ಸೋಮವಾರ, ಜೂನ್ 14, 2021
21 °C

‘ಎತ್ತಿನಹೊಳೆ ಯೋಜನೆಗೆ ವಿರೋಧ ಸಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ:  ಎತ್ತಿನಹೊಳೆ ಯೋಜನೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ನಮ್ಮ ಮೊದಲ ಆದ್ಯತೆ.  ಈ ಯೋಜನೆಗೆ ಯಾರೂ ವಿರೋಧ ವ್ಯಕ್ತಪಡಿಸಿ ಅಡಚಣೆ ಉಂಟು ಮಾಡುವುದು ಸರಿಯಲ್ಲ ಎಂದು ಶಾಸಕ ಕೆ.ಎಂ.  ಶಿವಲಿಂಗೇಗೌಡ ಬುಧವಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಸಮುದ್ರದ ಪಾಲಾಗುವ ನೀರನ್ನು ಮಾತ್ರ ಈ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಅಲ್ಲದೇ, ಹಾಸನ ಜಿಲ್ಲೆಯ ಸುಮಾರು 1.96 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕುಡಿಯುವ ನೀರು ದೊರಕಿಸುವುದನ್ನು ಈ ಯೋಜನೆ ಒಳಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನ ಆತಂಕ ಪಡುವ ಆಗತ್ಯವಿಲ್ಲ ಎಂದು ಅವರು ಹೇಳಿದರು.ಅನುದಾನ ಮಂಜೂರು

ಅರಸೀಕೆರೆ ವಿಧಾನಸಭಾ ಕ್ಷೇತ್ರವು ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಹಾಗೂ ನೀರಾವರಿಯಿಂದ ವಂಚಿತವಾಗಿ ಬಯಲು ಸೀಮೆಯಾಗಿರುವುದರಿಂದ ಎಬಿಐಬಿಪಿ ವಿಶೇಷ ಅನುದಾನದಡಿ ಸಣ್ಣ ನೀರಾವರಿ ಇಲಾಖೆಯಡಿ ತಾಲ್ಲೂಕಿನ ಬೆಳಗುಂಬ ಗ್ರಾಮಕ್ಕೆ ₨ 55 ಲಕ್ಷ, ಹರತನಹಳ್ಳಿ ಗ್ರಾಮಕ್ಕೆ ₨ 88 ಲಕ್ಷ, ಸೋಮಶೆಟ್ಟಿಹಳ್ಳಿಗೆ ₨ 55 ಲಕ್ಷ, ಚಿಕ್ಕಮೇಟಿಕುರ್ಕೆಗೆ ₨ 65 ಲಕ್ಷ, ವಾಲೇಹಳ್ಳಿ ಗ್ರಾಮಕ್ಕೆ ₨ 52 ಲಕ್ಷ, ಬೇವಿನಮರದಹಟ್ಟಿ ₨ 54 ಲಕ್ಷ, ಶಾಂತನಹಳ್ಳಿಗೆ ₨ 70 ಲಕ್ಷ, ಮುರುಂಡಿ ₨ 56 ಲಕ್ಷ ಹಾಗೂ ಕ್ಯಾತನಹಳ್ಳಿ ಬಂಜಾರ ತಾಂಡ್ಯ ಒಟ್ಟು 9 ಗ್ರಾಮಗಳ ಬಳಿ ಚೆಕ್‌ ಡ್ಯಾಂ ನಿರ್ಮಿಸಲು ಒಟ್ಟು ₨ 5.55 ಕೋಟಿಗಳ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ ಎಂದು ಅವರು ತಿಳಿಸಿದರು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಕಸಬಾ ಹೋಬಳಿಯ ಗುತ್ತಿನಕೆರೆ ಕೆರೆಕೋಡಿಹಳ್ಳಿ, ಮಹದೇವರಹಳ್ಳಿ, ಚಿಕ್ಕಗಂಡಸಿ, ಬೆಲ್ವತಹಳ್ಳಿ, ಕುರುವಂಕ, ಮನಕತ್ತೂರು, ಬಂಡೀಹಳ್ಳಿ, ಗೊಲ್ಲರಹಳ್ಳಿ  ಸೇರಿದಂತೆ ಒಟ್ಟು 10 ಗ್ರಾಮಗಳಿಗೆ ತಲಾ ₨ 20 ಲಕ್ಷ ವೆಚ್ಚದಲ್ಲಿ ಗ್ರಾಮದ ಒಳಭಾಗ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಅವರು ವಿವರಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯ ಹುಚ್ಚೇಗೌಡ, ತಾಲ್ಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಎನ್‌.ಎಸ್‌. ಸಿದ್ದರಾಮಶೆಟ್ಟಿ, ಕಾರ್ಯದರ್ಶಿ ಸುಬ್ರಮಣ್ಯ ಬಾಬು, ತಾಲ್ಲೂಕು ಯುವ ಜನತಾ ಘಟಕದ ಅಧ್ಯಕ್ಷ ಬಿ.ಎಸ್‌. ಅಶೋಕ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಹೇಮಂತ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.