ಶುಕ್ರವಾರ, ಜೂನ್ 25, 2021
21 °C

‘ಆತ್ಮವಿಶ್ವಾಸದಿಂದ ಸವಾಲು ಎದುರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯಾವುದೇ ಕೆಲಸವನ್ನಾದರೂ ಇಷ್ಟಪಟ್ಟು ಮಾಡಬೇಕು. ಆತ್ಮ­ವಿಶ್ವಾಸದಿಂದ ಸವಾಲುಗಳನ್ನು ಎದುರಿಸಿದರೆ ಮಹಿಳಾ ಸಬಲೀಕರಣ ಸಾಧ್ಯ’ ಎಂದು ಚಿತ್ರನಟಿ ನೇಹಾ ಪಾಟೀಲ್ ಅಭಿಪ್ರಾಯಪಟ್ಟರು.‘ಪಾಸಿಟಿವ್ ಹೋಮಿಯೋಪಥಿ’ ಆಸ್ಪತ್ರೆಯು ನಗರದಲ್ಲಿ ಶನಿವಾರ ಆಯೋ­ಜಿ­ಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.‘ಮಹಿಳೆಯರು ಏನನ್ನು ಬೇಕಾದರೂ ಸಾಧಿಸಬಲ್ಲರು. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಅನಾರೋಗ್ಯ ಉಂಟಾದರೆ ಉದಾಸೀನ ಮಾಡದೇ ಪ್ರಾರಂಭದಲ್ಲೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದರು.ಆಸ್ಪತ್ರೆಯ ವೈದ್ಯೆ ಡಾ.ಅಶ್ರಿತಾ ಮಾತನಾಡಿ, ಮಹಿಳೆಯರು ಉತ್ತಮ ಆಹಾರ ಶೈಲಿ ರೂಢಿಸಿಕೊಳ್ಳಬೇಕು, ತಾಯಿಯೇ ಮಗುವಿಗೆ ಮೊದಲ ಗುರುವಾಗಿದ್ದು ಹೆಣ್ಣು ಮಕ್ಕಳಿಗೆ ತಾಯಂದಿರು ಆರೋಗ್ಯದ ಬಗ್ಗೆ ತಿಳಿಹೇಳಬೇಕು ಎಂದರು. ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಾಗರ್ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.