‘ಕೃತಿ’ಯಾಗಿ ಹೊರಬರಬೇಡವೇ...?

7

‘ಕೃತಿ’ಯಾಗಿ ಹೊರಬರಬೇಡವೇ...?

Published:
Updated:

ಥಾಪ್ರಕಾರ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತದೆ, ಹೋಗುತ್ತದೆ. ಅಧ್ಯಕ್ಷರ ಮಾತು­ಗಳು ಆಡಿಯಾದ ಮೇಲೆ ಕಳೆದೂ ಹೋಗು­ತ್ತಿವೆ. ನಿರ್ಣಯಗಳೂ ಪಾಸಾಗುತ್ತವೆ. ಜಾರಿಗೆ ಬಾರದೇ ಫೇಲೂ ಆಗುತ್ತಿವೆ. ಹಾಗೆ­ಯೇ ಈ ಮಾತು ಮತ್ತು ನಿರ್ಣಯಗಳ ದಯ­ನೀಯ ಸ್ಥಿತಿಗೆ ಯಾರು ಕಾರಣರು? ಈ ಪ್ರಶ್ನೆಗೆ ಉತ್ತರ­ವನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇವೆಲ್ಲ ಕಾರ್ಯಗತವಾಗಲಿ ಎನ್ನುವ ಬೇಡಿಕೆಗೆ ಮಾತ್ರ ಶತಮಾನದ ‘ಸಂಭ್ರಮ’...!ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವಾ­ಗಿನಿಂದಲೂ ಸಮಯ ಪರಿಪಾಲನೆಯ ನೆಪದಲ್ಲಿ ಕತ್ತರಿ ಪ್ರಯೋಗದ ಶಿಕ್ಷೆ ನೀಡುತ್ತಲೂ ಬರ­ಲಾಗಿದೆ. ಈ ಕುರಿತು ಪಾಟೀಲ ಪುಟ್ಟಪ್ಪ ತಾವು ಸಮ್ಮೇಳ­ನಾ­ಧ್ಯಕ್ಷ­ರಾದ ಹೊತ್ತಲ್ಲಿ ಆಗಿನ ಮುಖ್ಯ­ಮಂತ್ರಿ­ಗಳನ್ನೇ ತರಾಟೆ ತೆಗೆದುಕೊಂಡಿದ್ದು ಇತಿ­ಹಾಸದ ಒಂದು ಭಾಗ ಮಾತ್ರವಾಗಿ ಉಳಿದು ಯಥಾ ಸ್ಥಿತಿ ಮುಂದುವರಿದಿದೆ. ಹೌದು, ಹಾಗಾದರೆ ಸದ್ಯ ಪರಿಷತ್ತಾದರೂ ಈಗ ಈ ಕುರಿತು ಏನು ಮಾಡ­ಬೇಕು..? ಎಂಬುದಕ್ಕೆ ನನ್ನದೊಂದು ಸಲಹೆ ಏನೆಂದರೆ: ಈವರೆಗೂ ನಡೆದ ಎಂಬತ್ತು ಸಮ್ಮೇ­ಳನಗಳ ಅಧ್ಯಕ್ಷರ ಭಾಷಣಗಳನ್ನು ಹಲವು ಸಂಪುಟ­ಗಳಲ್ಲಿ ಸಾಹಿತ್ಯ ಪರಿಷತ್ತು ಹೊರತರಬೇಕು.

ಈ ಯೋಜನೆಗೆ ಸರ್ಕಾರವೂ ತುಟಿ­ಯೆರಡು ಮಾಡದೇ ಸಹಕರಿ­ಸ­ಬೇಕು. ಹಾಗೇ, ಆ ಕೃತಿಗಳು ಸುಲಭ ಬೆಲೆ­ಯಲ್ಲಿ ಶ್ರೀ­ಮಾನ್ ಕನ್ನಡಿಗನಿಗೆ ದೊರಕುವಂ­ತಾಗಬೇಕು. ಪರಿ­ಷತ್ತು ಮತ್ತು ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ, ಖಾಸಗಿ ಪ್ರಕಾಶನ ಸಂಸ್ಥೆ­ಗಳಾದರೂ ಈ ಹೊರೆ ಹೊತ್ತು ಮೌಲಿಕವಾದ ಕನ್ನಡ ಕಟ್ಟೋ­ಣದ ಬರೀ ಮಾತಲ್ಲದ ಕನ್ನಡ ನೆತ್ತರಿನ ಈ ನುಡಿ­ಗಳನ್ನು ಪ್ರಕಟಿಸಲು ಮುಂದಾ­ದಲ್ಲಿ ಅವು ಕನ್ನಡ ಬದುಕಿ­ರು­ವವರೆಗೂ ಕನ್ನಡದ ಭಗ­ವದ್ಗೀತೆ­ಯಾಗಿ ಉಳಿಯಬಲ್ಲವು. ಸಮ್ಮೇಳ­ನದ ನಿರ್ಣ­ಯ­ಗಳನ್ನು ಈಗಾಗಲೇ ಬೆಂಗಳೂರಿನ ಸುಮುಖ ಪ್ರಕಾ­ಶನ ಹೊರತಂದಿದ್ದು ಶ್ಲಾಘ­ನೀಯ­ವೂ ಹೌದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂಬ ಕೂಗಿಗೆ ಮನ್ನಣೆ ಸಿಗಬಹುದೇ..?

-–ವಿಜಯಕಾಂತ ಪಾಟೀಲ, ಕ್ಯಾಸನೂರು, (ಹಾನಗಲ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry