ಗುರುವಾರ , ಜೂನ್ 24, 2021
23 °C

‘ಎಂಜಿಎಸ್‌ಇ’ ಸ್ಥಗಿತಕ್ಕೆ ‘ಸೆಬಿ’ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಮಂಗಳೂರು ಷೇರು ವಿನಿಮಯ ಕೇಂದ್ರದ(ಎಂಜಿಎಸ್‌ಇ) ಷೇರು ವಹಿವಾಟು ಸ್ಥಗಿತಗೊಳಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ನೀಡಿದೆ.ಷೇರು ವಹಿವಾಟು ನಿಲ್ಲಿಸಲು ಅನುಮತಿ ನೀಡುವಂತೆ ‘ಸೆಬಿ’ಯನ್ನು ‘ಎಂಜಿಎಸ್‌ಇ’ ಕೋರಿ­ತ್ತು. ಕೆಲವು ನಿಬಂಧನೆ ವಿಧಿಸುವ ಮೂಲಕ ಒಪ್ಪಿಗೆ ನೀಡಲಾ­ಗಿದೆ. ತೆರಿಗೆಗೆ ಸಂಬಂಧಿಸಿದಂತೆ ‘ಸೆಬಿ’ಯ ಎಲ್ಲ ಮಾರ್ಗ­ಸೂಚಿಗಳನ್ನು ಪಾಲಿಸಬೇಕು. ‘ಷೇರು ವಿನಿಮಯ ಕೇಂದ್ರ’ ಎಂಬ ಹೆಸರನ್ನು ಬದಲಿಸಬೇಕು ಮತ್ತು ಆ ಹೆಸರಿನಲ್ಲಿ ಯಾವುದೇ ವಹಿವಾಟು ನಡೆಸಬಾರದು. ಷೇರು ವಹಿವಾಟು ನಿಲ್ಲಿಸುವಾಗ 2012ರ ಸುತ್ತೋಲೆಯ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದೂ ಸೂಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.