‘ಕಥೆ ಹೇಳುವ, ಕೇಳುವ ಪರಂಪರೆ ನಾಶ’

7
ಶಾಲಾ ಮಕ್ಕಳಿಗೆ ಕಥಾ ಕಾಲಕ್ಷೇಪ

‘ಕಥೆ ಹೇಳುವ, ಕೇಳುವ ಪರಂಪರೆ ನಾಶ’

Published:
Updated:

ಹಗರಿಬೊಮ್ಮನಹಳ್ಳಿ : ಕಥೆ ಹೇಳುವ ಮತ್ತು ಕೇಳುವ ಪರಂಪರೆ ನಶಿಸುತ್ತಿ ರುವ ದಿನಗಳಲ್ಲಿ ಚಿಲಿ ಪಿಲಿ ಬಳಗದ ತಾಲ್ಲೂಕು ಘಟಕದ ಸಹಯೋಗದಲ್ಲಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಕಥೆ ಹೇಳುವ ವಿಶಿಷ್ಟ ಕಾರ್ಯ ಕ್ರಮಕ್ಕೆ ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಕೆರೆ ಏರಿ ಬಳಿ ಇರುವ 500 ವರ್ಷಗಳ ಹಿಂದಿನ ಬೇವಿನ ಮರ ಇತ್ತೀಚಿಗೆ ಸಾಕ್ಷಿಯಾಯಿತು.ಶಾಲಾ ಮಕ್ಕಳಿಗೆ ಕಥೆ, ಹಾಡು ಮತ್ತು ಮಾಹಿತಿ ಒದಗಿಸುವ ಹೂರಣದ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ಪಾಲ್ಗೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು.ಗೊಂಡಬಾಳ ಸಂಗೀತ ಗ್ರಾಮದಲ್ಲಿನ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಚಾಲನೆ ನೀಡಿದರು.ಬಳಗದ ಕಥೆ ಹೇಳುವ ವಿಶಿಷ್ಟ ಪ್ರಯೋಗವನ್ನು ಶ್ಲಾಘಿಸಿದ ಕ್ಷೇತ್ರ ಸಮನ್ವಯ ಅಧಿಕಾರಿ ಡಿ.ಟಿ.ತೇನಸಿಂಗ್‌ ನಾಯ್ಕ, ದೇವತೆಗಳು ಕೂಡಾ ತೀರ್ಪು ಕೊಡುವಾಗ ಅಜಾಗೃತರಾದರೆ ಸಂಭವಿ ಸುವ ಪರಿಣಾಮಗಳನ್ನು ‘ಮೂರು ಕೊಡಲಿಗಳು’ ಎಂಬ ಕಥೆಯ ಮೂಲಕ ಬಿಚ್ಚಿಟ್ಟರು.

ನಮ್ಮ ಋಷಿ ಮುನಿಗಳ ಅಧ್ಯಾತ್ಮಿಕ ಪರಂಪರೆ ಹುಟ್ಟಿ ಬೆಳೆದದ್ದೇ ಇಂತಹ ಮರಗಳ ಕೆಳಗೆ. ಚಿಲಿ ಪಿಲಿ ಬಳಗ ಐದು ನೂರು ವರ್ಷ ಬಾಳಿದ ಹೆಮ್ಮರದ ಕೆಳಗೆ ಮಕ್ಕಳಲ್ಲಿ ಕಥೆಯ ಓದಿಗೆ ಹೊಸ ಬಗೆಯ ಆರಂಭ ನೀಡಿದೆ ಎಂದು ಸತ್ಸಂಗ ಸಮಿತಿಯ ಜಿ.ಲಕ್ಷ್ಮೀಪತಿ ಹರ್ಷ ವ್ಯಕ್ತಪಡಿಸಿದರು.ಶಿಕ್ಷಕ ಶಿವಾನಂದ ಶಿಶುವಿನಹಳ್ಳಿ, ಕಥೆ ಹೇಳಿಯೇ ಕಳ್ಳ ಸುಳ್ಳರ ನಡುವೆ ಬಚಾವ್ ಆದ ಮುದುಕಿಯ ಅಡಗೂ ಲಜ್ಜಿ ಕಥೆ ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರೆ, ಶಿಕ್ಷಕ ಮಲ್ಲಿಕಾರ್ಜುನ ಶಿರೂರು ಅವರು ಕೆಲವು ಸಂದರ್ಭ ಗಳಲ್ಲಿ ಒಳಿತನ್ನು ಮಾಡಿದವರನ್ನೇ ಬಲಿ ತೆಗೆದುಕೊಳ್ಳುವ ದುರಂತಮಯ     ರೈತ ಮತ್ತು ಕುದುರೆ ಎಂಬ ಸಂವೇದನಾಶೀಲ ಕಥೆಯ ಮೂಲಕ ಮಕ್ಕಳನ್ನು ಗದ್ಗದಿ ತರಾಗಿಸಿದರು. ಬುದ್ಧಿವಂತಿಕೆ ಇದ್ದರೆ ಅಪಾಯದಿಂದ ಪಾರಾಗುವ ಸಾಧ್ಯತೆ ಗಳನ್ನು ಹುಲಿ ಮತ್ತು ಬಡಗಿ ಕಥೆಯ ಮೂಲಕ ವಿವರಿಸಿದವರು.ಚಿಲಿಪಿಲಿ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ಹುರುಕಡ್ಲಿ ಶಿವಕುಮಾರ್. ಚಿಲಿ ಪಿಲಿ ಬಳಗದ ಜಿಲ್ಲಾಧ್ಯಕ್ಷ  ಎಲ್.ರೆಡ್ಡಿನಾಯ್ಕ ಮಾತ ನಾಡಿ, ಮಕ್ಕಳಲ್ಲಿನ ಸುಪ್ತ ಚೇತನವನ್ನು ವಿಕಸಿಸು ವಂತೆ ಮಾಡುವುದೇ ಕಾರ್ಯಕ್ರಮದ ಉದ್ದೇಶ. ಜೈವಿಕ ಕ್ರಿಯೆಯ ಮೂಲಕ ಒಂದು ಮರ ತನ್ನ ಜೀವಿತಾವಧಿಯಲ್ಲಿ ರೂ 15.70 ಲಕ್ಷ ಮೌಲ್ಯದ ಜೀವಜಾಲಕ್ಕೆ ಅಗತ್ಯವಿರುವ ಆಮ್ಲಜನಕ, ಸಾರಜನಕ ದಂತ ಅನಿಲಗಳನ್ನು ನೀಡುವ ಜೊತೆಗೆ ಮಣ್ಣಿನ ಸವಕಳಿಯಂತಹ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ ಎಂದು ಮರಗಳ ಮಹತ್ವ ವಿವರಿಸಿದರು.ಕಸಾಪ ಮಾಜಿ ಅಧ್ಯಕ್ಷ ಮಾತಾ ಗ್ಯಾಸ್‌ ಎರಿಸ್ವಾಮಿ ಮಾತನಾಡಿದರು.ಚಿಲಿಪಿಲಿ ಬಳಗದ ಅಕ್ಕಿ ಬಸವೇಶ್, ಕೆ.ಎಸ್.ವೀರೇಶ್, ಎ.ಕರಿಬಸವರಾಜ್, ಹೆಚ್.ಎಂ. ಕೊಟ್ರೇಶ್, ಮುನೀರ್ ಬಾಷಾ ಮತ್ತಿತರ ಶಿಕ್ಷಕರು ಹಾಡು ಹೇಳಿ ರಂಜಿಸಿದರು.ಕಾರ್ಯಕ್ರಮದ ನಂತರ ಮಕ್ಕಳು ಹೆಮ್ಮರವನ್ನು ಅಪ್ಪಿಕೊಂಡು ಹಾಡಿ ಕುಣಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry