‘ಎಂಜಿನಿಯರಿಂಗ್‌ ಪದವೀಧರರಿಗೆ ಕೌಶಲ ಅಭಿವೃದ್ಧಿ ಯೋಜನೆ’

6

‘ಎಂಜಿನಿಯರಿಂಗ್‌ ಪದವೀಧರರಿಗೆ ಕೌಶಲ ಅಭಿವೃದ್ಧಿ ಯೋಜನೆ’

Published:
Updated:

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರತಿ ವರ್ಷ 10,000 ಎಂಜಿನಿಯರಿಂಗ್‌ ಪದವೀಧರರ ಕೌಶಲ ಅಭಿವೃದ್ಧಿಗಾಗಿ 'ಮಿಷನ್‌ ವಿಟಿಯು- ಎಂಪವರ್‌ 10,000' ಎಂಬ ಯೋಜನೆ  ಕೈಗೆತ್ತಿಕೊಂಡಿದೆ. ಉದ್ಯಮ ಕ್ಷೇತ್ರದಲ್ಲಿ ಅಗತ್ಯ ಇರುವ ಕೌಶಲಗಳನ್ನು ವಿಟಿಯು ಯುವ ಎಂಜಿನಿಯರ್‌ ಗಳಲ್ಲಿ ಬೆಳೆಸುವ ಮೂಲಕ ವೃತ್ತಿ ಜೀವನದಲ್ಲಿ ಯಶಸ್ವಿಗೊಳಿಸುವುದು ಹಾಗೂ ಮುಂದಿನ ಪೀಳಿಗೆಯ 100 ಶೈಕ್ಷಣಿಕ ನಾಯಕರನ್ನು ರೂಪಿಸಿ, ಭವಿಷ್ಯದ ಎಂಜಿನಿಯರ್‌ಗಳಿಗೆ ಇವರು ಮಾದರಿಯಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ.

ಎಂಜಿನಿಯ ರಿಂಗ್‌ ವೃತ್ತಿಗೆ ಅಗತ್ಯವಿರುವ ಲಘು ಕೌಶಲ, ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ದಕ್ಷತೆ ಹಾಗೂ ನಾಯಕತ್ವ ಗುಣಗಳನ್ನು ವಿಟಿಯು ಮಾನ್ಯತೆಯುಳ್ಳ ಕಾಲೇಜುಗಳು, ಉದ್ಯಮ ಗಳು, ತರಬೇತಿ ಕೇಂದ್ರಗಳು ಹಾಗೂ ವೃತ್ತಿಪರ ಸಂಸ್ಥೆಗಳ ಸಹಯೋಗದಲ್ಲಿ ಯುವ ಎಂಜಿನಿಯರ್‌ಗಳಲ್ಲಿ ಬೆಳೆಸಲು ಈ ಯೋಜನೆ ರೂಪಿಸಲಾಗಿದೆ.'ವಿದ್ಯಾರ್ಥಿಗಳಿಗೆ ಇಂಟರ್ನಷಿಪ್‌ ಕಾರ್ಯಕ್ರಮ ಆರಂಭಿಸಲಾಗುವುದು. ಇದರಿಂ ದಾಗಿ ವಿದ್ಯಾರ್ಥಿಗಳಿಗೆ ತಕ್ಷಣವೇ ಉದ್ಯಮದಲ್ಲಿ ಅನುಭವ ಹಾಗೂ ಕೌಶಲ ವೃದ್ಧಿಸಿ ಕೊಳ್ಳಲು ಅವಕಾಶ ಸಿಕ್ಕಂತಾಗಲಿದೆ' ಎಂದು ವಿಶ್ವವಿದ್ಯಾಲಯ ಮಾನ್ಯತೆಯ ಕಾಲೇಜು ಗಳ ತರಬೇತಿ ಹಾಗೂ ಉದ್ಯೋಗ ವಿನಿಯಮ ಕೇಂದ್ರದ (ಟಿಪಿಒ) ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಕುಲಪತಿ ಡಾ. ಎಚ್‌. ಮಹೇಶಪ್ಪ ಹೇಳಿದರು.

'ಇದರಿಂದ ವಿಟಿಯು ವಿದ್ಯಾರ್ಥಿಗಳು ಕೆಲಸ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗ ಲಿದ್ದಾರೆ' ಎಂದು ರಕ್ಷಣಾ ಇಲಾಖೆಯ ಡಿಆರ್‌ಡಿಒ ಹೆಚ್ಚುವರಿ ನಿರ್ದೇಶಕ ಯು. ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry