‘ಒಕ್ಕಣ್ಣಿನ ದೊರೆ’ ಹೋಲಿಕೆಗೆ ನಿರ್ಮಲಾ ಟೀಕೆ

7

‘ಒಕ್ಕಣ್ಣಿನ ದೊರೆ’ ಹೋಲಿಕೆಗೆ ನಿರ್ಮಲಾ ಟೀಕೆ

Published:
Updated:

ನವದೆಹಲಿ (ಪಿಟಿಐ): ಭಾರತದ ಆರ್ಥಿಕತೆಯನ್ನು ‘ಕುರುಡರ ನಾಡಿನ ಒಕ್ಕಣ್ಣಿನ ದೊರೆ’ಗೆ ಹೋಲಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರ ಹೇಳಿಕೆಗೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌  ಆಕ್ಷೇಪ ವ್ಯಕ್ತಪಡಿಸಿದ್ದಾರೆ.‘ದೇಶದ ಅರ್ಥ ವ್ಯವಸ್ಥೆ  ಬಣ್ಣಿಸಲು  ರಾಜನ್‌ ಅವರು ಬೇರೆ ಶಬ್ದಗಳನ್ನು ಬಳಸಬಹುದಾಗಿತ್ತು. ಅವರು ಆಯ್ಕೆ ಮಾಡಿರುವ ಶಬ್ದಗಳು ನನಗೆ  ಹರ್ಷ ಉಂಟು ಮಾಡಿಲ್ಲ. ಎನ್‌ಡಿಎ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳು  ಫಲಿತಾಂಶ ನೀಡಲು ಆರಂಭಿಸಿವೆ.ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಮಾಣ ಸುಧಾರಿಸುತ್ತಿದೆ. ತಯಾರಿಕಾ ವಲಯದಲ್ಲಿ ಪುನಶ್ಚೇತನ ಕಾಣುತ್ತಿದೆ.  ಹಣದುಬ್ಬರ ಮತ್ತು ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿ ಇದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry