ಗುರುವಾರ , ಜೂನ್ 17, 2021
22 °C

‘ಕೇಜ್ರಿವಾಲ್‌ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಾಣಕ್ಯ ಜನ ಗಣ ಮನ ಸಂಘ­ಟನೆಯು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿ­ವಾಲ್‌ ಅವರಿಗೆ 49 ಪ್ರಶ್ನೆಗಳ ಪಟ್ಟಿ­ಯನ್ನು  ಬಿಡುಗಡೆ ಮಾಡಿದೆ.ಈ ಕುರಿತು ಸೋಮವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿದ ಸಂಘ­ಟ­ನೆಯ ರಾಷ್ಟ್ರೀಯ ಸಂಚಾಲಕ ಎಂ.­ವಾಸು­ದೇವರಾವ್‌ ಕಶ್ಯಪ್‌, ‘ಭ್ರಷ್ಟಾ­ಚಾ­ರ­­ವನ್ನು ದೇಶದಿಂದಲೇ ಪೊರಕೆ­ಯಿಂ­ದ ಗುಡಿಸಿ ಹಾಕುತ್ತೇವೆ ಎಂದು ಹೇಳಿದ ಕೇಜ್ರಿವಾಲ್‌ ಅವರೇ ಭ್ರಷ್ಟಾ­ಚಾರ­­ದಲ್ಲಿ ತೊಡಗಿ­ದ್ದಾರೆ’ ಎಂದು ಆರೋಪಿಸಿದರು.‘ಬೆಂಗಳೂರಿನಲ್ಲಿ ಕೇಜ್ರಿವಾಲ್‌ ಅವರ ಜತೆಗೆ ಊಟ ಮಾಡಲು ₨ 20,000 ನಿಗದಿಪಡಿಸಲಾಗಿತ್ತು.  ಇದೂ ಒಂದು ರೀತಿ­ಯಲ್ಲಿ ಸಾರ್ವಜನಿಕರನ್ನು ಸುಲಿ­ಯುವ ತಂತ್ರವೇ ಆಗಿದೆ.  ಅಲ್ಲಿ ಜನ­ಸಾಮಾ­ನ್ಯರು ಭಾಗವಹಿಸಲು ಸಾಧ್ಯ­ವಾಗ­ಲಿಲ್ಲ. ಹಣ ಇರುವವರು ಮಾತ್ರ ಭಾಗ­ವಹಿಸಲು ಸಾಧ್ಯವಾಗಿತ್ತು. ಇದು ಜನ­ಸಾಮಾನ್ಯರನ್ನು ಕಡೆಗಣಿಸುವ ತಂತ್ರ­ವಾಗಿದೆ’ ಎಂದು ಹೇಳಿದರು.‘ದೆಹಲಿ­ಯಲ್ಲಿ ಸರ್ಕಾರ ರಚನೆ ಮಾಡಿ, ಅಲ್ಲಿ ಸರಿಯಾಗಿ ಆಡಳಿತವನ್ನು ನಡೆ­ಸದೆ, ರಾಜೀನಾಮೆ ನೀಡಿ, ಈಗ ಲೋಕಸಭೆ ಚುನಾವಣೆಯ ಸ್ಪರ್ಧೆಯಲ್ಲಿ­ದ್ದಾರೆ. ಇದು ಅವರ ಅಧಿಕಾರದ ಆಸೆ­ಯನ್ನು ತೋರಿಸುತ್ತದೆ’ ಎಂದರು.‘ಐಶಾರಾಮಿ ಜೀವನ ಬೇಡವೆಂದ­ವರು, ದೆಹಲಿಯಲ್ಲಿ ಮುಖ್ಯಮಂತ್ರಿ­ಯಾಗಿ­ದ್ದಾಗ ನೀಡಿದ್ದ ಬಂಗಲೆಯನ್ನು ಇನ್ನೂ ಖಾಲಿಮಾಡಿಲ್ಲ. ಇದರಿಂದ, ಐಶಾ­ರಾಮಿ ಜೀವನ, ಹಣ, ಅಧಿಕಾರದ ಹಿಂದೆ ಕೇಜ್ರಿವಾಲ್‌ ಅವರು ಓಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.