೇಗೌಡ ಅಭಿ­ಪ್ರಾಯಪಟ್ಟರು.ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾ­ನಿಕೇತನ ಸಂಸ್ಥೆ ವತಿಯಿಂದ ಕುವೆಂಪು ಅವರ 110ನೇ ಜಯಂತಿ ಅಂಗ­ವಾಗಿ ನಗರದ ಜಗನ್ಮೋಹನ ಅರ­ಮನೆ­ಯಲ್ಲಿ ಭಾನುವಾರ ಏರ್ಪ­ಡಿಸಿದ್ದ ಸಾಂಸ್ಕೃತಿಕ ವೈವಿಧ್ಯ ಕಾರ್ಯ­ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಅಳವಡಿಸಿಕೊಂಡಿರುವ ಸಂವಿ­ಧಾನದ ಬಗ್ಗೆ ನನಗೆ ಒಲವು ಇಲ್ಲ. ಅಮೆ­ರಿಕದಲ್ಲಿನ ಒಕ್ಕೂಟ ಮಾದರಿಯ ಸಂವಿ­ಧಾನ ಅಳವಡಿಸಿಕೊಂಡು, ಭಾರತ ಸಂಯುಕ್ತ ಸಂಸ್ಥಾನ ಎಂದು ಆಗಿದ್ದರೆ ಚೆನ್ನಾಗಿರುತ್ತಿತ್ತು.ಈಗಾಗಲೇ ಆಂಧ್ರ­ಪ್ರದೇಶವನ್ನು ಹೋಳು ಮಾಡಿ ಎರಡು ರಾಜ್ಯ ರಚಿಸಿ ಆಯಿತು. ಮುಂದಿನ ದಿನಗಳಲ್ಲಿ ಕರ್ನಾಟಕ­ವನ್ನೂ ಇಬ್ಭಾಗ ಮಾಡುತ್ತಾರೇನೊ ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮಾತೃಭಾಷೆ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವ್ಯತಿರಿಕ್ತ ತೀರ್ಪು ನೀಡಿ­ದರೆ ಕನ್ನಡಿಗರಿಗೆ ಹೋರಾಟದ ಹೊರತು ಅನ್ಯಮಾರ್ಗ ಇಲ್ಲ. ಕನ್ನಡ ಬೋಧಕರು ಎಷ್ಟೇ ಮೇಧಾವಿ­ಗ­ಳಾ­ಗಿ­ದ್ದರೂ ಅವರಿಗೆ ಪ್ರಾಂಶುಪಾಲ, ಕುಲ­ಪತಿ ಹುದ್ದೆಗಳನ್ನು ದಯ­ಪಾಲಿಸದ ಕಾಲ­ವೊಂದಿತ್ತು. ಕುವೆಂಪು ಅವರು ಈ ‘ನೀತಿ’ಗಳಿಗೆ ಇತಿಶ್ರೀ ಹಾಡಿ­ದರು. ಕುವೆಂಪು ಕನ್ನಡದ ಶಕ್ತಿ­ಯಾಗಿದ್ದರು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.