ಶುಕ್ರವಾರ, ಜೂನ್ 18, 2021
20 °C
ಎತ್ತಿನಹೊಳೆ ಶಂಕು ಸ್ಥಾಪನೆಗೆ ವಿರೋಧದ ದನಿ

‘ಕಾರ್ಯಕರ್ತರಲ್ಲಿ ಗೊಂದಲ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಚಿಕ್ಕಬಳ್ಳಾಪುರದ ಮುದ್ದೇ­ನ­­ಹಳ್ಳಿ ಬಳಿ ಮಾರ್ಚ್‌ 3 ರಂದು ಎತ್ತಿನಹೊಳೆ ಯೋಜನೆಗೆ ಶಂಕು­ಸ್ಥಾಪನೆ ನಿರಾತಂಕವಾಗಿ ನಡೆಯಲಿದೆ. ಈ ಕುರಿತು ತಾಲ್ಲೂಕಿನ ಕಾಂಗ್ರೆಸ್‌ ಮುಖಂ­ಡರು ಹಾಗೂ ಕಾರ್ಯ­ಕರ್ತರು ಗೊಂದಲಕ್ಕೀಡಾಗುವ ಅವಶ್ಯ­ಕತೆ ಇಲ್ಲ ಎಂದು ಮಾಜಿ ಶಾಸಕ ವೆಂಕ­ಟ­ಸ್ವಾಮಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಯೋಜನೆಯ ಸಮಗ್ರ ವರದಿಯಲ್ಲಿ ದೇವನಹಳ್ಳಿ ಹೆಸ­ರಿಲ್ಲ ಎಂಬ ಕಾರಣಕ್ಕೆ ಯೋಜನೆ­ಯಿಂದ ನಮಗೆ ಪ್ರಯೋಜನವಿಲ್ಲ ಎಂದು ಅರ್ಥ­ವಲ್ಲ. ಬುಧವಾರ ನಡೆದ ಸಭೆ­ಯಲ್ಲಿನ ಕಾರ್ಯ­ಕರ್ತರ ಅಭಿ­ಪ್ರಾಯ­ವನ್ನು ಕೇಂದ್ರ­ಸಚಿವ ಮೊಯಿ­ಲಿಗೆ ದೂರವಾಣಿ ಮೂಲಕ ಮನ­ವರಿಕೆ ಮಾಡಿ­­­ಕೊಡ­­ಲಾ­ಗಿದೆ. ದೇವ­ನ­ಹಳ್ಳಿ ತಾಲ್ಲೂ­ಕಿಗೆ 2 ಟಿ.ಎಂ.ಸಿ ನೀರನ್ನು ಇಲ್ಲಿನ ಕೆರೆ­ಗಳಿಗೆ ಹರಿ­ಸಲು ಸಚಿವರು ಒಪ್ಪಿದ್ದಾರೆ’ ಎಂದರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಜಗ­ನ್ನಾಥ್‌ ಮಾತನಾಡಿ, ‘ಬುಧ­ವಾರ ನಡೆದ ಕಾಂಗ್ರೆಸ್‌ ಕಾರ್ಯ­ಕರ್ತರ ಸಭೆ­ಯಲ್ಲಿ ಶಂಕುಸ್ಥಾಪನೆ ವಿರೋಧ ವ್ಯಕ್ತ­ವಾಗಿ­­ರಲಿಲ್ಲ. ಯೋಜನಾ ಸಮಗ್ರ ವರ­ದಿಯಲ್ಲಿ ದೇವನ­ಹಳ್ಳಿ ಹೆಸರಿಲ್ಲ ಅದನ್ನು ಸರಿ­ಪಡಿಸಿ ಎಂದು ಮೊಯಿಲಿ ಅವರಿಗೆ ಒತ್ತಾಯಿ­ಸೋಣ ಎಂಬ ನಿರ್ಣಯ ತೆಗೆದು­ಕೊಳ್ಳ­ಲಾಗಿದೆ ಅಷ್ಟೇ’ ಎಂದು ಸಮಜಾಯಿಷಿ ನೀಡಿ­­ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.