ಸೋಮವಾರ, ಜನವರಿ 20, 2020
27 °C
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಷಾದ

‘ಕನ್ನಡ ಶಿಕ್ಷಕರಿಗೆ ಭಾಷೆಯ ಜ್ಞಾನವೇ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದ ಅದೆಷ್ಟೋ ಶಿಕ್ಷಕರಿಗೆ ಕನ್ನಡದ ಕನಿಷ್ಠ ಜ್ಞಾನವೂ ಇಲ್ಲ. ಇವರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಹೆಸರು ಗೊತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಷಾದ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪದವಿ ಪೂರ್ವ ನೌಕರರ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರಿಗೆ ಅಧ್ಯಯನ ಪ್ರಕ್ರಿಯೆ ನಿರಂತರವಾಗಿರಬೇಕು. ಪರೀಕ್ಷೆಯಲ್ಲಿ ಮಕ್ಕಳನ್ನು ಪಾಸು ಮಾಡುವುದಷ್ಟೇ ಮುಖ್ಯವಲ್ಲ. ಬದುಕಿನಾಚೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಡುವ ಶಿಕ್ಷಣ ನೀಡಬೇಕಿದೆ.ಮಕ್ಕಳಿಗೆ ಬದುಕು ರೂಪಿಸುವ ದಿಸೆ ಯಲ್ಲಿ ಪ್ರೇರಣೆ ನೀಡ ಬೇಕು. ಮಕ್ಕಳಲ್ಲಿ ಸಂಸ್ಕೃತಿ ತುಂಬುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು. ದ್ವೇಷದಿಂದ ದ್ವೇಷ ಗೆಲ್ಲಲಾ ರದು. ಪ್ರೀತಿಯಿಂದ ದ್ವೇಷ ಗೆಲ್ಲಲು ಸಾಧ್ಯ ಎಂಬುದನ್ನು ಶಿಕ್ಷಕರು ಮಕ್ಕಳಿಗೆ ಮನ ವರಿಕೆ ಮಾಡಿಕೊಡುವಂಥ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಬಗ್ಗೆ ಯಾವೊಬ್ಬ ಶಿಕ್ಷಕ ರಿಂದ ತಮಗೆ ಈ ವರೆಗೂ ಸಲಹೆಗಳು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾರ್ವಜನಿಕ ಸೇವೆ ಕೇವಲ ರಾಜ ಕಾರಣಿಗಳಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ಈ ಹಿಂದೆ ಜೂನ್ ಮುಗಿ ದರೂ ಶಾಲೆಗಳಿಗೆ ಪಠ್ಯಪುಸ್ತಕಗಳು ತಲುಪುತ್ತಿ ರಲಿಲ್ಲ. ಈಗಲೇ ಮುಂದಿನ ವರ್ಷದ ಪಠ್ಯಪುಸ್ತಕಕ್ಕಾಗಿ ಮತ್ತು ಬೈಸಿಕಲ್ ಗಾಗಿ ಟೆಂಡರ್ ಕರೆಯ ಲಾಗಿದೆ ಎಂದು ನುಡಿದರು.ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶ ಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿವೆ. ಅವುಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಪಿ.ಯು. ಹಂತದ ಹೋರಾಟ ಹಲವು ದಶಕ ಗಳಿಂದ ನಿರಂತರವಾಗಿ ಮುಂದುವ ರಿದುಕೊಂಡು ಬಂದಿದೆ. ಸಚಿವರಿಗೆ ನೌಕರಶಾಹಿ ವರ್ಗ ದಾರಿ ತಪ್ಪಿಸುವ ಮೂಲಕ ಉಪನ್ಯಾಸಕರ ಸಮಸ್ಯೆಗಳು ಕಗ್ಗಂಟಾಗಿಯೇ ಉಳಿದುಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.ವಿಧಾನಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಜಿ.ಕೆ.ಪಾಟೀಲ, ಪ್ರಕಾಶ ರಾಠೋಡ, ಶ್ರೀಕಂಠೆಗೌಡ ಕೆ.ಟಿ, ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಮುನಿರಾಜು ಮಾತನಾಡಿದರು. ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಎಸ್.ವಿ. ಸಂಕನೂರ ಪ್ರಾಸ್ತಾವಿಕ ಭಾಷಣ ಮಾಡಿ ಪಿ.ಯು. ನೌಕರರ ಸಮಸ್ಯೆಗಳ ಬಗ್ಗೆ ದೀರ್ಘ ಮಾಹಿತಿ ಒದಗಿಸಿಕೊಟ್ಟರು.ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಎ.ಎಸ್.ಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯ ಎ.ಬಿ.ಬೂದಿಹಾಳ, ಪ್ರೊ.ಎನ್.ಎಸ್.ಹಿರೇಮಠ ನಿರೂಪಿಸಿದರು.ಸಮ್ಮೇಳನದಲ್ಲಿ ರಾಜ್ಯದ ಹಲವಾರು ಪದವಿ ಪೂರ್ವ ಕಾಲೇಜುಗಳ  ನೌಕರರು ಪಾಲ್ಗೊಂಡಿದ್ದರು.ಜೂನ್‌ ಒಳಗೆ ಶಿಕ್ಷಕರ ಹುದ್ದೆ ಭರ್ತಿ

ವಿಜಾಪುರ:
ರಾಜ್ಯದ ಪದವಿಪೂರ್ವ ಕಾಲೇಜುಗಳ ನೌಕರರ ಬೇಡಿಕೆಗಳ ಈಡೇರಿಕೆಗೆ ನನ್ನ ಸಹಮತವಿದೆ.   ಬೇಡಿಕೆಗಳಲ್ಲಿ ಶೇ.70ರಷ್ಟು ಈಡೇರಿ ಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದರು ಎಂದು   ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದರು.

ನಗರದ ಬಂಥನಾಳ ಸಂಗನಬಸವ ಸಮುದಾಯ ಭವನ ದಲ್ಲಿ ಭಾನು ವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪೂರ್ವ ನೌಕರರ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ   ಮಾತನಾಡಿದರು.ಉತ್ತರ ಕರ್ನಾಟಕದ ಶಾಲೆಗಳಲ್ಲಿ  ಶಿಕ್ಷಕರ ಕೊರತೆ ಇದೆ. ಹೀಗಾಗಿ ಜೂನ್ ಒಳಗಾಗಿ 11 ಸಾವಿರ ಶಿಕ್ಷಕ ರನ್ನು ನೇಮಕ ಮಾಡಿಕೊಳ್ಳಲಾ ಗುವುದು. ರಾಜ್ಯದ 50ಸಾವಿರ ಶಾಲಾ ಕಟ್ಟಡಗಳಲ್ಲಿ 30 ಸಾವಿರ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ದುರಸ್ತಿಗಾಗಿ ಆರು ಸಾವಿರ ಕೋಟಿ ರೂಪಾಯಿ ಬೇಕಿದೆ ಎಂದರು.ಶಿಕ್ಷಕರಿಗೆ ಹೃದಯಗಳನ್ನು ಒಂದು ಮಾಡುವ ಶಕ್ತಿ ಇದೆ. ಆದರೆ ವಿಭಾಗಿಸುವುದು ಸರಿಯಲ್ಲ. ಶಿಕ್ಷಕರು ಮಕ್ಕಳಿಗೆ ಪರೀಕ್ಷೆಯಲ್ಲಿ ಪಾಸು ಮಾಡುವ ಶಿಕ್ಷಣ ಮಾತ್ರ ಕೊಡದೆ ಬದುಕಿನ ಶಿಕ್ಷಣ ಕೊಡಿ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)