ಗುರುವಾರ , ಜನವರಿ 23, 2020
28 °C
ಹೆಚ್ಚಬೇಕಿದೆ ಜನರ ಸಹಭಾಗಿತ್ವ: ಇಲ್ಲಿಯೂ ಬೀಸಲಿದೆ ರಾಜಕೀಯದ ಹೊಸಗಾಳಿ

‘ಐಷಾರಾಮಿ ಕಾರಿದ್ದೂ ಏನು ಪ್ರಯೋಜನ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಐಷಾರಾಮಿ ಕಾರಿದ್ದೂ ಏನು ಪ್ರಯೋಜನ?’

ಬೆಂಗಳೂರು: ‘ಗುಂಡಿಬಿದ್ದ ರಸ್ತೆ ಮತ್ತು ಹೆಜ್ಜೆ–ಹೆಜ್ಜೆಗೂ ಸಂಚಾರ ದಟ್ಟಣೆ ಕಾಡುವಾಗ ನಮ್ಮಲ್ಲಿ ಐಷಾರಾಮಿ ಕಾರು ಇದ್ದಾದರೂ ಏನು ಪ್ರಯೋ ಜನ?’ ಎಂಬ ಪ್ರಶ್ನೆಯನ್ನು ಉದ್ಯಮಿ ಗಳತ್ತ ತೂರಿಬಿಟ್ಟರು, ಬೆಂಗಳೂರು ರಾಜಕೀಯ ಕಾರ್ಯ ಸಮಿತಿ (ಬಿ–ಪ್ಯಾಕ್‌) ಉಪಾಧ್ಯಕ್ಷ ಟಿ.ವಿ. ಮೋಹನ ದಾಸ್‌ ಪೈ.ಬಿ–ಪ್ಯಾಕ್‌ನಿಂದ ಗುರುವಾರ ಏರ್ಪ ಡಿಸಲಾಗಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ‘ಸುಮ್ಮನೇ ದೂರುತ್ತಾ ಕೂರುವಲ್ಲಿ ಯಾವುದೇ ಪ್ರಯೋಜನ ವಿಲ್ಲ. ಆಡಳಿತದ ಪ್ರತಿ ಹಂತದಲ್ಲೂ ನಾಗರಿಕ ಸಹಭಾಗಿತ್ವಕ್ಕೆ ನಾವು ಸಿದ್ಧ ರಾಗಬೇಕು’ ಎಂದು ಸಲಹೆ ನೀಡಿದರು.‘ಕಳೆದ ಕೆಲವು ದಶಕಗಳಲ್ಲಿ ನಗರದ ಜೀವನ ಮಟ್ಟ ಕುಸಿತ ಕಂಡ ಘಟನೆ ಕಣ್ಣ ಮುಂದೆಯೇ ಇದೆ. ನಗರದ ಅಡ್ಡಾದಿಡ್ಡಿ ಬೆಳವಣಿಗೆ, ಕಾಣೆಯಾದ ಮೂಲ ಸೌಕರ್ಯ ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ ಬದಲು ಸುಶಿಕ್ಷಿತರು ಬಾಯಿ ತೆರೆಯಬೇಕು. ತಮ್ಮ ಜನಪ್ರತಿ ನಿಧಿಗಳು ಯಾರು ಎಂಬುದನ್ನು ತಿಳಿದು ಕೊಂಡು ಬೇಕಾದ ಕೆಲಸ ಮಾಡಿಸಿ ಕೊಳ್ಳಬೇಕು’ ಎಂದು ಹೇಳಿದರು.ಬಿ–ಪ್ಯಾಕ್‌ ಅಧ್ಯಕ್ಷೆ ಕಿರಣ್‌ ಮಜುಮ್‌ದಾರ್‌, ‘ಇದುವರೆಗೆ ಸುಮ್ಮನೇ ಕುಳಿತಿದ್ದಕ್ಕೆ ನಾವೀಗ ವ್ಯವಸ್ಥೆಯ ಬಲಿಪಶು ಆಗಿದ್ದೇವೆ. ಇನ್ನು ಮುಂದೆ ನಾವೂ ಆಡಳಿತದ ಭಾಗ ಆಗಬೇಕಿದೆ. ವಾರ್ಡ್‌ ಮಟ್ಟದಿಂದಲೇ ಈ ಬದಲಾವಣೆಗೆ ನಾಂದಿ ಹಾಡ ಬೇಕಿದೆ’ ಎಂದು ಅಭಿಪ್ರಾಯಪಟ್ಟರು.ನಗರ ಮತದಾರರ ಬದಲಾದ ನಿರೀಕ್ಷೆ ಹಾಗೂ ನಗರ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ವಿಷಯಗಳ ಮೇಲೆ ಸಂವಾದಗಳು ನಡೆದವು. ದೆಹಲಿ ಯಲ್ಲಿ ಬೀಸಿದ ರಾಜಕೀಯ ಬದಲಾ ವಣೆ ಗಾಳಿ ರಾಜ್ಯದಲ್ಲೂ ಬೀಸುವ ದಿನಗಳು ದೂರವಿಲ್ಲ ಎಂದು ಸಂವಾದ ದಲ್ಲಿ ಪಾಲ್ಗೊಂಡ ಗಣ್ಯರು ಒಂದೇ ಧ್ವನಿಯಲ್ಲಿ ಹೇಳಿದರು.‘ಜನರ ಸಹಭಾಗಿತ್ವ ಹೆಚ್ಚಿದಷ್ಟೂ ರಾಜ್ಯದಲ್ಲಿ ರಾಜಕೀಯ ಶುದ್ಧೀಕರಣದ ಪ್ರಕ್ರಿಯೆ ಚುರುಕುಗೊಳ್ಳಲಿದೆ’ ಎಂದು ಒಟ್ಟಾಗಿ ಅಭಿಪ್ರಾಯಪಟ್ಟರು. ‘ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಆಹಾರದ ಹಕ್ಕು ಬಂದಂತೆ ಸಹ ಭಾಗಿತ್ವದ ಹಕ್ಕು ಬರುವ ದಿನಗಳು ದೂರ ವಿಲ್ಲ’ ಎಂದು ನ್ಯಾ. ಸಂತೋಷ ಹೆಗ್ಡೆ ತಿಳಿಸಿದರು.ಲೋಕಾಯುಕ್ತ ವರದಿ ಅನುಷ್ಠಾನ ಕುರಿತಂತೆ ಪ್ರಶ್ನೆ ತೂರಿಬಂದಾಗ, ‘ಯಾವುದೇ ವಿಷಯವನ್ನು ಸದ್ದಿಲ್ಲದೆ ಕೊಲ್ಲಲು ಆಯೋಗವನ್ನು ರಚಿಸಲಾಗು ತ್ತದೆ ಎಂಬುದಾಗಿ ಚರ್ಚಿಲ್‌ ಹೇಳಿ ದ್ದರು. ಆ ಮಾತು ಇಲ್ಲಿ ಸತ್ಯವಾಗು ತ್ತಿದೆ’ ಎಂದು ಪ್ರತಿಕ್ರಿಯಿಸಿದರು.‘ವಿಕೇಂದ್ರೀಕರಣ ವ್ಯವಸ್ಥೆ ಸಮರ್ಪಕ ವಾಗಿ ಜಾರಿಯಾದರೆ ತಮ್ಮ ಅಧಿಕಾರಕ್ಕೆ ಚ್ಯುತಿ ಬರುತ್ತದೆ ಎಂಬ ಭೀತಿಯಿಂದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಆ ವ್ಯವಸ್ಥೆ ಶಿಥಿಲಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದಲೇ ವಾರ್ಡ್‌ಮಟ್ಟದ ಸಮಿತಿಗಳು ರಚನೆ ಯಾದರೂ ಯಾವುದೇ ಅಧಿಕಾರ ಅವು ಗಳಿಗೆ ಸಿಕ್ಕಿಲ್ಲ’ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ. ರವೀಂದ್ರ ವಿಶ್ಲೇಷಿಸಿದರು.‘ದೊಡ್ಡ ಪಕ್ಷಗಳೆಲ್ಲ ಹೀಗೇ ಕಾರ್ಯ ನಿರ್ವಹಿಸುತ್ತಿದ್ದರೆ ಶೀಘ್ರದಲ್ಲೇ ನಮ್ಮ ಪಕ್ಷ ಕರ್ನಾಟಕದಲ್ಲೂ ಮೋಡಿ ಮಾಡ ಲಿದೆ’ ಎಂದು ಆಮ್‌ ಆದ್ಮಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಪೃಥ್ವಿ ರೆಡ್ಡಿ ಕನಸು ತೇಲಿಬಿಟ್ಟರು. ‘ಸಾಧನೆ ಮಾಡುವ ಪಕ್ಷಗಳೇ ಅಧಿಕಾರಕ್ಕೆ ಬರ ಬೇಕು’ ಎಂಬುದನ್ನು ಬಿಜೆಪಿಯ ಡಾ.ಸಿ. ಎನ್‌. ಅಶ್ವತ್ಥನಾರಾಯಣ ಮತ್ತು ಕಾಂಗ್ರೆಸ್‌ನ ರಿಜ್ವಾನ್‌ ಅಹ್ಮದ್‌ ಒಪ್ಪಿಕೊಂಡರು.‘ಹಿಂದೆ ಬೆಂಗಳೂರಿನ ಸಮಸ್ಯೆಗಳು ಕಡಿಮೆ ಇದ್ದವು. ವಿಧಾನಸಭೆಯಲ್ಲಿ ಚರ್ಚೆ ಹೆಚ್ಚಾಗುತ್ತಿತ್ತು. ಈಗ ಸಮಸ್ಯೆ ಗಳು ಬೆಟ್ಟದಷ್ಟು ಬೆಳೆದಿವೆ. ಚರ್ಚೆಗಳು ಸಂಪೂರ್ಣ ಗೌಣವಾಗಿವೆ. ಈ ವ್ಯವಸ್ಥೆ ಬದಲಾಗಬೇಕಾದರೆ ಪೌರಪ್ರಜ್ಞೆ ಉಳ್ಳ ವರು ಆಡಳಿತ ನಡೆಸುವಂತಹ ದಿನಗಳು ಬರಬೇಕಿದೆ’ ಎಂದು ಪಿಜಿಆರ್‌ ಸಿಂಧ್ಯಾ ಅಭಿಪ್ರಾಯಪಟ್ಟರು.‘ಅಕ್ರಮ–ಸಕ್ರಮ’ದಂತಹ ಯೋಜನೆ ತರುವ ಮೂಲಕ ಸರ್ಕಾರವೇ ಜನರನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ. ಜನ ಸಹ ಇಂತಹ ಅಕ್ರಮ ಚಟುವಟಿಕೆಗೆ ಏಕೆ ಇಳಿಯಬೇಕು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್‌ ಕೇಳಿದರು.ಉಪನ್ಯಾಸ ಮಾರಾಟ!

ಬೆಂಗಳೂರು: ಬಿ–ಪ್ಯಾಕ್‌ ಕಾರ್ಯಕ್ರಮಗಳ ಸಂಘಟನೆಗಾಗಿ ಎರಡು ಉಪನ್ಯಾಸ ಗಳನ್ನು ಗುರುವಾರ ಹರಾಜಿನಲ್ಲಿ ಮಾರಾಟ ಮಾಡಲಾಯಿತು. ಒಂದು ಕಿರಣ್‌ ಮಜುಮ್‌ದಾರ್‌ ಅವರದಾದರೆ, ಮತ್ತೊಂದು ಟಿ.ವಿ. ಮೋಹನದಾಸ್‌ ಪೈ ಅವರದ್ದು. ಕಿರಣ್‌ ಅವರ ಉಪನ್ಯಾಸ ರೂ 2.3 ಲಕ್ಷಕ್ಕೆ ಮಾರಾಟವಾದರೆ, ಪೈ ಅವರ ಉಪನ್ಯಾಸಕ್ಕೆ ಸಿಕ್ಕ ಬೆಲೆ ರೂ 3 ಲಕ್ಷ.

ಉಪನ್ಯಾಸಗಳನ್ನು ಖರೀದಿ ಮಾಡಿದ ಸಂಸ್ಥೆಗಳು ಆಯೋಜಿಸುವ ಸಮಾರಂಭ ದಲ್ಲಿ ಇವರು ಉಪನ್ಯಾಸ ನೀಡಬೇಕು.ಕೆಲವು ಕಲಾಕೃತಿಗಳನ್ನೂ ಸಮಾರಂಭದಲ್ಲಿ ಹರಾಜು ಹಾಕಲಾಯಿತು. ಯುಸೂಫ್‌ ಅರಕ್ಕಲ್‌ ಅವರ ‘ಬ್ರೋಕನ್‌ ಪಾಟ್ಸ್‌’ ಕಲಾಕೃತಿ ರೂ 5ಲಕ್ಷಕ್ಕೆ ಮಾರಾಟವಾದರೆ, ಮೂಗ ಕಲಾವಿದ ಇಮ್ಮದುದ್ದೀನ್‌ ಅವರ ‘ರಣ ತಂಬೂರ್‌ನ ಹುಲಿಗಳು’ ರೂ 3.2 ಲಕ್ಷಕ್ಕೆ ಬಿಕರಿಯಾದವು. ಗೀತಾಂಜಲಿ ಅವರ ‘ತಾಯಿ ಮತ್ತು ಮಗು’ ರೂ 3 ಲಕ್ಷ ಗಳಿಸಿತು. ಜೋಗಿನ್‌ ಅವರ ‘ದಂಪತಿ’ ರೂ 1 ಲಕ್ಷಕ್ಕೆ ಮಾರಾಟವಾಯಿತು.

ಪ್ರತಿಕ್ರಿಯಿಸಿ (+)