ಗುರುವಾರ , ಜೂನ್ 24, 2021
27 °C

‘ಕಂದಾಯ ಅದಾಲತ್‌; 9 ಸಾವಿರ ಅರ್ಜಿ ಇತ್ಯರ್ಥ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು:  ತಾಲ್ಲೂಕಿನ 4 ಹೋಬಳಿ ಕೇಂದ್ರಗಳ 50 ಕಂದಾಯ ವೃತ್ತಗಳಲ್ಲಿ ಹಮ್ಮಿ­ಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ ರೈತರ 9,6­78 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಹ­ಶೀಲ್ದಾರ್ ಡಾ.ಬಿ.ಸುಧಾ ಪಾಯ್ಸ್ ಹೇಳಿದರು.ಹಲ ವರ್ಷದಿಂದ ನೆನೆ­ಗುದಿಗೆ ಬಿದ್ದಿದ್ದ ಭೂಮಿ ವ್ಯಾಜ್ಯಗಳನ್ನು ಪರಿ­ಹರಿಸಲಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ತೆರಳಿ  ರೈತರ ವಿಭಾಗ ಪತ್ರ, ಕ್ರಯಪತ್ರ ಕುರಿತು ತಿಳಿಹೇಳಿ­ದ್ದಾರೆ. ಇದರಿಂದ ತಾಲ್ಲೂಕಿನ ರೈತ­ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಗುರುವಾರ ಹೇಳಿದರು.ತಾಲ್ಲೂ­ಕಿನ ಕಸಬಾ–­1815, ಲಕ್ಕೂರು–2867,  ಮಾಸ್ತಿ–1135,  ಟೇಕಲ್–861 ಅರ್ಜಿ­ಗಳು ವಿಲೇವಾರಿ­ಯಾಗಿವೆ. ಒಟ್ಟು ನಾಲ್ಕು ಹೋಬಳಿಗಳಲ್ಲಿ  9,678 ಅರ್ಜಿ­ಗಳ ವಿಲೇವಾರಿ ಮಾಡ­ಲಾಗಿದೆ. ಸಂಗ್ರಹ­ವಾಗಿ­ರುವ  ₨  10 ಲಕ್ಷ ತೆರಿಗೆ ಪಾವತಿಸ­ಲಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.