ಬುಧವಾರ, ಜೂನ್ 16, 2021
28 °C

‘ಕನಕ ಸಾಹಿತ್ಯ–ಬಹುರೂಪಿ ನೋಟ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು: ಕನಕದಾಸರನ್ನು ಮಧ್ಯಕಾ­ಲೀನ ಸಾಹಿತ್ಯಕ್ಕೆ ಸಂಬಂಧಿಸಿದ ಸೀಮಿತ ನೆಲೆಗಳಲ್ಲಿ ಕಾಣಲು ಸಾಧ್ಯವಿಲ್ಲ. ಕನಕದಾ­ಸರನ್ನು  ಏಕರೂಪಿ ನೆಲೆಯಲ್ಲಿ ಕಾಣದೆ ಲಲಿತ ಕಲೆ, ಸಮಾಜ ವಿಜ್ಞಾನ ಮುಂತಾದ ಬಹರೂಪಿ ನೆಲೆಯಲ್ಲಿ ಕಾಣಬೇಕು ಮತ್ತು ಅದರ ಮಹತ್ವ­ವನ್ನು ಅರಿತುಕೊಳ್ಳಬೇಕು ಎಂದು ಸಂಸ್ಕೃತ  ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ಮಂಗಳೂರು ವಿ.ವಿ.ಯ  ಕನಕದಾಸ ಸಂಶೋಧನಾ ಕೇಂದ್ರ, ಕನಕದಾಸ ಅಧ್ಯಯನ ಪೀಠದ ಹತ್ತರ ಸಂಭ್ರಮ ಕಾರ್ಯಕ್ರಮದ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯ­ಕ್ರಮದಲ್ಲಿ ಭಾಗವಹಿಸಿ ಮಾತನಾ­ಡಿದರು.‘ಮಧ್ಯಕಾಲೀನ ಯುಗವು ಕನ್ನಡ ವಿಶ್ವಲೋಕವನ್ನು ನಮ್ಮೆದುರಿಗೆ ತೆರೆದಿ­ಡುತ್ತದೆ. ಇದನ್ನು ಕೇವಲ ಸಾಹಿತ್ಯದಿಂದ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ­ವಿಲ್ಲ. ದಾಸಶ್ರೇಷ್ಠರಲ್ಲಿ ಕನಕದಾಸರು ಒಬ್ಬರೇ ಸ್ವತಂತ್ರ ಚಿಂತಕರಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರವಾದದ್ದು. ಕಳೆದ 400 ವರ್ಷಗಳಿಂದ ಕನಕದಾಸರು ನಮ್ಮ ಜತೆಗೇ ಇದ್ದಾರೆ’ ಎಂದು ಅವರು ಅಭಿಪ್ರಾಯ ಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಮಾತನಾಡಿ, ಕನಕದಾಸರ ಚಿಂತನೆ ಶ್ರೇಷ್ಠವಾಗಿದ್ದು, ಇಂದಿಗೂ ಅದು ಪ್ರಸ್ತುತ, ಕನಕದಾಸ ಅಧ್ಯಯನ ಕೇಂದ್ರವು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.ಕನಕದಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಶಿವರಾಮ ಶೆಟ್ಟಿ ಇದ್ದರು. ಬಳಿಕ ಕನಕದಾಸ ಕೀರ್ತನೆ ಹಾಗೂ ಕನಕಗಂಗೋತ್ರಿ ಕಾರ್ಯ­ಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.