ಭಾನುವಾರ, ಜೂನ್ 13, 2021
26 °C

‘ಉದ್ಯಮ ಪರವಾನಗಿ ನವೀಕರಣ ಶುಲ್ಕ ಹೆಚ್ಚಳ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉದ್ಯಮ ಪರವಾನಗಿ ನವೀಕರಣ ಶುಲ್ಕವನ್ನು ಹೆಚ್ಚಳ ಮಾಡುವುದಿಲ್ಲ, ಪರಿಷ್ಕರಣೆಗೂ ಮೊದಲಿದ್ದ ಶುಲ್ಕವನ್ನೇ ಮುಂದುವರಿಸ ಲಾಗುತ್ತದೆ. ಪರವಾನಗಿ ನವೀಕರಣ ಶುಲ್ಕವನ್ನು ಮಾರ್ಚ್ ತಿಂಗಳ ಅಂತ್ಯದವರೆಗೆ ಯಾವುದೇ ದಂಡ ಇಲ್ಲದೆ ಕಟ್ಟಬಹುದು ಎಂದು  ಎಂದು ನಗರಸಭಾ ಅಧ್ಯಕ್ಷ ಪಿ. ಯುವರಾಜ ಪ್ರಕಟಣೆ ತಿಳಿಸಿದ್ದಾರೆ.೧೯೮೭ರ ನಂತರ ಉದ್ಯಮ ಪರವಾನಗಿ ಶುಲ್ಕವನ್ನು ಪರಿಷ್ಕರಣೆ ಮಾಡದೇ ಇದ್ದುದನ್ನು ಗಮನಿಸಿ, ಜಿಲ್ಲಾಧಿಕಾರಿಯವರು ನಗರಸಭೆಯ ಆಡಳಿತ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಪರವಾನಗಿ ನವೀಕರಣ ಶುಲ್ಕ ಹೆಚ್ಚಳ ಮಾಡಿದ್ದಾರೆ.ಜಿಲ್ಲಾಧಿಕಾರಿ ಶುಲ್ಕ ಹೆಚ್ಚು ಮಾಡಿದ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಸುಮ್ಮನಿದ್ದು, ಈಗ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶದಿಂದ  ನಗರಸಭೆಯ ಮಾಸಿಕ ಸಭೆಯಲ್ಲಿ ಗದ್ದಲ ಎಬ್ಬಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ನಗರಸಭೆಯ ಪ್ರಸ್ತುತ ಆಡಳಿತ ಮಂಡಳಿಯು ಪರವಾನಗಿ ನವೀಕರಣ ಶುಲ್ಕ ಪರಿಷ್ಕರಣೆ ಮಾಡಿದೆ ಎಂಬಂತೆ ಬಿಂಬಿಸುತ್ತಿರುವ ವರ್ತನೆ ಖಂಡನೀಯ ಎಂದು ಯುವರಾಜ ಅವರು ಹೇಳಿದ್ದಾರೆ.ಉದ್ಯಮ ಶುಲ್ಕವನ್ನು ಪರಿಷ್ಕರಣೆ ಮಾಡಿದ್ದು ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಎಂದು ಯುವರಾಜ ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.