‘ಆರೋಗ್ಯಕರ ಸಮಾಜ ನಿರ್ಮಾಣ ಗುರಿಯಾಗಲಿ’

7

‘ಆರೋಗ್ಯಕರ ಸಮಾಜ ನಿರ್ಮಾಣ ಗುರಿಯಾಗಲಿ’

Published:
Updated:

ಆನೇಕಲ್‌: ಸಮಾಜದಲ್ಲಿ ವಿವಿಧ ಕೋಮುಗಳ ನಡುವೆ ಸೌಹಾರ್ದತೆ ಮೂಡಿಸಿ ರಾಷ್ಟ್ರೀಯ ಭಾವೈಕ್ಯ ಬೆಳೆಸುವಲ್ಲಿ ಯುವಕರು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕ ವಿಕಾಸ್‌ ಕುಮಾರ್‌ ನುಡಿದರು.ತಾಲ್ಲೂಕಿನ ಚಂದಾಪುರ ಚಿನ್ಮಯ ಸೇವಾ ಸಂಸ್ಥೆ, ಸುವರ್ಣ ಕರ್ನಾಟಕ ಪದವೀಧರರ ಸಂಘ ಹಾಗೂ ಕೇಂದ್ರ ಗೃಹ ಸಚಿವಾಲಯ ಸಹಯೋಗದಲ್ಲಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಭಾವೈಕ್ಯ ಮತ್ತು ಕೋಮು ಸೌಹಾರ್ದತೆ ಮೂಡಿಸುವಲ್ಲಿ ಯುವಕರ ಪಾತ್ರ’ ಎಂಬ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಯುವಕರು ತಮ್ಮನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿವಿಧ ಧರ್ಮ, ಜಾತಿಗಳ ಆಚರಣೆಗಳನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಂಡು ಪ್ರೀತಿ ವಿಶ್ವಾಸಗಳಿಂದ ಆರೋಗ್ಯಕರ ಪರಿಸರ ನಿರ್ಮಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry