ಭಾನುವಾರ, ಜೂನ್ 13, 2021
29 °C

‘ಕೆ.ಎಚ್‌.ಪಾಟೀಲ ಶ್ರೇಷ್ಠ ದರ್ಜೆಯ ರಾಜಕಾರಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಾಡಿನಲ್ಲಿ ಆಡಳಿತ ಭಾಷೆ ಕನ್ನಡವಾಗಿರಬೇಕು ಎಂದು ಪ್ರತಿಪಾದಿ ಸಿದವರಲ್ಲಿ ದಿ.ಕೆ.ಎಚ್. ಪಾಟೀಲರು ಒಬ್ಬರಾಗಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.ಅವರು ರವಿವಾರ  ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಏರ್ಪ ಡಿಸಲಾಗಿದ್ದ ಕೆ.ಎಚ್.ಪಾಟೀಲ ಅವರ 90ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.1970-80 ದಶಕ ಕರ್ನಾಟಕದ ರಾಜಕಾರಣದ ಪಾಲಿಗೆ ಸುವರ್ಣ ಯುಗ ಆ ಕಾಲಘಟ್ಟದಲ್ಲಿ ಜನಪ್ರತಿನಿಧಿ ಗಳಾಗಿ ಚುನಾಯಿತರಾಗಿ ಬಂದಿದ್ದ, ಸಿದ್ಧವೀರಪ್ಪ, ನಿಜಲಿಂಗಪ್ಪ, ದೇವರಾಜ ಅರಸು, ಕೆ.ಎಚ್.ಪಾಟೀಲ ಸೇರಿದಂತೆ ಮುಂತಾದ ಹಿರಿಯ ನಾಯಕರು ಜನರ ನೋವಿಗೆ ಸ್ಪಂದಿಸುವ ರಾಜ ಕಾರಣಿಗಳಾಗಿದ್ದರು. ಆ ದಿನಗಳಲ್ಲಿ  ಜಾರಿಗೆ ಬಂದ ಉಳುವುವವನೆ ಭೂಮಿಯ ಒಡೆಯ ಎಂಬ ಕಾನೂನು 11 ಲಕ್ಷ ಎಕರೆ  ಭೂಮಿಯನ್ನು 8 ಲಕ್ಷ ರೈತರಿಗೆ ವಿತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ನಾಡಿಗೆ ಕರ್ನಾಟಕ ವೆಂದು ನಾಮಕಾರಣ ಮಾಡುವಲ್ಲಿ ಕೆ.ಎಚ್.ಪಾಟೀಲ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.70-80ರ ಕಾಲಘಟ್ಟದ ರಾಜ ಕಾರಣ ಇಂದಿನ ಅವಶ್ಯಕತೆ ಯಾಗಿದ್ದು, ತಾವು ಪ್ರತಿನಿಧಿಸುವ ಖಾತೆ ಯಲ್ಲಿ ಪರಿಣಾಮಕಾರಿ ಬದಲಾವಣೆ ತಂದು ಜನತೆಗೆ ನೆರವಾಗುವ ಮನೋಭಾವ ರಾಜಕಾರಣಿ ಗಳದ್ದಾಗಬೇಕಿದೆ ಎಂದರು.ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವಿಧಾನಸಭೆಗಳು ಬಸವಣ್ಣನವರು ಕಟ್ಟಿದ ಅನುಭವ ಮಂಟಪವಾಗದೇ, ದುರ್ವ ವ್ಯಸನಿ, ದುರಾಚಾರಿಗಳ ತವ ರುಮನೆಯಾಗಿದೆ. ಹಿಂದಿನ ವಿಧಾನ ಸಭೆಗಳು ಮಾದರಿಯಾಗಿ ದ್ದವು. ಹಾಗಾಗಿ ರಾಜಕಾರಣಿಗಳು ವಿಧಾನ ಸಭೆಯ ಘನತೆ, ಗೌರವವನ್ನು ಕಾಪಾ ಡಬೇಕು ಎಂದು ಕೆ.ಎಚ್. ಪಾಟೀಲ ಹಾಗೂ ತಮ್ಮ ಸಂಬಂಧ ವನ್ನು ಸ್ಮರಿಸಿದರು.ಸಚಿವ ಎಚ್.ಕೆ. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಟಿ.ಈಶ್ವರ ಮಾತ ನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ವಾಸಣ್ಣ ಕುರಡಗಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.