ಶುಕ್ರವಾರ, ಫೆಬ್ರವರಿ 26, 2021
27 °C
ಕೂಡಲಸಂಗಮ: ಬಸವ ಕೃಷಿ ಸಂಕ್ರಾಂತಿ ಆಚರಣೆ

‘ಕೃಷಿ ಕಾರ್ಯ ಕೀಳರಿಮೆ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೃಷಿ ಕಾರ್ಯ ಕೀಳರಿಮೆ ಬೇಡ’

ಕೂಡಲಸಂಗಮ: ‘ದೇಶದ ಜನರಿಗೆ ಅನ್ನ ನೀಡುವ ಅನ್ನದಾತನೆ ಎಲ್ಲರಿ­ಗಿಂತಲೂ ಸರ್ವಶ್ರೇಷ್ಠ ವ್ಯಕ್ತಿಯಾಗಿದ್ದು, ಕೃಷಿಯ ಬಗ್ಗೆ ಕೀಳರಿಮೆ ತಾಳದೆ ಹೆಮ್ಮೆಪಡಬೇಕು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು.ಲಿಂಗಾಯತ ಪಂಚಮಸಾಲಿ ಪೀಠ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್  ಆಶ್ರಯದಲ್ಲಿ ಶುಕ್ರವಾರ ಕೂಡಲ­ಸಂಗಮದಲ್ಲಿ ಹಮ್ಮಿಕೊಂಡಿದ್ದ ಆರನೇ ಬಸವ ಕೃಷಿ ಸಂಕ್ರಾಂತಿಯಲ್ಲಿ ಅವರು ಮಾತನಾಡಿದರು.‘ಕೃಷಿ ನಷ್ಟಕ್ಕೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ, ಮುಂದಿನ ಪೀಳಿಗೆಗೆ ಇದರಿಂದ ಕೆಟ್ಟ ಸಂದೇಶ ರವಾನೆ­ಯಾಗುತ್ತದೆ. ಬದಲಾದ ವ್ಯವಸ್ಥೆಯಲ್ಲಿ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಲಾಭದಾಯಕ ಕೃಷಿ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.‘ಕೃಷಿಯಲ್ಲಿ ಲಾಭಕ್ಕಿಂತ ಹಾನಿಯೆ ಹೆಚ್ಚಾಗುತ್ತಿರುವ ಪರಿಣಾಮ ಯುವ ಜನರು ಕೃಷಿಯಿಂದ ವಿಮುಕ್ತರಾಗು­ತ್ತಿದ್ದಾರೆ. ಕೃಷಿಯನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲರಿಂದಲೂ ನಡೆಯ­ಬೇಕಾಗಿದೆ’ ಎಂದರು.‘ಕಳಸಾ ಬಂಡೂರಿ ಯೋಜನೆ ಜಾರಿಯಿಂದ ಉತ್ತರ ಕರ್ನಾಟಕದ ನೀರಾವರಿ ಯೋಜನೆಯ ಜತೆಗೆ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಯೂ ನೀಗಲಿದ್ದು, ಇದಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುವುದಾಗಿ’ ಹೇಳಿದರು.ಶಾಸಕ ವಿಜಯಾನಂದ ಕಾಶಪ್ಪನ­ವರ ಮಾತನಾಡಿ, :ಪಂಚಮಸಾಲಿ ಪೀಠದ ನೂತನ ಕಟ್ಟಡ ಪೂರ್ಣ­ಗೊಳಿಸಲು ಸಮಾಜದಲ್ಲಿ ಆರ್ಥಿಕವಾಗಿ ಸಬಲರಾದವರು ಹಣಕಾಸಿನ ನೆರವು ನೀಡಬೇಕು’ ಎಂದು ಮನವಿ ಮಾಡಿದರು.ಸಾನ್ನಿಧ್ಯ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜದ ಬಹುಸಂಖ್ಯೆ ಜನರು ಕೃಷಿ ಚಟುವಟಿಕೆಯನ್ನೆ ಅವಲಂಬಿಸಿದ್ದಾರೆ. ಸಮಾಜದ ಜನರ ಸಂಘಟನೆಯ ಜತೆಗೆ ರೈತಪರ ಧ್ವನಿಯಾಗಿ ಪೀಠ ಕೆಲಸ ಮಾಡಲಿದೆ ಎಂದರು.ಶಾಸಕ ಬಿ.ಆರ್. ಯಾವಗಲ್‌, ಮಾಜಿ ಸಚಿವ ಸಿ.ಸಿ. ಪಾಟೀಲ, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ. ಎಂ.ಪಿ. ನಾಡಗೌಡ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸಮಾಜದ ಮುಖಂಡರಾದ ನೀಲಕಂಠ ಅಸೂಟಿ, ಗಂಗಣ್ಣ ಬಾಗೇವಾಡಿ, ಎಲ್.ಎಂ. ಪಾಟೀಲ, ರಾಜಶೇಖರ ಮೆಣಸಿನಕಾಯಿ, ಪಂಚಪ್ಪ ಕಲಬುರ್ಗಿ, ಮಹಾಂತೇಶ ಹಳ್ಳೂರ, ಶರಣು ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.