‘ಆರೋಗ್ಯವೇ ಶ್ರೇಷ್ಠ ಸಂಪತ್ತು’

7

‘ಆರೋಗ್ಯವೇ ಶ್ರೇಷ್ಠ ಸಂಪತ್ತು’

Published:
Updated:

ದೇವನಹಳ್ಳಿ: ‘ದೇಹ ಮತ್ತು ಮನಸ್ಸು ಸ್ಥಿಮಿತದಲ್ಲಿ ಇದ್ದರೆ ಮಾತ್ರ ದೈನಂದಿನ ಪ್ರತಿಯೊಂದು ಚಟುವಟಿಕೆಗಳೂ ಚುರು ಕಾಗಿರುತ್ತವೆ’ ಎಂದು ತಹಶೀಲ್ದಾರ್‌ ಡಾ.ಎನ್‌. ಸಿ.ವೆಂಕಟರಾಜು ಹೇಳಿದರು.ಸರ್ಕಾರಿ  ಕಿರಿಯ ಕಾಲೇಜು ಮೈ ದಾನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆಡಳಿತ ಸಂಯು ಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸರ್ಕಾರಿ  ನೌಕರರ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.‘ನಿತ್ಯದ ಒತ್ತಡಗಳನ್ನು ಬದಿಗೆ ಸರಿಸಿ ಉತ್ತಮ ದೈಹಿಕ ಆರೋಗ್ಯ ಕಾಯ್ದು ಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಜಿಡ್ಡು ಗಟ್ಟಿದ ಬುದ್ಧಿಯು ಚುರುಕುಗೊಳ್ಳು ತ್ತದೆ’ ಎಂದರು.ಕ್ರೀಡಾ ಧ್ವಜವಂದನೆ ಸಲ್ಲಿಸಿ ಮಾತ ನಾಡಿದ ಶಾಸಕ ಪಿಳ್ಳಮುನಿ ಶಾಮಪ್ಪ  ‘ಸಾಮಾನ್ಯವಾಗಿ 40 ವರ್ಷಗಳ ನಂತರ ಪ್ರತಿಯೊಬ್ಬರ ಆರೋಗ್ಯದಲ್ಲಿ ಏರು ಪೇರು ಕಂಡುಬರುವುದು ಸಹಜ.  ಸರ್ಕಾರವು ನೌಕರರಿಗೆ ಏನೆಲ್ಲಾ ಸವ ಲತ್ತುಗಳನ್ನು ಕೊಟ್ಟರೂ ಆರೋಗ್ಯ ವನ್ನು ನೀಡುವುದು ಕಷ್ಟ. ಆದ್ದರಿಂದ ಪ್ರತಿ ಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕರ್ತವ್ಯದ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.ಕ್ರೀಡಾಕೂಟ ಉದ್ಘಾಟಿಸಿದ ತಾಲ್ಲೂ ಕು ಪಂಚಾಯ್ತಿ ಅಧ್ಯಕ್ಷೆ ರಾಧಿಕಾ, ಕ್ರೀಡಾ ಜ್ಯೋತಿ ಸ್ವೀಕರಿಸಿದ ತಾಲ್ಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಹನುಮಂತ ರಾಯಪ್ಪ ಮಾತನಾಡಿದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಪಟಾಲಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಆರ್‌.ರವಿಕುಮಾರ್‌, ತಾಲ್ಲೂಕು ಅಧ್ಯಕ್ಷ ಕೆ.ಶ್ರೀನಿವಾಸಗೌಡ, ತಾ.ಪಂ  ಕಾರ್ಯ ನಿವರ್ಹಣಾಧಿಕಾರಿ ಕೃಷ್ಣಪ್ಪ ಲೋಹಾರ್‌, ತಾಲ್ಲೂಕು ಸರ್ಕಾರಿ  ನೌಕರರ ಸಂಘದ ಪ್ರಧಾನ ಕಾರ್ಯ ದರ್ಶಿ ಚಂದ್ರಶೇಖರ್‌, ಖಜಾಂಚಿ ರಾಘ ವೇಂದ್ರ ರಾಜ್ಯ ಪರಿಷದ್‌ ಸದಸ್ಯ ನಟ ರಾಜ್‌, ಗೌರವಾಧ್ಯಕ್ಷ ರಾಮಾನುಜ ಯ್ಯ, ಹಿರಿಯ ಉಪಾಧ್ಯಕ್ಷ ಗೋವಿಂದ ರಾಜು, ಉಪಾಧ್ಯಕ್ಷ ಅನ್ಸಾರಿ, ರಾಜು, ಸಂಘಟನಾ ಕಾರ್ಯದರ್ಶಿ ಪ್ರಭಾಕರ್‌ ಮತ್ತು ಮಂಜುನಾಥ್‌, ಸಹ ಕಾರ್ಯ ದರ್ಶಿ ಶ್ರೀನಿವಾಸಲು ನಾಗಭೂಷಣಾ ಚಾರ್‌, ಕ್ರೀಡಾ ಕಾರ್ಯ ದರ್ಶಿ ಆಂಜಿನಪ್ಪ, ಯೋಗಾನಂದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ವೆಂಕಟಾಚಲ ಹಾಗೂ ನಿರ್ದೇಶಕರು ಇದ್ದರು.ಶಿಕ್ಷಕಿ ಹಮೀದಾ ಬಾನು ಪ್ರಾರ್ಥಿ ಸಿದರು. ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಬಸವ ರಾಜು ವಂದಿಸಿದರು. ಶಿಕ್ಷಕಿ ಮೋಹಿನಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry