ಬುಧವಾರ, ಜೂನ್ 16, 2021
21 °C

‘ಕಲಿಕೆಗೆ ವಸ್ತು ಪ್ರದರ್ಶನ ಪೂರಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ‘ಮಕ್ಕಳು ಓದಿರುವ ವಿಷಯ ಸ್ಪಷ್ಟವಾಗಿ ಅರ್ಥಮಾಡಿ­ಕೊಳ್ಳಲು ಹಾಗೂ ಕಲಿಯಲು ವಿಜ್ಞಾನ ವಸ್ತು ಪ್ರದರ್ಶನ ಪೂರಕ’ ಎಂದು ರಾಜೇಂದ್ರ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕನಗೌಡ ಗದ್ರಟಗಿ ಹೇಳಿದರು. ರಾಜೇಂದ್ರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗ­ವಾಗಿ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.‘ನೊಬೆಲ್ ಪ್ರಶಸ್ತಿ ಪುರಸ್ಕೃತ  ಸಿ.ವಿ.­ರಾಮನ್ ಪ್ರಪಂಚ ಕಂಡ ಶ್ರೇಷ್ಠ ವಿಜ್ಞಾನಿ. ಅವರ ಸಂಶೋಧನಾ ಪ್ರಬಂಧ­ಗಳು ಸಾಧಕರಿಗೆ ಮಾರ್ಗ­ದರ್ಶನವಾ­ಗಿವೆ. ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಅಧ್ಯಯನದೊಂದಿಗೆ ಅವರ ವಿಚಾರಧಾರೆಗಳಲ್ಲಿ ಮುನ್ನಡೆಯಬೇಕು’ ಎಂದು ಹೇಳಿದರು.ಬೆಳಕಿನ ವೇಗ, ಪವನ, ನಿಂಬೆಹಣ್ಣು ಮತ್ತು ಆಮ್ಲದಿಂದ ವಿದ್ಯುತ್ ತಯಾ­ರಿಕೆ, ಪೆರಿಯೋಸ್ಕೋಪ್ ಉಪಯೋಗ, ಹನಿ ನೀರಾವರಿ, ಆಹಾರ ತಯಾರಿಕೆ ಮತ್ತು ಸಂರಕ್ಷಣಾ ವಿಧಾನ, ಔಷಧ ಸಸ್ಯಗಳ ಬೆಳೆಸುವುದು, ಉಪಗ್ರಹಗಳ ಚಲನೆ, ನ್ಯೂಟನ್‌ ಚಲನೆ ನಿಯಮ, ನೀರು ಶುದ್ಧೀಕರಣ ವಿಧಾನ, ಸಾವಯವ ಕೃಷಿ, ಪರಿಸರ ಸಂರಕ್ಷಣೆ, ವಿಜ್ಞಾನಿಗಳ ಸಾಧನೆ ವಿವರ ಸೇರಿದಂತೆ ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.ಡಾ.ತಿಮ್ಮನಗೌಡ ಪ್ರೌಢಶಾಲೆ, ಉಪ್ಪಾರವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆನಂದ ಹೆಗ್ಡೆ ಪ್ರಾಥಮಿಕ ಶಾಲೆ, ಗ್ಲೋರಿ ಶಾಲೆ, ಬಸವೇಶ್ವರ ಪ್ರೌಢಶಾಲೆ, ರೆಡ್ಡಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 10ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಫರ್ವಿನ್‌ ಪ್ರಾಸ್ತಾವಿಕ  ಮಾತನಾ­ಡಿದರು. ಅಶೋಕ ಪಾಟೀಲ್, ಸರಸ್ವತಿ ಪಾಟೀಲ್ ಶ್ರೀನಿವಾಸ ಕುಲ­ಕರ್ಣಿ ಮುಖ್ಯಶಿಕ್ಷಕಿ ಜ್ಯೋತಿ ಲಿಂಗಯ್ಯ ಮೊದಲಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.