‘ಎಸ್ಐಎಂ’ ವಿಡಿಯೊ ಕೇಂದ್ರ

ಸೋಮವಾರ, ಮಾರ್ಚ್ 18, 2019
31 °C

‘ಎಸ್ಐಎಂ’ ವಿಡಿಯೊ ಕೇಂದ್ರ

Published:
Updated:

‘ಕರಾಗ್ರೇ ವಸತೇ ಮೊಬೈಲ್’ ಎನ್ನುವ ಸ್ಥಿತಿ ಇಂದಿನದು. ಎಲ್ಲರಿಗೂ, ಎಲ್ಲದಕ್ಕೂ ಮೊಬೈಲ್ ಬೇಕು. ಹೀಗೆ ಎಲ್ಲ ಕೆಲಸವೂ ಮೊಬೈಲ್‌ನಲ್ಲೇ ಆಗಬೇಕು ಎಂದರೆ ಅಂತರ್ಜಾಲ ಸಂಪರ್ಕವೂ ಇರಲೇಬೇಕಲ್ಲ. ಸ್ಮಾರ್ಟ್ ಫೋನ್ ಇದ್ದು, ಅಂತರ್ಜಾಲ ಸಂಪರ್ಕವಿಲ್ಲದಿದ್ದರೆ ಅವರನ್ನು ಪರಲೋಕದ ಪ್ರಾಣಿಯಂತೆ ನೋಡುವ ಸಂದರ್ಭವಿದೆ. ಇದೆಲ್ಲದಕ್ಕೂ ಹಣ ತೆರುವುದು ಮಾತ್ರ ಅಂತಿಮ ಸತ್ಯ. ಈಗ ಇದಕ್ಕೆ ಪರ್ಯಾಯ ಮಾರ್ಗ ತೋರುತ್ತೇನೆ ಎನ್ನುತ್ತಿದೆ ‘ಎಸ್ಐಎಂ’ (ಷೋ ಇನ್ ಮೊಬೈಲ್).ಎಸ್ಐಎಂ ತನ್ನ ಚಂದಾದಾರರಿಗೆ ತಿಂಗಳಿಗೆ ₹ 75 ಶುಲ್ಕದಲ್ಲಿ ಯುಟ್ಯೂಬ್‌ನಿಂದ ಉತ್ತಮ ಗುಣಮಟ್ಟದ ವಿಡಿಯೊಗಳನ್ನು ತ್ವರಿತವಾಗಿ, ಬೇಕಾದಷ್ಟು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯ ಒದಗಿಸುತ್ತಿದೆ. ಇಲ್ಲಿ ನಿಮ್ಮಿಷ್ಟದ ಟಿವಿ ಕಾರ್ಯಕ್ರಮಗಳು, ಸಿನಿಮಾಗಳು, ಏನೆಲ್ಲವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ ಪೂರಕವಾಗುವಂತೆ ಆಯ್ದ ಸ್ಥಳಗಳಲ್ಲಿ ‘ಓಟಿಎಂ’ (ಆನ್ ದ ಮೂವ್) ಕೇಂದ್ರಗಳನ್ನು ಸ್ಥಾಪಿಸಲಿದೆ ಅಜಿಲೆಟ್ಸ್ ಇನ್ನೋವೇಷನ್ಸ್ ಪ್ರೈ. ಲಿ.ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ಸಮೀಪದ ಓಟಿಎಂ ಕೇಂದ್ರಗಳಿಗೆ ಭೇಟಿ ನೀಡಿ, ಆ ನೆಟ್‌ವರ್ಕ್‌ಗೆ ನಿಮ್ಮ ಮೊಬೈಲ್ ಅನ್ನು ಕನೆಕ್ಟ್ ಮಾಡಿಕೊಂಡು ವಿಡಿಯೊಗಳನ್ನು ಸಿಂಕ್ ಮಾಡಿ ಕೊಳ್ಳಬಹುದು. ಅದು ನಿಮ್ಮ ಮೊಬೈಲ್‌ನಲ್ಲಿ ಉಳಿದುಕೊಳ್ಳುತ್ತದೆ. ಒಂದು ವೇಳೆ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ‘ಓಟಿಜಿ ಡ್ರೈವ್’ ಬಳಸಿಯೂ ವಿಡಿಯೊ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ಬಹುತೇಕ ವೈ ಫೈ ನೆಟ್‌ವರ್ಕ್‌ನಂತೆಯೇ ಕಾರ್ಯ ನಿರ್ವಹಿಸುವ ಈ ಸೌಲಭ್ಯವನ್ನು ಪಡೆಯಬೇಕೆಂದರೆ ಗೂಗಲ್ ಪ್ಲೇ ಸ್ಟೋರ್‌ನಿಂದ ‘ಎಸ್ಐಎಂ’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗೆ: www.showinmobile.com ತಾಣವನ್ನು ಸಂಪರ್ಕಿಸಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry