‘ಅರ್ಹರಿಗೆ ಶೀಘ್ರ ಆಶ್ರಯ ನಿವೇಶನ’

7

‘ಅರ್ಹರಿಗೆ ಶೀಘ್ರ ಆಶ್ರಯ ನಿವೇಶನ’

Published:
Updated:

ದಾಂಡೇಲಿ: ನಗರದಲ್ಲಿ ಆಶ್ರಯ ನಿವೇಶನ ಹಂಚಿಕೆಯ ಕುರಿತಾಗಿ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರು ಬುಧವಾರ ನಗರಸಭೆ ಸಭಾಭವನದಲ್ಲಿ ತುರ್ತು ಸಭೆ ನಡೆಸಿದರು.‘ಆಶ್ರಯ ನಿವೇಶನ ಮತ್ತು ಬಂದ ಅರ್ಜಿಗಳ ಬಗ್ಗೆ ಇಲ್ಲಿಯವರೆಗೆ ಆಗಿರುವ ಕೆಲಸಗಳ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಆದಷ್ಟು ಬೇಗ ಈ ಪ್ರಕ್ರಿಯೆ ಮುಗಿಯಬೇಕು. ಅರ್ಹ ಬಡ ಫಲಾನುಭವಿಗಳಿಗೇ ಮನೆಗಳು ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.‘2,434 ಆಶ್ರಯ ನಿವೇಶನ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಮನೆ ಕೊಡುವಂತ ಕೆಲಸವಾಗಬೇಕು. ಜ.15ರ ಒಳಗೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿ ಆದಷ್ಟು ಬೇಗ ಈ ಕೆಲಸವಾಗಬೇಕು’ ಎಂದರು. ಕ್ರೀಡಾಂಗಣಕ್ಕೆ ಮಂಜೂರಿಯಾದ ಪೀಠೋಪಕರಣ, ಜಿಮ್ ಸಾಮಗ್ರಿಗಳ ಬಗ್ಗೆ ತಿಳಿಸಿ ಅದನ್ನು ತಕ್ಷಣ ಆರಂಭಿಸುವಂತೆ ಸೂಚಿಸಿದರು.ಸಭೆಯಲ್ಲಿ ಶಾಸಕ ಎಸ್.ಎಲ್. ಘೋಟ್ನೇಕರ, ನಗರಸಭಾ ಅಧ್ಯಕ್ಷೆ ದೀಪಾ ಮಾರಿಹಾಳ, ತಹಶೀಲ್ದಾರರಾದ ಶಾರದಾ ಕೋಲಕಾರ, ನಗರಸಭೆ ಆಯುಕ್ತ ಎಸ್.ಬಿ. ಪಾಟೀಲ. ಎಂಜಿನಿಯರ್‌ ಮುಸಗುಪ್ಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ ಸಾಳುಂಕೆ, ಸದಸ್ಯರಾದ ಯಾಸ್ಮಿನ್ ಕಿತ್ತೂರ, ಕೀರ್ತಿ ಗಾಂವಕರ, ಅಡಿವೆಪ್ಪ ಭದ್ರಕಾಳಿ, ನಂದೀಶ ಮುಂಗರವಾಡಿ, ಅಷ್ಪಾಕ ಶೇಖ್‌, ಎಂ.ಎಸ್. ನಾಯ್ಕ, ರೈಸಾ ಬೀಡಿಕರ, ಮಂಜು ರಾಟೋಡ್, ರವಿ ಸುತಾರ, ರಿಯಾಜ್‌ ಶೇಖ್‌, ಡಿ. ಸ್ಯಾಮಸನ್, ಲಿಯಾಖತ್ತಲಿ ಖಾನಾಪುರಿ, ರೋಷನ್ ಬಾವಾಜಿ ಸುಶೀಲಾ ಕಾಸರಕೋಡ, ಮುಸ್ತಾಕ್‌ ಶೇಖ, ಶೋಭಾ ಜಾಧವ್, ನಮಿತಾ ಹಳದನಕರ ಮೊದಲಾದವರು ಹಾಜರಿದ್ದರು.ಪ್ರತಿಪಕ್ಷ ಆಕ್ಷೇಪ:    ಸಚಿವ ಆರ್.ವಿ. ದೇಶಪಾಂಡೆ ಅವರು ಸಭೆ ಆರಂಭಿಸುತ್ತಿದ್ದಂತೆಯೇ ಸಭಾಭವನದೊಳಗೆ ಆಗಮಿಸಿದ ಜೆಡಿಎಸ್ ಹಾಗೂ ಬಿಜೆಪಿಯ ನಗರಸಭಾ ಸದಸ್ಯರು ನಮಗೆ ಈ ಸಭೆಯ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಆಕ್ಷೇಪಿಸಿದರು.ಬಿಜೆಪಿ ರವಿ ಸುತಾರ ಮತ್ತು ಜೆಡಿಎಸ್‌ನ ರಿಯಾಜ್‌ ಶೇಖ್‌ ಮಾತನಾಡಿ, ‘ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಕೂಡಾ ನಾವೆಲ್ಲರೂ ಇಲ್ಲಿ ಸದಸ್ಯರಾಗಿದ್ದೇವೆ. ಆದರೆ, ಸಚಿವರು ಸಭೆ ನಡೆಸುವಾಗ ನಗರಸಭಾ ಅಧ್ಯಕ್ಷರು ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಮಾತ್ರ ಸಭೆಗೆ ಆಹ್ವಾನಿಸಿದ್ದಾರೆ. ನಮಗ್ಯಾರಿಗೂ ತಿಳಿಸಿಲ್ಲ. ಇದು ಸರಿಯಾದ ಕ್ರಮವಲ್ಲ’ ಎಂದು ಆಕ್ಷೇಪಿಸಿದರು.ಇದನ್ನು ಸದಸ್ಯರಾದ ರೋಷನ್ ಬಾವಾಜಿ, ಡಿ.ಸ್ಯಾಮಸನ್, ಲಿಯಾಖತ್ತಲಿ  ಖಾನಾಪುರಿ,  ಮುಸ್ತಾಕ್‌ ಶೇಖ, ಸುಶೀಲಾ ಕಾಸರಕೋಡ, ನಮಿತಾ ಹಳದನಕರ, ಶೋಭಾ ಜಾಧವ್ ಮುಂತಾದವರು ಸಹಮತ ವ್ಯಕ್ತಪಡಿಸಿದರು.ಆಗ ಪ್ರತಿಕ್ರಿಯೆ ನೀಡಿದ ಸಚಿವ ದೇಶಪಾಂಡೆ ಅವರು ಮಾತನಾಡಿ, ‘ಸುಮ್ಮನೆ ಗಲಾಟೆ ಮಾಡಬೇಡಿ. ಇದು ನಗರಸಭಾ ಸದಸ್ಯರನ್ನು ಕರೆದ ಸಭೆಯಲ್ಲ. ಆಶ್ರಯ ಸಮಿತಿ ಸಭೆ. ಸಮಿತಿಗೆ ನಾನು ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರು, ತಹಶೀಲ್ದಾರರು, ನಗರಸಭಾ ಅಧ್ಯಕ್ಷರು ಸದಸ್ಯರಿರುತ್ತಾರೆ. ಅವರ ಜೊತೆ ಸಭೆ ನಡೆಸಲು ಬಂದಿದ್ದೆ. ಆಗ ನಗರಸಭಾ ಸದಸ್ಯರು ಇದ್ದರೆ ಬನ್ನಿ ಎಂದಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry