‘ಆತ್ಮಸಾಕ್ಷಿ’ ಹಾಡು

7

‘ಆತ್ಮಸಾಕ್ಷಿ’ ಹಾಡು

Published:
Updated:
‘ಆತ್ಮಸಾಕ್ಷಿ’ ಹಾಡು

ಪ್ಪತ್ತು ವರ್ಷದ ಹಿಂದೆ ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಾಹಿತಿ ನಾ. ಡಿಸೋಜಾ ಅವರ ಧಾರಾವಾಹಿಯನ್ನು ಸಿನಿಮಾ ರೂಪಕ್ಕೆ ಇಳಿಸಿದ್ದಾರೆ ನಿರ್ದೇಶಕ ಎನ್‌. ಮನು. ಮೂಲ ಕಥನದ ‘ಪಾಪ ನಿವೇದನೆ’ ಎಂಬ ಶೀರ್ಷಿಕೆಯನ್ನು ಸಿನಿಮಾಕ್ಕಾಗಿ ಅವರು ‘ಆತ್ಮಸಾಕ್ಷಿ’ ಎಂದು ಬದಲಿಸಿಕೊಂಡಿದ್ದಾರೆ.

ನಿರ್ದೇಶನದ ಜೊತೆ, ನಿರ್ಮಾಣ ಮತ್ತು ನಟನೆಯ ಹೊಣೆಗಾರಿಕೆಯನ್ನೂ ಅವರು ನಿರ್ವಹಿಸಿದ್ದಾರೆ. ಮಾರುತಿ ಶಿವರಾಮ್‌ ಎಂಬ ನಿರ್ಮಾಪಕರು ಹಲವು ವರ್ಷಗಳ ಹಿಂದೆಯೇ ಹಕ್ಕುಗಳನ್ನು ಕೇಳಿದ್ದರೂ ಸಿನಿಮಾ ಶುರುವಾಗಲಿಲ್ಲ. ಬಿಬಿಸಿಯಲ್ಲಿ ಪ್ರಸಾರವಾಗಿದ್ದ ಮನು ಅವರ ಕಿರುಚಿತ್ರ ನೋಡಿ ಅವರ ಮೇಲೆ ವಿಶ್ವಾಸ ಮೂಡಿದ್ದರಿಂದ ಹಕ್ಕುಗಳನ್ನು ಅವರಿಗೆ ನೀಡಿದೆ ಎಂದರು ನಾ. ಡಿಸೋಜಾ.ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ ಸಿನಿಮಾ ತಂಡ ಚಿತ್ರದ ಆಡಿಯೊ ಸೀಡಿ ಬಿಡುಗಡೆ ಮಾಡಿತು. ಕೆಲ ಕಾಲ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಿದ್ದ ಮನು, ಹಲವು ಸಾಕ್ಷ್ಯಚಿತ್ರ ಮತ್ತು ಕಾರ್ಪೊರೇಟ್‌ ಚಿತ್ರಗಳನ್ನು ತಯಾರಿಸಿದ ಅನುಭವ ಹೊಂದಿದ್ದಾರೆ. ಅನುಪಮ್‌ ಖೇರ್‌ ನಟನಾ ಶಾಲೆಯಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಎ.ಎಂ. ನೀಲ್‌ ಮಟ್ಟು ಹಾಕಿದ್ದಾರೆ.ನಟ ವಿಕ್ರಮ್‌, ಉದಯ್‌ ಕುಮಾರ್, ಲಹರಿ ವೇಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಚಿತ್ರದ ನಾಯಕಿ ಶ್ವೇತಾ ಶ್ರೀವಾಸ್ತವ ಅವರ ನಟನೆಯ ಮೊದಲ ಚಿತ್ರವಿದು. ಆದರೆ ಆಡಿಯೊ ಬಿಡುಗಡೆ ಸಮಾರಂಭಕ್ಕೆ ಅವರು ಗೈರುಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry