‘ಕರೀನಾ,ಇಮ್ರಾನ್‌ ಅದ್ಭುತ ಜೋಡಿ’

7
ಪಂಚರಂಗಿ

‘ಕರೀನಾ,ಇಮ್ರಾನ್‌ ಅದ್ಭುತ ಜೋಡಿ’

Published:
Updated:

ಕರಣ್ ಜೋಹರ್ ನಿರ್ಮಾಣದ ಹೊಸ ಚಿತ್ರ ‘ಗೋರಿ ತೇರೆ ಪ್ಯಾರ್ ಮೈನ್’ನಲ್ಲಿ ಕರೀನಾ ಕಪೂರ್‌ ಮತ್ತು ಇಮ್ರಾನ್‌ ಖಾನ್‌ ಜೋಡಿಯಾಗಿ ಅಭಿನಯಿಸಿದ್ದಾರೆ. ತೆರೆಯ ಮೇಲೆ ಇವರಿಬ್ಬರದು ಸುಂದರ ಜೋಡಿ ಎಂದು ಕರಣ್‌ ಹೊಗಳಿದ್ದಾರೆ.ನಿಜ ಜೀವನದಲ್ಲೂ ಕರೀನಾ ಮತ್ತು ಇಮ್ರಾನ್‌ ಇತ್ತೀಚೆಗಷ್ಟೇ  ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕರೀನಾ ನಟ ಸೈಪ್‌ ಅವರನ್ನು ಮದುವೆಯಾದರೆ, ಇಮ್ರಾನ್‌ ಖಾನ್‌ ತನ್ನ ಬಹುಕಾಲದ ಗೆಳತಿ ಅವಂತಿಕಾ ಅವರನ್ನು ವರಿಸಿದ್ದಾರೆ.‘‘ಚಿತ್ರದಲ್ಲಿ ಇಬ್ಬರೂ ಅದ್ಭುತ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಅವರಿಬ್ಬರೂ ಪ್ರತ್ಯೇಕ ಸಂಗಾತಿಗಳನ್ನು ಹೊಂದಿರುವುದರಿಂದ ಮಾತ್ರ ಅವರು ದಂಪತಿಗಳಲ್ಲ ಎಂಬ ಭಾವನೆ ಬರುತ್ತದೆ.ಇಲ್ಲದಿದ್ದರೆ ಇವರನ್ನು ದಂಪತಿಗಳಲ್ಲ ಎಂದು  ಅಲ್ಲಗಳೆಯಲು ಯಾರಿಂದರೂ ಸಾಧ್ಯವಿಲ್ಲ ಎಂದಿರುವ ಕರಣ್‌ ‘ಕರೀನಾ ಮತ್ತು ಇಮ್ರಾನ್‌ ಪರಸ್ಪರ ಮದುವೆಯಾಗಲಿ ಎಂದು ನಾನು ಆಶಿಸುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಿರದೆ ‘ಮುಂದೆ ಇವರಿಬ್ಬರೂ ಮದುವೆಯಾಗಬಹುದು. ಈಗಲೂ ಅದು ಸಾಧ್ಯ. ಅಸಾಧ್ಯ ಎಂಬುದು ಯಾವುದೂ ಇಲ್ಲ’ ಎಂದು ಕರೀನಾ ಮತ್ತು ಇಮ್ರಾನ್‌ ಖಾನ್ ಅವರನ್ನು ಅಚ್ಚರಿಗೊಳಿಸಿದ್ದಾರೆ.ಇದಕ್ಕೆ ತಣ್ಣಗೆ ಪ್ರತಿಕ್ರಿಯಿಸಿರುವ ಕರೀನಾ ‘ಹಾಗಾದರೆ ಸೈಫ್‌ ಕಥೆ ಏನು’ ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ. ಕರೀನಾ ಮತ್ತು ಇಮ್ರಾನ್‌ ಈ ಮೊದಲು ‘ಏಕ್‌ ಮೈನ್‌ ಏಕ್‌ ತು’ ಚಿತ್ರದಲ್ಲಿ ರೊಮ್ಯಾಂಟಿಕ್‌ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಗೋರಿ ತೇರೆ ಪ್ಯಾರ್ ಮೇ  ಈ ಜೋಡಿಯ ಎರಡನೇ ಚಿತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry