ಶುಕ್ರವಾರ, ಜೂನ್ 18, 2021
26 °C

‘ಇಂಗ್ಲಿಷ್‌ ಇಸ್‌ ಗ್ರೇಟ್‌’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿರುವ ಇಂಗ್ಲೆಂಡ್‌ ಉಪ ರಾಯಭಾರಿಗಳ ಕಚೇರಿ ವತಿಯಿಂದ ಗುರುವಾರ ‘ಇಂಗ್ಲಿಷ್‌ ಇಸ್‌ ಗ್ರೇಟ್‌’ ಅಭಿಯಾನ­ವನ್ನು ಹಮ್ಮಿಕೊಳ್ಳಲಾಗಿತ್ತು. ಅಂತರ­ರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಈ ಭಾಷೆಯ ಶ್ರೇಷ್ಠತೆ ಕುರಿತು ಅಭಿಯಾನದಲ್ಲಿ ತಜ್ಞರಿಂದ ಉಪನ್ಯಾಸ­ಗಳನ್ನು ಏರ್ಪಡಿಸಲಾಗಿತ್ತು.ನಗರದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ವಿಶೇಷವಾಗಿ ಈ ಅಭಿ­ಯಾನದಲ್ಲಿ ಪಾಲ್ಗೊಂಡಿದ್ದರು. ‘ಒಳ್ಳೆಯ ಉದ್ಯೋಗಾವಕಾಶ ಪಡೆ­ಯು­ವಂತಹ ಕೌಶಲವನ್ನು ಯುವಕರಿಗೆ ಹೇಳಿಕೊಡುವುದು ಇಂಗ್ಲೆಂಡ್‌ ಮತ್ತು ಭಾರತದ ಮುಂದಿರುವ ಮುಖ್ಯ ಸಮಸ್ಯೆ­ಯಾಗಿದೆ.ಕೌಶಲ ಅಭಿವೃದ್ಧಿಗಾಗಿ ಎರಡೂ ದೇಶಗಳು ಜಂಟಿಯಾಗಿ ಯೋಜನೆ ಹಾಕಿಕೊಳ್ಳುವ ಅಗತ್ಯವಿದೆ’ ಎಂದು ಇಂಗ್ಲೆಂಡ್‌ನ ಉಪ ರಾಯಭಾರಿ ಇಯಾನ್‌ ಫೆಲ್ಟನ್‌ ಹೇಳಿದರು. ಬಿಎನ್‌ಎಂ ಇನ್ಸ್‌ಟಿಟ್ಯೂಟ್‌ನ ಡಾ.ಡಿ.ಎಚ್‌. ರಾವ್‌, ಪ್ರೊ. ಸುರೇಶ್‌, ಕ್ರೋನೋಸ್‌ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಜೇಮ್ಸ್‌ ಥಾಮಸ್‌ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.