‘ಈ ನಾಯಕ್ ಆ ನಾಯಕ್‌ ತರಹ ಅಲ್ಲ’

7

‘ಈ ನಾಯಕ್ ಆ ನಾಯಕ್‌ ತರಹ ಅಲ್ಲ’

Published:
Updated:

ನಾಯಕ್ ರಿಟರ್ನ್ ‘ನಾಯಕ್’ ಚಿತ್ರದ ಮುಂದುವರಿದ ಭಾಗವಲ್ಲ. ಕತೆಯಲ್ಲಿ ಸಾಮ್ಯವಿದೆ. ಆದರೂ ಇದೊಂದು ಭಿನ್ನವಾದ ಮತ್ತು ವಿಶಿಷ್ಟವಾದ ಸಿನಿಮಾ ಎಂದು ಅನಿಲ್‌ ಕಪೂರ್‌ ಹೇಳಿದ್ದಾರೆ.‘ತೇರೆ ಬಿನ್‌ ಲಾಡೆನ್’ ಚಿತ್ರದ ಖ್ಯಾತಿಯ ನಿರ್ದೇಶಕ ಅಭಿಷೇಕ್‌ ಶರ್ಮಾ ಅವರ ‘ಶರ್ಮಾಜಿ ಕಾ ಅಟಂ ಬಾಂಬ್‌’ ಚಿತ್ರದಲ್ಲಿ ತಬು ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.ರಾಜಕುಮಾರ್‌ ಸಂತೋಷಿ ಜೊತೆಗೆ ದೇಶ ವಿಭಜನೆ ಸಂದರ್ಭದ ಕುರಿತ ಚಿತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಅನಿಲ್‌ ವಿವರಿಸಿದ್ದಾರೆ. ಈ ಹಿಂದೆ ‘ಲಜ್ಜಾ’ ಹಾಗೂ ‘ಪುಕಾರ್‌’ ಚಿತ್ರಗಳಲ್ಲಿ ಈ ಜೋಡಿ ಕೆಲಸ ಮಾಡಿತ್ತು. ‘ಸಂತೋಷಿ ಅವರೊಂದಿಗೆ ಚಿತ್ರ ಮಾಡುವುದೆಂದರೆ ಹೊಸ ಅನುಭವಕ್ಕೆ ಸಿದ್ಧವಾಗುವುದು ಎಂದೇ ಅರ್ಥ. ನನ್ನ ಜೀವಮಾನದಲ್ಲಿಯೇ ಮಾಡದಂಥ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸುತ್ತಿದ್ದೇನೆ ಎಂದು ಮಾತ್ರ ಹೇಳಬಲ್ಲೆ’ ಎಂದಿದ್ದಾರೆ ಅನಿಲ್‌ ಕಪೂರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry