‘ಆಳ್ವಾಸ್ ನುಡಿಸಿರಿ ವಿಶ್ವಮಾನ್ಯ’

7
ಹೆಬ್ರಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವ್ಯೆಭವ

‘ಆಳ್ವಾಸ್ ನುಡಿಸಿರಿ ವಿಶ್ವಮಾನ್ಯ’

Published:
Updated:

ಹೆಬ್ರಿ: ಆಳ್ವಾಸ್‌ನ  ಶ್ರೀಮಂತ ಕಲಾ ಪ್ರಕಾರಗಳು ವಿಶ್ವಮಾನ್ಯವಾಗಿದ್ದು, ನಾಡಿನ ಜನತೆಯ ಮನಸ್ಸು ಮತ್ತು ಬದುಕನ್ನು ಅರಳಿಸುವ ಕೆಲಸ ಆಳ್ವರಿಂದ ನಡೆಯುತ್ತಿದೆ ಎಂದು  ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದರು.ಅವರು ಹೆಬ್ರಿಯ ಶೀಲಾ ಸುಬೋಧ ಬಲ್ಲಾಳ್ ಬಂಟರ ಭವನದಲ್ಲಿ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಹೆಬ್ರಿ ಘಟಕದ ವತಿಯಿಂದ ಭಾನುವಾರ ನಡೆದ ಆಳ್ವಾಸ್ ಸಾಂಸ್ಕ್ರತಿಕ ವ್ಯೆಭವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ, ಈ ವರ್ಷದ ಡಿಸೆಂಬರ್ ನಲ್ಲಿ ವಿಶ್ವ ನುಡಿಸಿರಿ ನಡೆಯಲಿದ್ದು, ವಿಶ್ವದ ಜನ ವಿಶ್ವನುಡಿಸಿ ರಿಯಾಗಬೇಕು ಜನ ಮರುಳು ಜಾತ್ರೆಯಾಗಬಾರದು ಅದಕ್ಕಾಗಿ ವಿಶ್ವ ಸುತ್ತಿ ಸಂಯೋಜನೆ ಮಾಡುತ್ತಿದ್ದೇನೆ ಎಂದರು.ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಹೆಬ್ರಿ ಘಟಕದ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಸುಮಾ ನವೀನ ಅಡ್ಯಂತಾಯ, ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ.ರಾವ್ ಶಿವಪುರ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭೂತುಗುಂಡಿ ಕರುಣಾಕರ ಶೆಟ್ಟಿ, ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಜಿ.ಸುಧಾಕರ್, ಹೆಬ್ರಿ ನವೋದಯ ವಿದ್ಯಾಲಯದ ಪ್ರಾಂಶುಪಾಲ ಕೆ.ವಿ.ಸುರೇಶ್, ಎಸ್ ಆರ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಹೆರಾಲ್ಡ್ ಲೂಯಿಸ್, ಅಮೃತಭಾರತಿ ಕಾಲೇಜು ಪ್ರಾಂಶುಪಾಲ ಅಮರೇಶ ಹೆಗ್ಡೆ, ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲ ದಿವಾಕರ ಮರಕಾಲ ಇತರರು ಹಾಜರಿದ್ದರು.ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಆಚಾರ್ಯ,ಜೇಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಜೋಯಿಸ್,ಚ್ಯೆತನ್ಯ ಯುವ ವ್ರಂದದ ಅಧ್ಯಕ್ಷ ಉಮೇಶ ನಾಯಕ್,ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಹೆಬ್ರಿ ಘಟಕದ ಗೌರವ ಅಧ್ಯಕ್ಷ ಎಚ್.ಪ್ರಸನ್ನ ಬಲ್ಲಾಳ್, ಕಾರ್ಯದರ್ಶಿ ಸೀತಾನದಿ ವಿಠ್ಠಲ ಶೆಟ್ಟಿ, ಕೋಶಾಧಿಕಾರಿ ನವೀನ ಅಡ್ಯಂತಾಯ, ಹೆಬ್ರಿ ಶಾರದಾ ಮಹೋತ್ಸವ ಸಮಿ ತಿಯ ಗೌರವ ಅಧ್ಯಕ್ಷ ಎಚ್ ಪ್ರಸಾದ ಬಲ್ಲಾಳ್, ವಾದಿರಾಜ ಶೆಟ್ಟಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry