ಬುಧವಾರ, ಜೂನ್ 23, 2021
30 °C

‘ಕಾಸಿಗಾಗಿ ಸುದ್ದಿ’ ನಿಯಂತ್ರಿಸಿ

ಮಂಜುನಾಥ ಭದ್ರಶೆಟ್ಟಿ,ಧಾರವಾಡ Updated:

ಅಕ್ಷರ ಗಾತ್ರ : | |

‘ಕಾಸಿಗಾಗಿ ಸುದ್ದಿ’ ಪಿಡುಗನ್ನು ಚುನಾವಣಾ ಅಪರಾಧವಾಗಿ ಪರಿಗಣಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ, ಕಾನೂನು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿರುವುದು ಔಚಿತ್ಯ ಪೂರ್ಣವಾಗಿದೆ. ಮುಖ್ಯ ಚುನಾವಣಾ ಆಯುಕ್ತರೇ ಹೇಳಿದಂತೆ ಈ ಸಮಸ್ಯೆಯನ್ನು ನಿವಾರಿಸಲು ಯಾವುದೇ ಕಾನೂನುಗಳು ಇಲ್ಲ.ಆದರೆ ಇದನ್ನು ತಕ್ಷಣ ನಿಯಂತ್ರಿಸಲು ಕ್ರಮ ಅಗತ್ಯ.  ಚುನಾವಣೆ ಸುಗ್ಗಿಯಲ್ಲಂತೂ ಕಾಸಿಗಾಗಿ ಸುದ್ದಿ ಹಾವಳಿ ವಿಪರೀತ. ಕಾನೂನು ಸಚಿವಾಲಯ ಚುನಾವಣಾ ಆಯೋಗದ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ಅಕ್ರಮವನ್ನು ತಡೆಗಟ್ಟಿ ನಿಜವಾದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಮಾಡಬೇಕು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.