‘ಕಾನೂನುಭಂಗ ಚಳವಳಿ ನಡೆಸಲು ನಿರ್ಧಾರ’

7
ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

‘ಕಾನೂನುಭಂಗ ಚಳವಳಿ ನಡೆಸಲು ನಿರ್ಧಾರ’

Published:
Updated:

ಬಳ್ಳಾರಿ: ಪರಿಶಿಷ್ಟ ಜಾತಿ ಸಮುದಾ ಯದ ಒಳಮೀಸಲಾತಿಯ ವರ್ಗೀಕರ ಣಕ್ಕೆ ಸಂಬಂಧಿಸಿದಂತೆ ನ್ಯಾ.ಎ.ಜೆ. ಸದಾ ಶಿವ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯನ್ನು ಸಮಗ್ರವಾಗಿ ಜಾರಿಗೊಳಿ ಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಮುಂಬರುವ ಚಳಿಗಾಲ ಅಧಿವೇಶನದ ಸಂದರ್ಭ ಕಾನೂನು ಭಂಗ ಚಳವಳಿ, ಅರೆಬೆತ್ತಲೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟದ ಅಧ್ಯಕ್ಷ ಎಚ್. ಹನುಮಂತಪ್ಪ ತಿಳಿಸಿದರು.ನಗರದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಳ ಮೀಸಲಾತಿ ವರ್ಗೀಕರಣ ಕೋರಿ ಕಳೆದ 17 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಆಳುವ ಸರ್ಕಾರಗಳು ಅಸ್ಪೃಶ್ಯ ಸಮುದಾಯಕ್ಕೆ ನೆರವಾಗಲು  ಮುಂದಾಗಿಲ್ಲ ಎಂದು ದೂರಿದರು.ದಲಿತಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ವರದಿ ಜಾರಿಗೆಮೀನ–ಮೇಷ ಎಣಿಸುತ್ತಿರುವುದರಿಂದ ಅವರ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭ ವರದಿ ಜಾರಿಯ ಭರವಸೆ ನೀಡಿದ್ದರೂ ಈವರೆಗೆ ಈಡೇರಿಲ್ಲ ಎಂದು ಅವರು ವಿಷಾದಿಸಿದರು.ಸಂಪುಟದಲ್ಲ ಅಸ್ಪೃಶ್ಯ ಸಮು ದಾಯದ ಮೂವರು ಸಚಿವರಿದ್ದರೂ ಮಾದಿಗ ಸಮುದಾಯಕ್ಕೆ ಒಳಮೀಸ ಲಾತಿ ನೀಡುವ ಸಂಬಂಧ ಕಾಳಜಿ ತೋರುತ್ತಿಲ್ಲ. ಇನ್ನು ಮುಂದೆ ಸಚಿವ ರಾದ ಶ್ರೀನಿವಾಸಪ್ರಸಾದ್, ಎಚ್‌.ಸಿ. ಮಹದೇವಪ್ಪ ಹಾಗೂ ಎಚ್. ಆಂಜ ನೇಯ ಅವರು ರಾಜೀನಾಮೆ ನೀಡ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.‘ಈ ಕುರಿತು ಹೋರಾಟ ನಡೆಸುತ್ತಿ ರುವುದರಿಂದ ಕಳೆದ ಮೂರು ತಿಂಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಅವುಗಳಿಗೆ ಜಗ್ಗದೆ ಹೋರಾಟ ಮುಂದುವರಿಸಲಾ ಗುವುದು ಎಂದು ಅವರು ತಿಳಿಸಿದರು.ಸಮಿತಿಯ ಮುಖಂಡರಾದ ಎ. ಈಶ್ವರಪ್ಪ, ಬಿ.ಗುರುಸಿದ್ದಪ್ಪ, ಎಚ್.ತಿಪ್ಪೇ ಸ್ವಾಮಿ, ರಾಮಣ್ಣ ಚೇಳ್ಳಗುರ್ಕಿ, ಕಮಲಾ ಬಸವರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry