‘ಕಾಂಗ್ರೆಸ್‌ ಸೇರ್ಪಡೆ ವದಂತಿ’

7
ಜೆ.ನರಸಿಂಹಸ್ವಾಮಿ ಎಲ್ಲೂ ಹೋಗೊಲ್ಲ...

‘ಕಾಂಗ್ರೆಸ್‌ ಸೇರ್ಪಡೆ ವದಂತಿ’

Published:
Updated:

ದೊಡ್ಡಬಳ್ಳಾಪುರ: ಶಾಸಕ ಜೆ.ನರಸಿಂಹ ಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎನ್ನುವುದು ವದ ಂತಿಯಷ್ಟೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಹೇಳಿದರು.ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಾಜಿ ಶಾಸಕರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ನನ್ನ  ಗಮನಕ್ಕೆ ಬಂದಿಲ್ಲ. ನರಸಿಂಹಸ್ವಾಮಿ ಅವರು ಈಗಲೂ ಬಿಜೆಪಿ ಪಕ್ಷದಲ್ಲಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.ಪಕ್ಷದ ವತಿಯಿಂದ ನಡೆಯುವ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಮಾಜಿ ಶಾಸಕರು ಹಾಜರಾಗದೇ ಇರುವುದಕ್ಕೆ  ತಪ್ಪು ಅರ್ಥ ಕಲ್ಪಿಸುವುದು ಬೇಡ. ಸೆ.೧೭ರಂದು ಮೋದಿ ಹುಟ್ಟು ಹಬ್ಬ ಕಾರ್ಯುಕ್ರಮದಲ್ಲಿಯೂ ಅವರು ಭಾಗ ವಹಿಸಲಿದ್ದಾರೆ. ಈಗಲೂ ಅವರೇ ನಮ್ಮ  ನಾಯ ಕರು. ಮುಂದಿನ ಲೋಕಸಭಾ ಚುನಾ ವಣೆಯಲ್ಲಿಯೂ ಅವರ ನಾಯಕತ್ವ ದಲ್ಲಿಯೇ ಚುನಾವಣೆ ಎದುರಿಸ ಲಾಗು ವುದು ಎಂದು ನಾರಾಯಣ ಸ್ವಾಮಿ ತಿಳಿಸಿದರು.ಅವರು ಈ ಹಿಂದೆ ಶಾಸಕರಾಗಿದ್ದಾಗ ಕಾಂಗ್ರೆಸ್ ಪಕ್ಷವು ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಬಿಜೆಪಿಗೆ ಸೇರ್ಪ ಡೆಯಾಗಿದ್ದರು. ಆಗ ಶಾಸಕರಾಗಿ ಕ್ಷೇತ್ರಕ್ಕೆ ೩೦೦ ಕೋಟಿ ರೂ ಅನುದಾನ ತಂದಿದ್ದರು’ ಎಂಬುದನ್ನು ನೆನಪಿಸಿದರು.ಅಭಿವೃದ್ಧಿ ಕಾರ್ಯ ಕುಂಠಿತ: ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಬಂದು ೪ ತಿಂಗಳು ಕಳೆದಿದ್ದರೂ ಇನ್ನೂ ಅಭಿವೃದ್ಧಿ ಕಡೆ ಗಮನ ನೀಡಿಲ್ಲ.  ತಾಲ್ಲೂಕಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ತರ ಲಾಗಿದ್ದ ೩೦೦ ಕೋಟಿ ರೂಪಾಯಿ ಗಳ ಬಾಕಿ ಉಳಿದಿರುವ ಕಾಮಗಾರಿಗಳು ನಡೆ ಯುತ್ತಿವೆಯೇ ಹೊರತು ನೂತನ ಶಾಸಕರು ಇನ್ನೂ ಯಾವುದೇ ಹೊಸ ಅನುದಾನಗಳನ್ನು ಕ್ಷೇತ್ರಕ್ಕೆ ತಂದಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಅವರು ಈ ಸಂದಭರ್ದಲ್ಲಿ ಒತ್ತಾಯಿಸಿದರು.ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೂ ಸಂಸದ ವೀರಪ್ಪಮೊಯಿಲಿ ಅಭಿವೃದ್ಧಿ ಕಡೆ ಗಮನ ಹರಿಸದಿರುವುದು ವಿಷಾದಕರ ಎಂದರು.

ಮುಂಬರುವ ಲೋಕ ಸಭಾ ಚುನಾವಣೆ ಎದುರಿಸುವ ದಿಸೆ ಯಲ್ಲಿ ಕಾರ್ಯ ಕರ್ತರು  ಪಕ್ಷದ ಸಂಘಟನೆಗೆ ಒತ್ತು ನೀಡಿ ಪಕ್ಷ ಬಲಪಡಿಸಲು ಶ್ರಮಿಸಬೇಕಿದೆ ಎಂದರು.ರಾಜ್ಯ ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತ ರಾಯಪ್ಪ ಮಾತನಾಡಿ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿ ಎ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಮೋದಿ ಪ್ರಧಾನಿಯಾಗುವ ಹಾದಿ ಯಲ್ಲಿ ಲೋಕಸಭೆಗೆ ಹೆಚ್ಚಿನ ಸ್ಥಾನ ಗಳನ್ನು ಗೆಲ್ಲಿಸಿ ಕಳುಹಿಸುವ ಹೊಣೆ ಗಾರಿಕೆ ಕಾರ್ಯಕರ್ತರ ಮೇಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವ ಶಂಕರ್, ಜಿಲ್ಲಾ ಉಪಾಧ್ಯಕ್ಷ ಆರ್‌. ಗೋಪಿ, ಮಹದೇವ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವ ಶಂಕರ್, ನಗರಸಭಾ ಸದಸ್ಯ ನಂಜಪ್ಪ, ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ನಾಗರಾಜ್, ನಗರ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಟಿ.ಜಿ.ಮಂಜುನಾಥ್, ರಾಮಕಿಟ್ಟಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry