ಸೋಮವಾರ, ಜನವರಿ 20, 2020
18 °C

‘ಒಳಗಿನ ಅಸೂಯೆ ಅಭಿವೃದ್ಧಿ ಹಿನ್ನಡೆಗೆ ಕಾರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಜನರು ಬಹು ಸಂಖ್ಯಾ ತರಾಗಿದ್ದರೂ ತಮ್ಮಲಿರುವ ಅಸೂಯೆ ಗಳಿಂದ ಏಳಿಗೆಯಾಗಲು ಸಾಧ್ಯವಾ ಗುತ್ತಿಲ್ಲ’ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಯ್ಯ ವಿಷಾದ ವ್ಯಕ್ತಪಡಿಸಿದರು.ನಾಡಪ್ರಭು ಕೆಂಪೇಗೌಡ ಅವರ 503ನೇ ಜಯಂತ್ಯುತ್ಸವದ ಅಂಗವಾಗಿ ಜಿಲ್ಲಾ ಒಕ್ಕಲಿಗರ ವೇದಿಕೆಯಿಂದ ನಗರದ ಸ್ಪೂರ್ತಿ ಭವನದಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ನಾಡಿನಲ್ಲಿ ತನ್ನದೇ ಆದ ದೊಡ್ಡ ಪರಂಪರೆ ಹೊಂದಿರುವ ಒಕ್ಕಲಿಗ ಸಮು ದಾಯ ಇಂದು ತುಳಿತಕ್ಕೆ ಒಳಗಾಗು ತ್ತಿದೆ. ಸಮುದಾಯದಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಕಾರಣ’ ಎಂದರು.ಜಿಲ್ಲಾ ಒಕ್ಕಲಿಗರ ವೇದಿಕೆಯ ಎಂ.ಶಿವಲಿಂಗಪ್ಪ ಮಾತನಾಡಿ, ‘ಕೇವಲ ಹೆಸರಿಗಷ್ಟೇ ಸಂಘಗಳನ್ನು ಸ್ಥಾಪಿಸದೇ ಸಮುದಾಯದ ಅಭಿವೃದ್ಧಿಗೆ ಕಾರ್ಯ ಕ್ರಮ ಹಮ್ಮಿಕೊಳ್ಳಬೇಕು. ಅಲ್ಲದೆ ಸಮು ದಾಯದ ಬಹುತೇಕ ವಿದ್ಯಾರ್ಥಿ ಗಳು ಆರ್ಥಿಕ ತೊಂದರೆಯಿಂದ ವಿದ್ಯಾಭ್ಯಾಸ ವನ್ನು ಮೊಟಕುಗೊಳಿಸು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳ ಕಲಿಕೆಗೆ ಉಳ್ಳವರು ಸಹಾಯ ಮಾಡಬೇಕು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡು ವುದರ ಜತೆಗೆ ರೈತ ರಿಗೆ ಹೆಚ್ಚು ಸಹಾ ಯವಾಗುವಂತಹ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸ ಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜು ನೇಗೌಡ ಕಾರ್ಯಕ್ರಮ ಉದ್ಘಾಟಿ ಸಿದರು.ಅಂಧರ ಶಾಲೆಯ ಅನ್ನದಾನೇ ಶ್ವರನಾಥ ಸ್ವಾಮೀಜಿ, ಸರ್ಕಾರಿ ನೌಕ ರರ ಸಂಘದ ಮಾಜಿ ಅಧ್ಯಕ್ಷ ಮರಿ ದೇವರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಪ್ಪಾಜಿಗೌಡ, ಡಾ.ಎಸ್. ಎಲ್.ತಿಮ್ಮಯ್ಯ, ಜಿಲ್ಲಾ ಒಕ್ಕಲಿಗರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ರಮೇಶ್, ದಿನೇಶ್, ಪ್ರಭು ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)