‘ಆಧಾರ್‌’ ಅವಾಂತರ

7

‘ಆಧಾರ್‌’ ಅವಾಂತರ

Published:
Updated:

ಕಣ್ಣೂರು ಬೆಂಗಳೂರು ಪೂರ್ವ (ತಾ) ಬೆಂಗಳೂರು (ಜಿ) ಇಲ್ಲಿ ‘ಆಧಾರ್‌’ ಗುರುತಿನ ಚೀಟಿ ನೋಂದಣಿಗಾಗಿ ಭಾವಚಿತ್ರ ತೆಗೆಯುತ್ತಿದ್ದು ಎಲ್ಲಾ ವಿಳಾಸದಾರರಿಗೆ ನೀಡುತ್ತಿರುವ ಸ್ವೀಕೃತಿ ಪತ್ರದಲ್ಲಿ. ಕಣ್ಣೂರು ಬೆಂಗಳೂರು ದಕ್ಷಿಣ. ಕರ್ನಾಟಕ–562149 ಎಂದು ವಿಳಾಸ ಮುದ್ರಿಸುತ್ತಿದ್ದಾರೆ.ಕಣ್ಣೂರು ಗ್ರಾಮವು ಈಗಾಗಲೇ 2001ರಲ್ಲಿ ರಚನೆಯಾದ (ಕೃಷ್ಣರಾಜಪುರ) ಬೆಂಗಳೂರು ಪೂರ್ವ ತಾಲ್ಲೂಕಿಗೆ ಸೇರಿದ್ದು ‘ಕಣ್ಣೂರು ಬೆಂಗಳೂರು ಪೂರ್ವ ಕರ್ನಾಟಕ–562149’ ಎಂಬುದಾಗಿ ಸರಿಯಾಗಿ ನೀಡಲು ಸ್ಥಳದಲ್ಲೇ ಮನವಿ ಮಾಡಿದರೂ ಈಗಾಗಲೇ ಕಂಪ್ಯೂಟರ್‌ನಲ್ಲಿ ಸಿದ್ಧವಾಗಿರುವ ವಿಳಾಸ ಬದಲಿಸಲು ಸಾಧ್ಯವಿಲ್ಲ ಕಂಪ್ಯೂಟರ್‌ ಕೇಂದ್ರದಲ್ಲಿ ಕೇಳಿ’ ಎಂಬ ಉತ್ತರ ನೀಡುತ್ತಾರೆ.ಈ ಬಗ್ಗೆ ಬೆಂಗಳೂರಿನ ‘ಆಧಾರ್‌’ ಕೇಂದ್ರಕ್ಕೆ ಇ ಮೇಲ್‌ ಮೂಲಕ ಮನವಿ ಸಲ್ಲಿಸಿದಲ್ಲಿ ‘ಸ್ವಯಂ ದೃಢೀಕರಿಸಿದ’ ವಿಳಾಸ ಪುರಾವೆಯನ್ನು ಅಪ್‌ಲೋಡ್‌ ಮಾಡಿ ವೆಬ್‌ಸೈಟ್‌ ಮೂಲಕ ಸಲ್ಲಿಸುವಂತೆ ಸೂಚನೆ ಕೊಡುತ್ತಾರೆ.ಗ್ರಾಮದ ಸಾವಿರಾರು ಗ್ರಾಹಕರು ತಮ್ಮದಲ್ಲದ ತಪ್ಪಿಗೆ ವಿಳಾಸ ಪುರಾವೆ ಅಪ್‌ಲೋಡ್‌ ಮಾಡಿ ವೆಬ್‌ಸೈಟ್‌ ಮೂಲಕ ತಿದ್ದುಪಡಿಗಾಗಿ ಮನವಿ ಮಾಡಲು ಸಾಧ್ಯವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry