‘ಆಧಾರ್‌’ ಇದ್ದರಷ್ಟೇ ಪಡಿತರ ಚೀಟಿ: ಸಚಿವ ದಿನೇಶ್

7

‘ಆಧಾರ್‌’ ಇದ್ದರಷ್ಟೇ ಪಡಿತರ ಚೀಟಿ: ಸಚಿವ ದಿನೇಶ್

Published:
Updated:

ಬೆಂಗಳೂರು: ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪಡಿತರ ಚೀಟಿ ಗಳನ್ನು ‘ಆಧಾರ್‌’ ಸಂಖ್ಯೆಗೆ ಜೋಡಿಸಲಾ­ಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.ಹೊಸದಾಗಿ ಪಡಿತರ ಚೀಟಿಗಳನ್ನು ವಿತರಿಸುವಾಗ ಆಧಾರ್‌ ಸಂಖ್ಯೆ ಪಡೆಯ ಲಾಗುವುದು. ಈಗಾಗಲೇ ಕಾರ್ಡ್‌ ಹೊಂದಿದ್ದರೆ ನವೀಕರಣ ಸಂದರ್ಭದಲ್ಲಿ ಆಧಾರ್‌ ಸಂಖ್ಯೆ ನೀಡಬೇಕಾಗುತ್ತದೆ ಎಂದು ಗುರುವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಆಧಾರ್‌ಗೆ ಸಂಪರ್ಕ ಕಲ್ಪಿಸುವು­ದರಿಂದ ನಕಲಿ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಬಹುದು. ವ್ಯವಸ್ಥೆಯಲ್ಲಿ  ಪಾರದರ್ಶಕತೆ ಇರುತ್ತದೆ ಎಂದರು.ಮೈಸೂರು, ತುಮಕೂರು, ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಆಧಾರ್‌ ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಆ ಜಿಲ್ಲೆಗಳ ಗ್ರಾಹಕರಿಗೆ ಸೀಮೆಎಣ್ಣೆ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು.  ಸದ್ಯ ಒಂದು ಲೀಟರ್‌ ಸೀಮೆಎಣ್ಣೆಗೆ ರೂ.16.20 ಸಬ್ಸಿಡಿ ನೀಡಲಾಗುತ್ತಿದೆ ಎಂದರು.ತಪ್ಪೇನಿಲ್ಲ

ಸಚಿವರ ಸಾಧನೆಯ ಮೌಲ್ಯ­ಮಾಪನ ತಪ್ಪಲ್ಲ. ಇದರಿಂದ ನಾವೂ ಪಾಸಾಗ ಬೇಕೆಂಬ ಮನೋಭಾವ ನಮ್ಮಲ್ಲಿ ಬರುತ್ತದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry