ಶುಕ್ರವಾರ, ಫೆಬ್ರವರಿ 26, 2021
27 °C

‘ಎದುರಾಳಿ ಅಭ್ಯರ್ಥಿಗಳು ಲೆಕ್ಕಕ್ಕಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಎದುರಾಳಿ ಅಭ್ಯರ್ಥಿಗಳು ಲೆಕ್ಕಕ್ಕಿಲ್ಲ’

ಚಿಕ್ಕಮಗಳೂರು:  ಉಡುಪಿ-ಚಿಕ್ಕಮಗಳೂರು ಕ್ಷೇತ್ರ ದಲ್ಲಿ ಎದುರಾಳಿ ಅಭ್ಯರ್ಥಿಗಳು ನಮಗೆ ಲೆಕ್ಕಕ್ಕಿಲ್ಲ ಎಂದು ಕ್ಷೇತ್ರದ ಜೆಡಿಎಸ್‌ ಸಂಭವನೀಯ ಅಭ್ಯರ್ಥಿ ವಿ.ಧನಂಜಯಕುಮಾರ್ ತಿಳಿಸಿದರು.ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತ ನಾಡಿದ ಅವರು, ಮಂಗಳೂರಿನಲ್ಲಿ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಅವರಂತಹ ಘಟಾನು ಘಟಿಗಳನ್ನು ಎದುರಿಸಿ ಗೆದ್ದಿದ್ದೇನೆ. ಕ್ಷೇತ್ರ ವಿಭಿನ್ನ ಭೌಗೋಳಿಕ ಪ್ರದೇಶ ಹೊಂದಿದ್ದು, ಕರಾವಳಿ, ಮಲೆ ನಾಡು, ಬಯಲುಸೀಮೆ ಪ್ರದೇಶ ಒಳಗೊಂಡಿದೆ. ಕಾಫಿ, ಅಡಿಕೆ, ಮೆಣಸು ಇನ್ನಿತರೆ ಬೆಳೆಗಾರರ ಸಮಸ್ಯೆ ಬಲ್ಲವನಾಗಿದ್ದೇನೆ. ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸರಿಯಾದ ಮಾರ್ಗ ತೋರಿಸುವ ಶಕ್ತಿ ತೃತೀಯ ರಂಗಕ್ಕೆ ಮಾತ್ರ ಇದೆ. ದೇವೇಗೌಡರಂತಹ ನಾಯಕತ್ವ ತೃತೀಯ ರಂಗಕ್ಕೆ ಇದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಬದಲಾವಣೆ ಆಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.ಅರಣ್ಯ ಒತ್ತುವರಿ ಸಮಸ್ಯೆ ಎದುರಿಸುವ ಶಕ್ತಿ ನಮಗಿದೆ. ಇದಕ್ಕಾಗಿ ಪ್ರಾಣ ತೆತ್ತಾದರೂ ಹೋರಾಟ ಮಾಡುತ್ತೇವೆ. ನ್ಯಾಯಾಲಯಕ್ಕೆ ವಾಸ್ತವ ಮನವರಿಕೆ ಮಾಡುತ್ತೇವೆ. ಇಲ್ಲಿಗೆ ತಾವು ಪಕ್ಷದ ಅಭ್ಯರ್ಥಿಯಗಿ ಬಂದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಅವರ ಪ್ರತಿನಿಧಿಯಾಗಿ ಬಂದಿದ್ದೇನೆ. ಅಭ್ಯರ್ಥಿ ಆಗಬೇಕು, ಬೇಡ ಎನ್ನವುದನ್ನು ಪಕ್ಷದ ಸಂಸದೀಯ ಮಂಡಳಿ ತಿರ್ಮಾನಿಸುತ್ತದೆ ಎಂದರು.ಪಕ್ಷಕ್ಕೆ ಕಾರ್ಯಕರ್ತರೆ ಮೂಲ ಅಧಾರ ಸ್ತಂಭ, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಇಲ್ಲಿನ ಕಾರ್ಯ ಕರ್ತರಲ್ಲಿ ಉತ್ಸಾಹ ಇದೆ. ಪಕ್ಷದಲ್ಲಿ ನಾನು ಹೇಳಿದ್ದೇ ಸರ್ವಸ್ವ ಎನ್ನುವ ಮನೋಭಾವ ಇರಬಾರದು. ಅದು ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ. 40 ವರ್ಷಗಳ ದೀರ್ಘ ಕಾಲದಿಂದಲೂ ರಾಜಕಾರಣ ಮಾಡಿದ್ದೇನೆ. ಸಾಮಾಜಿಕ ಕಾರ್ಯಕರ್ತನಾಗಿಯೂ ಕೆಲಸ ಮಾಡಿದ್ದೇನೆ. ಜಾತಿ ಬಲ, ಆಸ್ತಿ ಬಲ ನನಗಿಲ್ಲ. ಕಾರ್ಯಕರ್ತರೇ ನನಗೆ ಆಸ್ತಿ. ದೇವೇಗೌಡರನ್ನು ಕಳೆದ ಚುನಾವಣೆಯಲ್ಲಿ ಕೆಲವರು ಲಿಂಗಾಯತ ವಿರೋಧಿ ಎಂದು ಬಿಂಬಿಸಿ ಅಧಿಕಾರದಿಂದ ದೂರ ಇಡುವ ಸಂಚು ರೂಪಿಸಿದ್ದರು. ಈ ಬಗ್ಗೆ ಗೌಡರೇ ನಮ್ಮಂದಿಗೆ ನೋವು ತೋಡಿಕೊಂಡಿದ್ದಾರೆ. ಅವರು ಎಂದಿಗೂ ಜಾತಿ ರಾಜಕಾರಣ ಮಾಡಿದವರಲ್ಲ. ಪ್ರಾಮಾಣಿಕವಾಗಿ ಎಲ್ಲರ ಕಷ್ಟ ಸುಖಗಳಿಗೂ ಸ್ಪಂದಿಸಿದವರು ಎಂದರು.ಶಾಸಕ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜಪ್ಪ, ಮುಖಂಡರಾದ ಎಚ್.ಟಿ.ರಾಜೇಂದ್ರ, ಬಾಲಕೃಷ್ಣ ಗೌಡ, ಜ್ವಾಲನಯ್ಯ, ಪದ್ಮಾ ತಿಮ್ಮೇಗೌಡ, ಶಾಕಿರ್ ಹುಸೇನ್. ಎಂ.ಡಿ.ರಮೇಶ್‌, ಅಶೋಕ್‌, ಹೊಲದ ಗದ್ದೆ ಗಿರೀಶ್‌, ಕೆ.ಭರತ್‌ಕುಮಾರ್‌ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.