ಬುಧವಾರ, ಜನವರಿ 22, 2020
28 °C

‘ಉಳಿತಾಯ ಮನೋಭಾವವಿಲ್ಲದೇ ಸಂಕಷ್ಟಕ್ಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಇಲ್ಲಿಯ ಸಿ.ಎಂ.ಉದಾಸಿ ಮುಖ್ಯ ರಸ್ತೆಯಲ್ಲಿನ ಚಂದ್ರಶೇಖರ ವಾಣಿಜ್ಯ ಸಂಕೀರ್ಣದಲ್ಲಿ ಎಲ್.ಐ.ಸಿ. ಗ್ರಾಹಕರ ಸೇವಾ ಕೇಂದ್ರವನ್ನು ಬುಧವಾರ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿ, ಬಡ ಮತ್ತು ಮಧ್ಯಮ ಕುಟುಂಬಕ್ಕೆ ಸೇರಿದ ಜನತೆ ತಮ್ಮ ದುಡಿಮೆಯ ಹಣವನ್ನೆಲ್ಲ ವ್ಯಯ ಮಾಡುತ್ತಿರುವ ಪರಿಣಾಮ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ.

ಭವಿಷ್ಯದ ಬದುಕಿನ ಚಿಂತೆ ಇಲ್ಲದೇ ದುಂದುವೆಚ್ಚ ಮಾಡುತ್ತಿರುವುದರಿಂದ ಇಂದು ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ವಿಷಾದಿಸಿದ ಅವರು ಉಳಿತಾಯ ಮನೋಭಾವ ಪ್ರತಿಯೊಬ್ಬರಲ್ಲಿಯೂ ಜಾಗೃತಗೊಳ್ಳಬೇಕಿದೆ. ಎಲ್.ಐ.ಸಿ. ಆರಂಭಿಸಿರುವ ಉಳಿತಾಯ ಯೋಜನೆಗಳಲ್ಲಿ ಹಣ ವಿನಿಯೋಗಿಸಿ ಭವಿಷ್ಯದ ಬದುಕಿಗೆ ಹಣ ಕೂಡಿಡುವ ನಿಟ್ಟಿನಲ್ಲಿ ಗಮನ ನೀಡುವಂತೆ ಕಿವಿಮಾತು ಹೇಳಿದರು.ಮುಖ್ಯ ಅತಿಥಿ, ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಪಿ.ಎಸ್.ಸಾಂಬ್ರಾಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ ಸೇವಾ ಕೇಂದ್ರ ಆರಂಭಿಸಲಾಗುತ್ತಿದೆ. ವಿಮಾ ಕಂತು ಹಣವನ್ನು ಕೇಂದ್ರದಲ್ಲಿ ಸ್ವೀಕರಿಸುವ ಜೊತೆಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು.ಸಿದ್ದಲಿಂಗೇಶ ಸಿಂಧೂರ, ರವಿ ಕೋರಿಶೆಟ್ಟರ, ಈಶ್ವರ ಕೋರಿಶೆಟ್ಟರ, ಮಹೇಶ ಕೋರಿಶೆಟ್ಟರ, ಸಿದ್ಧಲಿಂಗೇಶ ತುಪ್ಪದ, ಮಹೇಶ ಸಾಲವಟಗಿ, ಮೃತ್ಯುಂಜಯ ದುರ್ಗದ, ಮುತ್ತಪ್ಪ ಮುಚ್ಚಂಡಿ, ರಾಜೂ ಗಣಾಚಾರಿ, ರುದ್ರಾಕ್ಷಿ ಮಠಪತಿ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)