‘ಕುವೆಂಪು ಸಾಹಿತ್ಯ ದಿವ್ಯೌಷಧ’

7

‘ಕುವೆಂಪು ಸಾಹಿತ್ಯ ದಿವ್ಯೌಷಧ’

Published:
Updated:

ಚನ್ನಪಟ್ಟಣ: ಕುವೆಂಪು ಸಾಹಿತ್ಯ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾ ಚಾರ, ಅನಾಚಾರಗಳಿಗೆ ಪರಿಹಾರ ಸೂಚಿಸುವ ದಿವ್ಯೌಷಧ ಎಂದು ಉಪ ನ್ಯಾಸಕ ನಿಂಗೇಗೌಡ ಅಭಿಪ್ರಾ ಯಪಟ್ಟರು.ಪಟ್ಟಣದ ಚೆನ್ನಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪ ಡಿಸಿದ್ದ ಕುವೆಂಪು ಸಾಹಿತ್ಯ ಕುರಿತ ಉಪ ನ್ಯಾಸ ಹಾಗೂ ಗೀತಗಾಯನ ಕಾರ್ಯ ಕ್ರಮವನ್ನು ಉದ್ಘಾಟಿಸಿ  ಅವರು ಮಾತ ನಾಡಿದರು.ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಅನೈತಿಕ ಚಟುವಟಿಕೆ ಗಳನ್ನು ಹೋಗಲಾಡಿಸುವಲ್ಲಿ ಕುವೆಂಪು ಸಾಹಿತ್ಯ ಸಾರ್ವಕಾಲಿಕವಾಗಿದೆ. ಕುವೆಂ ಪು ಅವರ ವಿಚಾರಧಾರೆಗಳನ್ನು ಸಮಾಜ ದಲ್ಲಿ ಅಳವಡಿಸುವುದು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಾ.ಸತೀಶ್, ಕುವೆಂಪು ನಿಸರ್ಗ ಮತ್ತು ಆಧ್ಯಾತ್ಮಿಕ ಚಿಂತ ನೆ ಯನ್ನು ತಮ್ಮ ಸಾಹಿತ್ಯದಲ್ಲಿ ಬಳಸಿ ಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯನ್ನು ನಿರಂತರವಾಗಿ ಪ್ರಕಟಿಸುತ್ತಲೇ ಬಂದ ವರು ಎಂದರು.ಪ್ರಾಂಶುಪಾಲ ಜಯರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಶಾಂತಮ್ಮ, ಪ್ರೌಢಶಾಲಾ ಮುಖ್ಯಶಿಕ್ಷಕ ದೊಳ್ಳೇಗೌಡ, ಉಪನ್ಯಾಸಕ ಡಾ.ಅಂಕ ನಹಳ್ಳಿ ಪಾರ್ಥ ಇತರರು ಇದ್ದರು.

ಗಾಯಕ ವಿನಯ್‌ಕುಮಾರ್ ಕುವೆಂಪು ಗೀತೆಗಳನ್ನು ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry