‘ಆರು ಆಟಗಾರರು ಆಡಬೇಕಿತ್ತು’

7

‘ಆರು ಆಟಗಾರರು ಆಡಬೇಕಿತ್ತು’

Published:
Updated:

ನವದೆಹಲಿ (ಪಿಟಿಐ): ‘ನ್ಯೂಜಿಲೆಂಡ್‌ ಎದುರಿನ ಸರಣಿಗೆ ಆಯ್ಕೆಯಾಗಿರುವ ಭಾರತದ ಆರು ಆಟಗಾರರು ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಡಬೇಕಿತ್ತು’ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.ಸ್ಟುವರ್ಟ್‌ ಬಿನ್ನಿ (ಕರ್ನಾಟಕ), ಮೊಹಮ್ಮದ್‌ ಶಮಿ (ಬಂಗಾಳ), ಭುವನೇಶ್ವರ್‌ ಕುಮಾರ್‌, ಸುರೇಶ್‌ ರೈನಾ (ಇಬ್ಬರೂ ಉತ್ತರ ಪ್ರದೇಶ), ರೋಹಿತ್‌ ಶರ್ಮ  ಮತ್ತು ಅಜಿಂಕ್ಯ ರಹಾನೆ (ಇಬ್ಬರೂ ಮುಂಬೈ) ರಣಜಿ ಆಡಬೇಕಿತ್ತು ಎಂದು ದ್ರಾವಿಡ್‌ ನುಡಿದರು. ಆದರೆ, ಕಿವೀಸ್‌ ಎದುರಿನ ಏಕದಿನ ಸರಣಿಗೆ ಆಯ್ಕೆಯಾಗಿರುವ ಕಾರಣ ಇವರಿಗೆ ರಣಜಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry