‘ಅವೈಜ್ಞಾನಿಕ ನಿಯಮ: ಶಿಕ್ಷಕರಿಗೆ ತೊಡಕು’

7

‘ಅವೈಜ್ಞಾನಿಕ ನಿಯಮ: ಶಿಕ್ಷಕರಿಗೆ ತೊಡಕು’

Published:
Updated:

ಹೊಸಕೋಟೆ: ‘ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನಿಯಮಗಳು ಶಿಕ್ಷಕರಿಗೆ ತೊಡಕಾಗಿದ್ದು ಅವರಿಗೆ ನೆಮ್ಮದಿ ಇಲ್ಲದಂತಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಸಮಾಲೋಚಿಸಲು  ಹೊಸಕೋಟೆಗೆ ಸೋಮವಾರ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಿದರು.‘ಕಾಲೇಜಿನ ಕುಂದುಕೊರತೆಗಳು ಮತ್ತು ವೇತನ ತಾರತಮ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತಾಗಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಉಪನ್ಯಾಸಕರು ಅಳಲು ತೋಡಿಕೊಂಡರು.ಪ್ರಾಂಶುಪಾಲ ಕೆ.ಆರ್.ಪ್ರಸಾದ್, ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry