ಬುಧವಾರ, ಜೂನ್ 16, 2021
22 °C

‘ಆತ್ಮವಿಶ್ವಾಸದಿಂದ ಗುರಿ ಸಾಧನೆ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ‘ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸ್ವಂತಿಕೆಯಿಂದ ಆತ್ಮ ವಿಶ್ವಾಸದೊಡನೆ ಗುರಿ ಸಾಧಿಸಬೇಕು’ ಎಂದು ಶಿಕ್ಷಣ ತಜ್ಞ  ಡಾ. ಗುರುರಾಜ್‌ ಕರ್ಜಗಿ ಹೇಳಿದರು.ಬಸವನಪುರ ಕೇಂಬ್ರಿಜ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ದಲ್ಲಿ (ಚಿಗುರು –2014) ಅವರು ಮಾತನಾಡಿದರು.‘ವಿದ್ಯಾರ್ಥಿಗಳು ಅಧ್ಯಯನದಲ್ಲಿ  ತಮ್ಮದೇ ಛಾಪು ಮೂಡಿಸಿ­ಕೊಂಡು ಬೆಳೆ­ಯ­ಬೇಕು. ಸಮಾ­­ಜದ ಆರೋ­ಗ್ಯ­ಕರ ಬೆಳವಣಿಗೆಗೆ ಕಲ್ಯಾಣ ಗುಣಗಳನ್ನು ಬೆಳೆಸಿಕೊಳ್ಳ­ಬೇಕು’ ಎಂದರು.ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಡಿ.ಕೆ ಮೋಹನ್‌ ಮಾತನಾಡಿ, ‘ವಿದ್ಯಾರ್ಥಿಗಳು ಗುರಿ ಸಾಧಿಸುವುದರ ಮೂಲಕ ಶಿಕ್ಷಣ ಸಂಸ್ಥೆಗೆ ಋಣಿಯಾಗಿ­ರ­ಬೇಕು’ ಎಂದರು. ಪ್ರಾಚಾರ್ಯ ಸುರೇಶ್‌, ಸಂಯೋಜಕ ಸತೀಶ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.