ಗುರುವಾರ , ಫೆಬ್ರವರಿ 25, 2021
17 °C

‘ಆರ್ಥಿಕ ಸಬಲೀಕರಣ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆರ್ಥಿಕ ಸಬಲೀಕರಣ ಅಗತ್ಯ’

ರಾಮನಗರ: ಇಂದಿನ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಪುರುಷರು ಆರ್ಥಿಕ ಸಬಲತೆ ಪಡೆಯುವ ಮೂಲಕ ಸಮಾಜದಲ್ಲಿ ಮಾದರಿಯಾಗಿ ಜೀವನ ನಡೆಸುವಂತಾ ಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಅವರು

ಹೇಳಿದರು.ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ಭಾನುವಾರ ನಡೆದ ಕಸಬಾ ವಲಯದ ಹರಿಸಂದ್ರ-ಪಾದರಹಳ್ಳಿ ಪ್ರಗತಿಬಂಧು ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವಸಹಾಯ ಸಂಘಗಳನ್ನು ರಚಿಸಿ ಉಳಿಸಿದ ಹಣದಲ್ಲಿ ವಾರಕ್ಕೊಮ್ಮೆ ಇತರರೊಂದಿಗೆ ಒಂದೆಡೆ ಸೇರಿ ಮಾತಿನ ವಿನಿಮಯ ಮಾಡಿಕೊಂಡಾಗ ನಿರ್ಮಲ ವಾದ ಬದುಕು ಮತ್ತು ಮಾನಸಿಕ ವಿಕಾಸ ವೃದ್ಧಿಯಾಗಲಿದೆ ಎಂದು ತಿಳಿಸಿದರು.ಇದಕ್ಕಾಗಿಯೇ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ವತಿಯಿಂದ ರಾಜ್ಯದಾದ್ಯಂತ 976 ಶಿಬಿರಗಳನ್ನು ಆಯೋಜಿಸಿ ಯಶ್ಸಸ್ವಿಯಾಗಿದ್ದೇವೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ ಶಿವಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯೆ ರಮಾಮಣಿ, ಗ್ರಾಮ ಪಂಚಾಯಿತಿ ಅದ್ಯಕ್ಷೆ ಲಕ್ಷ್ಮಮ್ಮ, ಲೀಲಾವತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಸೂರ್ಯನಾರಾಯಣ್,

ಕಸಬಾ ವಲಯದ ಮೇಲ್ವಿಚಾರಕಿ ನಿಶ್ಮಿತಾ, ಪಾದರಹಳ್ಳಿ ಒಕ್ಕೂಟದ ಅಧ್ಯಕ್ಷ ನಂದಾ, ಹರೀಸಂದ್ರ ಒಕ್ಕೂಟದ ಅಧ್ಯಕ್ಷ ಆನಂದ್, ಲಕ್ಷ್ಮಣ್ ಕುಮಾರ್, ಮುಖಂಡರಾದ ಶೇಖರ್, ರವಿ ಮಾದೇವ್ ಇತರರು ಉಪಸ್ಥಿತರಿದ್ದರು. 

*

ಮದ್ಯವ್ಯಸನಿಗಳನ್ನು ಗುರುತಿಸಿದರೆ ಅವರಿಗೆ 8 ದಿನಗಳ ಕಾಲ ಶಿಬಿರ ಆಯೋಜಿಸಿ ಮಾನಸಿಕ ದೈಹಿಕ ಚಿಕಿತ್ಸೆ ನೀಡುವ ಮೂಲಕ ಮದ್ಯಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ನಾವುಗಳು ಶ್ರಮಿಸೋಣ

-ಬಾಬು ನಾಯಕ್‌

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.