ಸೋಮವಾರ, ಜನವರಿ 20, 2020
22 °C

‘ಕಲಿಕೋತ್ಸವದಿಂದ ಗುಣಮಟ್ಟ ಹೆಚ್ಚಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಲಿಕೋತ್ಸವದಿಂದ ಗುಣಮಟ್ಟ ಹೆಚ್ಚಳ’

ತಾಳಿಕೋಟೆ: ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಅಳೆ ಯುವ ಮಾನವಾಗಿರುವ ಕಲಿಕೋತ್ಸವ ದಿಂದ  ಇಲ್ಲಿ ಸ್ಪರ್ಧೆ ಏರ್ಪಡುವುದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟದ ಹೆಚ್ಚಳವಾಗುತ್ತದೆ ಎಂದು ಕೊಡಗಾ ನೂರ ತಾ.ಪಂ ಸದಸ್ಯ ಸಾಹೇಬಗೌಡ ಬಿರಾದಾರ ಹೇಳಿದರು.ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ  ಭೀಮನಗೌಡ ವಣಿಕ್ಯಾಳ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯ ಹಣಮಂತ ತಳವಾರ,    ಬಸನಗೌಡ ಪಾಟೀಲ,  ಮುಖ್ಯ ಶಿಕ್ಷಕಿ ಐ.ಟಿ.ಥಬ್ಬಣ್ಣವರ, ಎಂ.ಎಸ್‌. ಹುಲ್ಲೂರ, ಗುರುಬಾಯಿ ಮನೂರ, ರುದ್ರೇಶ ಮುರಾಳ,  ಎಂ.ವಿ. ಕೋರ ವಾರ, ಎಸ್‌.ಎಂ.ಢಕಣಿ, ಪ್ರೌಢ ಶಾಲೆ ಎಂ.ಜಿ.ದೇಶಪಾಂಡೆ, ಎಸ್‌. ಎನ್‌. ಕಾಂಬಳೆ, ಈರಣ್ಣ ಬೆಣ್ಣೂರ,  ಪ್ರಾಸ್ತಾವಿಕವಾಗಿ ಸಿ.ಆರ್‌.ಪಿ. ಪಿ.ಎ.ಮುಲ್ಲಾ ಮಾತನಾಡಿದರು.ದೇಣಿಗೆ ನೀಡಿಕೆ: ಸ್ಥಳೀಯ ಶಾಲಾ ಅಭಿವೃದ್ಧಿಗಾಗಿ ಎಸ್‌ಡಿಎಂಸಿ ಸದಸ್ಯ ಹಣಮಂತ ಕೊಡಗಾನೂರ ₨10 ಸಾವಿರ, ಆನಂದಗೌಡ (ಬಾಬು) ಪಾಟೀಲ ಒಂದು ಸಾವಿರ ರೂ.,  ಶಾಂತಗೌಡ ಹೆಮ್ಮಡಗಿ ಹಾಗೂ ಶಿವನಗೌಡ ಅಮಲ್ಯಾಳ ಸೇರಿ 100 ನೋಟ್‌ ಪುಸ್ತಕ ಹಾಗೂ ನೂರು ಪೆನ್‌,  ತಾ.ಪಂ. ಸದಸ್ಯ ಸಾಹೇಬಗೌಡ ಬಿರಾ ದಾರ ₨5 ಸಾವಿರ ಮೌಲ್ಯದ ಆರು ಕುರ್ಚಿ, ಎಸ್‌ಡಿಎಂಸಿ ಅಧ್ಯಕ್ಷರಿಂದ ಧ್ವಜಾರೋಹಣ ವೇದಿಕೆ ನಿರ್ಮಾಣಕ್ಕೆ  ದೇಣಿಗೆ ನೀಡಿದರು.

ಪ್ರತಿಕ್ರಿಯಿಸಿ (+)