ಶನಿವಾರ, ಮಾರ್ಚ್ 6, 2021
29 °C
ಹರಿಹರ: ಶತಮಾನೋತ್ಸವ ಅಭಿಯಾನ ರಥಯಾತ್ರೆಗೆ ಸ್ವಾಗತ

‘ಅರಸು ಸಾಮಾಜಿಕ ನ್ಯಾಯದ ಹರಿಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅರಸು ಸಾಮಾಜಿಕ ನ್ಯಾಯದ ಹರಿಕಾರ’

ಹರಿಹರ: ‘ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಶೋಷಿತರ ಹಾಗೂ ಹಿಂದುಳಿದವರ ಭಾಗ್ಯದ ಬಾಗಿಲು ತೆರದ ಧೀಮಂತ ನಾಯಕ’ ಎಂದು ರೇಷ್ಮೆ ಉದ್ಯಮಗಳ ನಿಗಮ ಅಧ್ಯಕ್ಷ ಡಿ.ಬಸವರಾಜ ಬಣ್ಣಿಸಿದರು.

ನಗರದ ರಾಷ್ಟ್ರೀಯ ಹೆದ್ದಾರಿ–4ರ ಬಳಿ ದೇವರಾಜ ಅರಸು ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಗಮಿಸಿದ ದೇವರಾಜ ಅರಸು ಅಭಿಯಾನ ರಥಯಾತ್ರೆ ಸ್ವಾಗತಿಸಿ ಅವರು ಮಾತನಾಡಿದರು.‘ಸಮಾಜಕ್ಕೆ ಕಂಟಕವಾಗಿದ್ದ ಹಾಗೂ ಮನುಕುಲಕ್ಕೆ ಅಪವಾದವಾಗಿದ್ದ ಅನಿಷ್ಠ ಮಲಹೊರುವ ಪದ್ಧತಿ ಹಾಗೂ ಜೀತ ಪದ್ಧತಿಗಳನ್ನು ತೊಡೆದು ಹಾಕಲು ಅಗತ್ಯವಾದ ಕಾನೂನುಗಳನ್ನು ರಚಿಸಿ ಶೋಷಿತರಿಗೆ ಸಾಮಾಜಿಕ ನ್ಯಾಯ ನೀಡಿದ ಹರಿಕಾರ. ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ದೊರಕಿಸಿಕೊಡಲು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದರು.‘ಹಿಂದುಳಿದ ವರ್ಗಗಳ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆಯನ್ನು ಸಂಪೂರ್ಣವಾಗಿ ತಡೆಗಟ್ಟಲು, 21 ಅಂಶಗಳ ಕಾರ್ಯಕ್ರಮ ರೂಪಿಸಿ, ಬಡವರ ಉದ್ಧಾರಕ್ಕಾಗಿ ಗುಲಾಮಗಿರಿಯ ದ್ಯೋತಕವಾದ ಜೀತಪದ್ಧತಿ ನಿರ್ಮೂಲನೆಗಾಗಿ ಉಳುವವನೇ ಒಡೆಯ ಎಂಬ ಕಾನೂನು ಜಾರಿಗೊಳಿಸಿದರು’ ಎಂದು ಹೇಳಿದರು.‘ಕಾಂಗ್ರೆಸ್ ಪಕ್ಷ ಸೋಲಿನಿಂದ ಕುಸಿದಾಗ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಚಿಕ್ಕಮಗಳೂರಿನ ಸಂಸತ್ ಚುನಾವಣೆ ಮೂಲಕ ರಾಜಕೀಯ ಮರುಹುಟ್ಟು ನೀಡಿದ ರಾಜಕೀಯ ಮುತ್ಸದ್ದಿ’ ಎಂದರು.‘ಮೈಸೂರು ಪ್ರಾಂತ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು, ಜನ ಸಾಮಾನ್ಯರ ಭಾಷೆಯಾದ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂಥ ನಾಯಕರ ಚಿಂತನೆ ಹಾಗೂ ಆದರ್ಶಗಳು ಇಂದಿಗೂ ಪ್ರಸ್ತುತ. ಈ ರಥಯಾತ್ರೆ ದಾವಣಗೆರೆಯ ಕ್ರೀಡಾಂಗಣದಲ್ಲಿ ಆ.15ರಂದು ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು, ಚಿತ್ರದುರ್ಗಕ್ಕೆ ಪಯಣಿಸಲಿದೆ’ ಎಂದು ತಿಳಿಸಿದರು.ನಗರಸಭೆ ಅಧ್ಯಕ್ಷೆ ಪ್ರತಿಭಾ ಕುಲಕರ್ಣಿ, ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ನಾಗರಾಜ ಮೆಹರ್‍್ವಾಡೆ, ಹಿಂದುಳಿದ ವರ್ಗಗಳ ಉಪನಿರ್ದೇಶಕ ಮನ್ಸೂರ್ ಭಾಷಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಅಶೋಕಕುಮಾರ್, ತಹಶೀಲ್ದಾರ್ ಜಿ. ನಳಿನಿ, ಪೌರಾಯುಕ್ತ ರವೀಂದ್ರ ಮಲ್ಲಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ಮಲ್ಲಿಕಾರ್ಜುನ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಿ.ಪರಮೇಶ್ವರಪ್ಪ, ವಿವಿಧ   ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.