‘ಎಸ್‌ಬಿಐ’ನ ಹೊಸ ಅಧ್ಯಕ್ಷೆ ಅರುಂಧತಿ?

7

‘ಎಸ್‌ಬಿಐ’ನ ಹೊಸ ಅಧ್ಯಕ್ಷೆ ಅರುಂಧತಿ?

Published:
Updated:

ನವದೆಹಲಿ(ಪಿಟಿಐ): ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಹೊಸ ಅಧ್ಯಕ್ಷರಾಗಿ ಅರುಂಧತಿ ಭಟ್ಟಾಚಾರ್ಯ ಅಥವಾ ಎಸ್‌.ವಿಶ್ವನಾಥನ್‌ ನೇಮಕ ಗೊಳ್ಳುವ ಸಾಧ್ಯತೆ ಇದೆ.ಸೇವಾವಧಿ ಪೂರ್ಣಗೊಳ್ಳಲು ಇನ್ನು 2 ವರ್ಷ ಬಾಕಿ ಉಳಿದಿರುವವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ. ಅರುಂಧತಿ ಮತ್ತು ವಿಶ್ವನಾಥನ್‌ ಇಬ್ಬರೂ ‘ಎಸ್‌ಬಿಐ’ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಇಬ್ಬರ ಹೆಸರೂ ಈ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿವೆ.ಅರುಂ­ಧತಿ ಹೆಸರನ್ನು ಹಣಕಾಸು ಸಚಿವಾಲಯ ಅಂತಿಮಗೊಳಿಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಈ ಕುರಿತು ಈ ಮಾಸಾಂತ್ಯಕ್ಕೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry