ಬುಧವಾರ, ಜೂನ್ 16, 2021
28 °C
ಎಸ್‌ಬಿಐ; ವಸೂಲಾಗದ ಸಾಲ ₨67,799 ಕೋಟಿ

‘ಎನ್‌ಪಿಎ’ ತಗ್ಗಿಸಲು ‘ಎಆರ್‌ಸಿ’ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಮುಂಬೈ(ಪಿಟಿಐ): ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) 208 ವರ್ಷಗಳ  ಇತಿಹಾಸದಲ್ಲಿ (1806ರಲ್ಲಿ ­ಬ್ಯಾಂಕ್‌ ಆಫ್‌ ಬಂಗಾಳ ಹೆಸರಿನಲ್ಲಿ ಪ್ರಾರಂಭ) ಇದೇ ಮೊದಲ ಬಾ­ರಿಗೆ, ವಸೂಲಾಗದ ಸಾಲದ ಪ್ರಮಾಣ (ಎನ್‌­ಪಿಎ) ಹೆಚ್ಚಳ ದಿಂದ ತತ್ತರಿಸಿದೆ. ಬ್ಯಾಂಕಿನ ಒಟ್ಟಾರೆ ‘ಎನ್‌ಪಿಎ’ ಅಕ್ಟೋಬರ್‌­–ಡಿಸೆಂಬರ್‌ ತ್ರೈಮಾಸಿ­ಕದ ಅಂತ್ಯಕ್ಕೆ ₨67,799 ಕೋಟಿಗೆ (ಶೇ 5.73ಕ್ಕೆ)  ಏರಿಕೆ ಕಂಡಿದೆ. ಹೀಗಾಗಿ ಈಗ ‘ಎನ್‌ಪಿಎ’ ಮರು ಹೊಂದಾಣಿಕೆ ಮಾಡಿ­­ಕೊಡುವ (ಅಸೆಟ್‌ ರಿಕನ್‌­ಸ್ಟ್ರಕ್ಷನ್‌ ಕಂಪೆನಿ–ಎಆರ್‌ಸಿ)  ಸಂಸ್ಥೆ­ಯೊಂ­ದರ ಮೊರೆ ಹೋಗು­ವುದು ‘ಎಸ್‌ಬಿಐ’ಗೆ ಅನಿವಾರ್ಯವಾಗಿದೆ.ಸಾಲ ಮರು ಹೊಂದಾಣಿಕೆ ಶೇ 2ರ ಮಿತಿಯಲ್ಲಿರಬೇಕು ಎಂಬ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹೊಸ ನಿಯಮ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ. ಹೀಗಾಗಿ ಈ ತಿಂಗಳ ಅಂತ್ಯದೊ­ಳಗೆ ಸುಮಾರು ₨5 ಸಾವಿರ ಕೋಟಿಗ ಳಷ್ಟು ‘ಎನ್‌­ಪಿಎ’­ ಮರು ಹೊಂದಾಣಿ ಕೆಗೆ ಬ್ಯಾಂಕ್‌ ಉದ್ದೇಶಿಸಿದೆ. ‘ಸದ್ಯ ದೇಶದಲ್ಲಿ 14 ‘ಎಆರ್‌ಸಿ’ಗಳು ಕಾರ್ಯ­ನಿರ್ವ­­ಹಿಸುತ್ತಿವೆ. ಈ ಸಂಸ್ಥೆಗ­ಳಲ್ಲಿ ಯಾವುದಾದರೂ ಒಂದನ್ನು ‘ಎನ್‌ಪಿಎ’ ಮರು ಹೊಂದಾ­­ಣಿಕೆಗಾಗಿ  ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಾಂತ್ಯ­ದೊಳಗೆ ಈ ಪ್ರಕ್ರಿಯೆ ಮುಗಿಯಲಿದೆ’ ಎಂದು ‘ಎಸ್‌ಬಿಐ’ನ ಹಿರಿಯ ಅಧಿಕಾರಿ­ಯೊಬ್ಬರು ಸೋಮ ವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.  ‘ಎನ್‌ಪಿಎ ಮರು ಹೊಂದಾಣಿಕೆ ಪ್ರಸ್ತಾವವನ್ನು ಪರಿಶೀಲಿ­ಸುತ್ತಿದ್ದೇವೆ’ ಎಂದು ‘ಎಸ್‌ಬಿಐ’ ಅಧ್ಯಕ್ಷೆ ಅರುಂಧತಿ ಭಟ್ಟಾ­ಚಾರ್ಯ ಮಾರ್ಚ್‌ ಆರಂಭದಲ್ಲಿ ಕೋಲ್ಕತ್ತದಲ್ಲಿ ಹೇಳಿದ್ದರು. ಸಾಮಾನ್ಯ ವಾಗಿ ‘ಎನ್‌ಪಿಎ’ ಮರು ಹೊಂದಾಣಿಕೆ ಗಾಗಿ  ‘ಎಆರ್‌ಸಿ’ ಗಳು ಒಟ್ಟು ವಸೂಲಿ ಮಾಡುವ ಸಾಲದಲ್ಲಿ ಶೇ 5ರಿಂದ ಶೇ 10ರಷ್ಟು ಕಮಿಷನ್‌ ಪಡೆಯುತ್ತವೆ. ಪ್ರಸಕ್ತ ಹಣಕಾಸು ವರ್ಷದ ಅಕ್ಟೋ ಬರ್‌–ಡಿಸೆಂಬರ್ ತ್ರೈಮಾಸಿ­ಕದಲ್ಲಿ ‘ಎಸ್‌ಬಿಐ’ನ ‘ಎನ್‌ಪಿಎ’ ₨11,400 ಕೋಟಿಗಳಷ್ಟು ಹೆಚ್ಚಿದೆ. ‘ಎನ್‌ಪಿಎ’ ಹೆಚ್ಚಳದಿಂದಾಗಿ ಬ್ಯಾಂಕಿನ ನಿವ್ವಳ ಲಾಭವೂ ಶೇ 34ರಷ್ಟು ಅಂದರೆ ₨2,234 ಕೋಟಿಗಳಷ್ಟು ಕುಸಿತ ಕಂಡಿದೆ. ಸಣ್ಣ ಮತ್ತು ಮಧ್ಯಮ ಪ್ರಮಾ ಣದ ಕಂಪೆನಿಗಳಿಂದ (ಎಸ್‌ಎಂಇ) ₨9,500 ಕೋಟಿ ಮತ್ತು ಕಾರ್ಪೊ ರೇಟ್‌ ಕಂಪೆನಿಗಳಿಂದ ₨6,165 ಕೋಟಿ ಸಾಲ ವಸೂಲಿ ಆಗಬೇಕಿದೆ. ಮೂರನೇ ತ್ರೈಮಾಸಿ­ಕದಲ್ಲಿ ₨5 ಸಾವಿರ ಕೋಟಿ ವಸೂಲಾ­ಗದ ಸಾಲ ಕೈಬಿಡಲಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲೂ (ಜನವರಿ­–ಮಾರ್ಚ್‌) ಕನಿಷ್ಠ ₨9500 ಕೋಟಿ­ಯಷ್ಟು ಸಾಲ ಮರು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರಬಹು­ದು ಎಂದು ‘ಎಸ್‌ಬಿಐ’ ಅಂದಾಜು ಮಾಡಿದೆ.2012–13ನೇ ಸಾಲಿನ ಮೂರ­ನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ‘ಎನ್‌ಪಿಎ’ ₨53,457 ಕೋಟಿಯ­ಷ್ಟಿತ್ತು. 2013–14ನೇ ಸಾಲಿನ ಎರಡನೇ ತ್ರೈಮಾಸಿಕ ದಲ್ಲಿ ಇದು ₨64,206 ಕೋಟಿಗೆ  (ಶೇ 5.64) ಏರಿಕೆ ಕಂಡಿತು.‘ಆರ್‌ಬಿಐ’ ನಿಯಮ ಏಪ್ರಿಲ್‌ 1 ರಿಂದ ಜಾರಿಗೆ ಬರುವುದರಿಂದ, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಇತರೆ ಬ್ಯಾಂಕುಗಳೆಲ್ಲವೂ ಸೇರಿ ಸುಮಾರು ₨43 ಸಾವಿರ ಕೋಟಿಗಳಷ್ಟು ‘ಎನ್‌ಪಿಎ’­­ಯನ್ನು ‘ಎಆರ್‌ಸಿ’ಗೆ ವಹಿಸಿ ಕೊಡುವ ಸಾಧ್ಯತೆ ಇದೆ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರು.ಕಳೆದ ವರ್ಷ ಮೇ ತಿಂಗಳಲ್ಲಿ ಸಾಲ ಮರು ಹೊಂದಾಣಿಕೆ ಮಿತಿಯನ್ನು ಶೇ 5ಕ್ಕೆ ಹೆಚ್ಚಿಸಲಾಗಿತ್ತು. ಸದ್ಯ ಜಾಗತಿಕ ಮಟ್ಟದಲ್ಲಿ ಇದೇ ಪ್ರಮಾಣ ಜಾರಿ­ಯ ಲ್ಲಿದೆ. ಆದರೆ, ‘ಎನ್‌ಪಿಎ’ ತಗ್ಗಿಸಲು ‘ಆರ್‌ಬಿಐ’ನ ಹೊಸ ಗವರ್ನರ್‌ ರಘುರಾಂ ರಾಜನ್‌ ಮರು ಹೊಂದಾ ಣಿಕೆ ಮಿತಿಯನ್ನು 2014–15ನೇ ಹಣ ಕಾಸು ವರ್ಷದಿಂದ ಶೇ 2ಕ್ಕೆ  ತಗ್ಗಿಸುವುದಾಗಿ ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.