‘ಆರ್‌ಟಿಇ: ಮಕ್ಕಳ ನೋಂದಣಿ ಕಡ್ಡಾಯ’

7

‘ಆರ್‌ಟಿಇ: ಮಕ್ಕಳ ನೋಂದಣಿ ಕಡ್ಡಾಯ’

Published:
Updated:

ಹುಮನಾಬಾದ್‌: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಅಡಿ ಸರ್ಕಾರ ನಿಯಮ ಪ್ರಕಾರ ಶೇ 25ರಷ್ಟು ಮಕ್ಕಳ ನೋಂದಣಿ ಕಡ್ಡಾಯ ಎಂದು ಆರ್‌ಟಿಇ ಜಿಲ್ಲಾ ನೋಡಲ್‌ ಅಧಿಕಾರಿ ಹಣಮಂತಪ್ಪ ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಆರ್‌ಟಿಇ ಪಾಲನೆ ಕುರಿತು  ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.6ರಿಂದ 14ವರ್ಷದ ಮಕ್ಕಳು ಅದರಲ್ಲಿಯೂ ಮೀಸಲಾತಿ ನಿಯಮ ಪ್ರಕಾರ ವಲಸೆ ಮಕ್ಕಳು, ಎಚ್‌ಐವಿ ಸೋಂಕಿತ ಮಕ್ಕಳು, ಬೀದಿ ಮಕ್ಕಳನ್ನು   ಕಡ್ಡಾಯವಾಗಿ ನೋಂದಣಿ ಮಾಡಿ­ಕೊಳ್ಳ­­ಬೇಕು.ಕಾಯ್ದೆ ಪ್ರಕಾರ ಶಾಲೆ­ಯಲ್ಲಿ ಮಕ್ಕಳು ಇಲ್ಲದಿದ್ದಲ್ಲಿ ಆದಾಯ ಮಿತಿ ಆಧರಿಸಿ, ಇತರೆ ಮಕ್ಕಳನ್ನು ನೋಂದಣಿ ಮಾಡಿ­ಕೊಳ್ಳಲು ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದು  ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಯೋಜಕ ವಿಶ್ವನಾಥ ಪಾಟೀಲ, ಎಲ್ಲ ಅನುದಾನ ರಹಿತ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರು ತಪ್ಪದೇ ನಿಯಮ ಪಾಲಿಸಬೇಕು. ಈ ವಿಷಯದಲ್ಲಿ ಪಾಲಕರು ಸ್ವ ಇಚ್ಛೆಯಿಂದ ಅರ್ಜಿ ನಮೂನೆ ತುಂಬಿ ಸಹಕರಿಸುವಂತೆ ಸೂಚಿಸಬೇಕು ಎಂದು ಶಿಕ್ಷರಿಗೆ ಹೇಳಿದರು.ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಣ್ಣಸ್ವಾಮಿ ಆರ್‌ಟಿಇ ಕುರಿತು ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಹುಮನಾಬಾದ್‌ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಶಿಕ್ಷಕರು ಪಾಲ್ಗೊಂಡಿದ್ದರು.ಸುರೇಂದ್ರನಾಥ ಹುಡಗೀಕರ್‌ ಸ್ವಾಗತಿಸಿದರು. ಭೀಮಶಾ ನಿರೂಪಿಸಿದರು. ಶಾಂತವೀರ ಯಲಾಲ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry