ಶನಿವಾರ, ಫೆಬ್ರವರಿ 27, 2021
28 °C

‘ಆಟಮ್‌’ ಆ್ಯಪ್‌ನಿಂದ 24/7 ಟ್ಯೂಷನ್‌

ಯೋಗಿತಾ ಆರ್‌.ಜೆ. Updated:

ಅಕ್ಷರ ಗಾತ್ರ : | |

‘ಆಟಮ್‌’ ಆ್ಯಪ್‌ನಿಂದ 24/7 ಟ್ಯೂಷನ್‌

ಶಾಲೆ ಮುಗಿಸಿ ಮನೆಗೆ ಬಂದ ಕೂಡಲೇ ಸಿಕ್ಕಷ್ಟು ತಿಂದು ಪುನಃ ಬ್ಯಾಗ್‌ನ್ನು ಏರಿಸಿಕೊಂಡು ಟ್ಯೂಷನ್‌ನತ್ತ ನಡೆಯಬೇಕು. ಹೀಗೆ ವಿಶ್ರಾಂತಿಗೆ ಸಮಯವಿಲ್ಲದೆ ಮಕ್ಕಳು ಧಾವಂತದಿಂದ ಓಡುತ್ತಲೇ ಇರುವುದು ಈಗ ಸಾಮಾನ್ಯ ಎನ್ನುವಂತಾಗಿದೆ.ಮಕ್ಕಳಿಗೆ ಓದುವ ಸಮಯದಲ್ಲಿ ಬಂದ ಗೊಂದಲಗಳು ಆಗಲೇ ನಿವಾರಣೆಯಾದರೆ ಹೆಚ್ಚು ಸಮಯ ನೆನಪಿನ ಪಟದಲ್ಲಿ ಉಳಿಯುತ್ತದೆ.  ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ಸಹಾಯಕವಾಗುತ್ತದೆ. ಹಾಗಾಗಿ ಟ್ಯೂಷನ್‌ ಎಂಬ ಗುರು ಎಲ್ಲ ಮಕ್ಕಳಿಗೂ ಅಗತ್ಯ ಎಂಬುದು ಅನೇಕ ಪೋಷಕರ ಅಂಬೋಣ.ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತರಾಗುತ್ತಿದ್ದಾರೆ. ಹೊರಗಿನ ಪ್ರಪಂಚದ ಅರಿವಿರದೇ ಪುಸ್ತಕದಲ್ಲಿ ಏನು ಕೊಟ್ಟಿರುತ್ತಾರೊ ಅದನ್ನಷ್ಟೇ ತಲೆಯೊಳಗೆ ತುಂಬಿಕೊಳ್ಳುತ್ತಿರುತ್ತಾರೆ.ಆಟದ ಓದಿಗೆ ಪೂರಕವಾಗಿ ಆಟವೂ ಇರಬೇಕು.  ಹೀಗೆ ಮಕ್ಕಳಿಗೆ ಟ್ಯೂಷನ್‌ ಹೊರೆಯಾಗದಂತೆ, ಅನಿವಾರ್ಯವಾಗಿರುವ ಓದಿನ ಜೊತೆಗೆ ನಿಲ್ಲುವಂತೆ ಹ್ಯಾಶ್‌ ಲರ್ನ್‌ ಒಂದು ಆ್ಯಪ್‌ ಸಿದ್ಧಪಡಿಸಿದೆ.ಹ್ಯಾಶ್‌ಲರ್ನ್‌ ಸಿದ್ಧಪಡಿಸಿರುವ ‘ಆಟಮ್‌’ ಎಂಬ ಈ ಆ್ಯಪ್‌ ಮಕ್ಕಳಿಗೆ ಉತ್ತಮ ಗುಣಮಟ್ಟದ, ಕಡಿಮೆ ಬೆಲೆಯಲ್ಲಿ ಬೋಧನಾ ಸೇವೆಯನ್ನು ಒದಗಿಸುತ್ತದೆ. ನಗರ, ಪಟ್ಟಣದಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಯದಲ್ಲೂ ಉಪಯೋಗವಾಗುವಂತೆ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು  ಈ ಆ್ಯಪ್‌ ರಚಿಸಲಾಗಿದೆ.ಭಾರತದಲ್ಲಿ ಶೇ. 20ರಷ್ಟು ಮಾತ್ರ ಬೋಧನಾ ಸಂಸ್ಥೆಗಳಿವೆ. ಟ್ಯೂಷನ್‌ ವೆಚ್ಚ ಭರಿಸಲು ಸಾಧ್ಯವಾಗದೆ ಮತ್ತು ದೂರದಲ್ಲಿರುವ ತರಬೇತಿ ಕೇಂದ್ರಗಳಿಗೆ ಸೇರಿಕೊಳ್ಳಲಾಗದೆ ಬಹುತೇಕ ವಿದ್ಯಾರ್ಥಿಗಳು ಗುಣಮಟ್ಟದ ತರಬೇತಿ ಸಿಗದೆ ವಂಚಿತರಾಗುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಅಗತ್ಯವಿದ್ದಾಗ ಶಿಕ್ಷಕರು ಸಿಗದೆ ಅನೇಕರು ತೊಂದರೆ ಅನುಭವಿಸುತ್ತಾರೆ. ಆ ನಿಟ್ಟಿನಲ್ಲಿ ‘ಆಟಮ್‌’ ವಿದ್ಯಾರ್ಥಿಗಳಿಗೆ ಉತ್ತಮ ಆ್ಯಪ್‌ ಆಗಿದೆ.ಐಐಟಿ, ಬಿಐಟಿಎಸ್‌, ಏಮ್ಸ್‌ ಮತ್ತು ಅಗ್ರಗಣ್ಯ ಶಿಕ್ಷಣಸಂಸ್ಥೆಗಳ ಶಿಕ್ಷಕರು ಈ ಆ್ಯಪ್‌ ಮೂಲಕ ಬೋಧನೆಗೆ ಲಭ್ಯವಿರುತ್ತಾರೆ. ಜೆಇಇ, ಸಿಇಟಿ, ನೀಟ್‌ ಪ್ರವೇಶ ಪರೀಕ್ಷೆಗಳು ಸೇರಿದಂತೆ ಶಾಲಾ ಪರೀಕ್ಷೆಗಳಿಗಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಟ್ಯೂಷನ್ ನೀಡಲಾಗುತ್ತದೆ.ಬೇಡಿಕೆ ಮೇರೆಗೆ ಬೋಧಕರು ಲಭ್ಯವಿದ್ದು, ದಿನಪೂರ್ತಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತಾರೆ. ‘ಯಾವುದೇ ಸಮಯವಿರಲಿ ವಿದ್ಯಾರ್ಥಿಗಳು ಓದುವಾಗ ಗೊಂದಲಗಳು ಉಂಟಾದರೆ ತಕ್ಷಣ ಈ ಆ್ಯಪ್‌ನ ಸಹಾಯದಿಂದ ನುರಿತ ಶಿಕ್ಷಕರಲ್ಲಿ ಸಲಹೆ, ಪಾಠ ಕೇಳಬಹುದು’ ಎಂದು ಹ್ಯಾಶ್‌ಲರ್ನ್‌ ಸಿಇಒ ಮತ್ತು ಸಹ ಸಂಸ್ಥಾಪಕರಾದ ಜಯದೇವ್‌ ಗೋಪಾಲಕೃಷ್ಣನ್‌ ಅವರು ತಿಳಿಸಿದರು.‘ಆಟಮ್‌’ ಅನ್ನು 1,2,3,4 ಮತ್ತು 5 ಸೆಶನ್‌ಗಳ ಪ್ಯಾಕ್‌ಗಳಾಗಿ ಖರೀದಿಸಬಹುದು. ಒಂದು ಸೆಶನ್‌ನ ಬೆಲೆ ₹30. ಸಾಮಾನ್ಯ ಪಾವತಿ ಆಯ್ಕೆಗಳಲ್ಲದೆ, ಆ್ಯಪ್‌ನೊಳಗೇ ಮೊಬೈಲ್‌ ಆಪರೇಟರ್‌ ಮೂಲಕವೂ ಪ್ಯಾಕ್‌ಗಳನ್ನು ಖರೀದಿಸುವ ಅವಕಾಶವೂ ಇದೆ. ಮೊಬೈನ ಪ್ರಿಪೇಯ್ಡ್‌ ಬ್ಯಾಲೆನ್ಸ್‌ ಅಥವಾ ಪೊಸ್ಟ್‌ಪೇಡ್‌ ಬಿಲ್‌ ಮೂಲಕ ಮೊತ್ತ ಕಡಿತಗೊಳ್ಳುತ್ತದೆ’ ಎಂದು ಅವರು ಆ್ಯಪ್‌ ಕುರಿತು ಮಾಹಿತಿ ನೀಡಿದರು.‘ಎಲ್ಲ ವಿದ್ಯಾರ್ಥಿಗಳಿಗೂ ಉನ್ನತ ಗುಣಮಟ್ಟದ ಬೋಧಕರ ವರ್ಗದೊಂದಿಗೆ ಸಂಬಂಧ ಬೆಸೆಯುವುದು ನಮ್ಮ ಉದ್ದೇಶವಾಗಿದೆ. ಕೈಗೆಟುಕುವ ಬೆಲೆಯಲ್ಲಿ ಜಂಜಾಟ ರಹಿತವಾದ ಕಲಿಕೆ ಸಾಧ್ಯವಾಗಿಸಲಾಗಿದೆ’ ಎಂದರು.‘ಆಟಮ್‌’ ಅಲ್ಲದೆ, ಹ್ಯಾಶ್‌ಲರ್ನ್‌ ‘ಇನ್‌ಫಿನಿಟಿ’ ಬ್ರಾಂಡ್‌ ಅಡಿಯಲ್ಲಿ ಅನಿಯಮಿತ ಸೆಶನ್‌ಗಳನ್ನು ಸಹ ಪರಿಚಯಸಿದೆ. ಹ್ಯಾಶ್‌ಲರ್ನ್‌ ಆ್ಯಂಡ್ರಾಯ್ಡ್‌ ಆ್ಯಪನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಥವಾ 56263ಗೆ  ‘GETNOW’ ಎಂದು ಸಂದೇಶ ಕಳಿಸುವ ಮೂಲಕ ಪಡೆಯಬಹುದು. ಮೊದಲ ಬಳಕೆದಾರರು ಮೊದಲ ಮೂರು ಸೆಶನ್‌ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ವೆಬ್‌ಸೈಟ್‌ ವಿಳಾಸ: http://www.hashlearn.com

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.